ಮಂಗಳೂರು : ಕೆನಡಾದ ಡೆಲ್ಟಾ ಮಹಾ ನಗರ ಪಾಲಿಕೆಯ ಮೇಯರ್ ಲೂಯಿಸ್ ಇ.ಜಾಕ್ಸನ್ ತನ್ನ ನಿಯೋಗದೊಂದಿಗೆ ಸೋಮವಾರ ನಗರಕ್ಕೆ ಭೇಟಿ ನೀಡಿದ್ದಾರೆ. ಮಂಗಳೂರು ಮಹಾ ನಗರ ಪಾಲಿಕೆ ಯೊಂದಿಗೆ ಹೆಚ್ಚಿನ ಬಾಂಧವ್ಯ ಹೊಂದಲು ಮತ್ತು ಮಹಾನಗರ ಪಾಲಿಕೆಯ ಅಭಿವೃದ್ದಿ ಕಾರ್ಯಗಳ ಅಧ್ಯಯನಕ್ಕೆ ಈ ತಂಡ ನಗರಕ್ಕೆ ಭೇಟಿ ನೀಡಿದೆ.
ನಿಯೋಗದಲ್ಲಿ ಮೇಯರ್ ಸಹಿತ ಅಲ್ಲಿನ ಸಿಇಒ ಜಾರ್ಜ್ ವಿ. ಹಾರ್ವೆ, ಆಡಳಿತ ವ್ಯವಸ್ಥಾಪಕಿ ಮಂಜತ್ ಕೈಲಾ ಮತ್ತಿತರರು ಇದ್ದರು. ಇಂದು ಬೆಳಿಗ್ಗೆ ಮಂಗಳೂರು ಮಹಾನಗರ ಪಾಲಿಕೆಯ ಸಭೆಯಲ್ಲಿ ಭಾಗವಹಿಸಿದ ನಿಯೋಗವು ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿ ಮಲೇರಿಯ, ಪಾರ್ಕಿಂಗ್ ವ್ಯವಸ್ಥೆ, ತ್ಯಜಗ ವಿಲೇವಾರಿ, ಕಟ್ಟಡ ನಿರ್ಮಾಣ ವ್ಯವಸ್ಥೆ, ಶಿಕ್ಷಣ, ಕಲೆ- ಸಂಸ್ಕೃತಿ, ಪ್ರವಾಸೋದ್ಯಮ, ಕಾರ್ಯಕ್ರಮಗಳ ಅನುಷ್ಟಾನ ಕುರಿತು ಒಡಂಬಡಿಕೆಗಳ ಒಪ್ಪಂದಕ್ಕೆ ಸಹಿಹಾಕಿ ಮೇಯರ್ ಗಳು ಒಪ್ಪಂದಗಳನ್ನು ಬಲಾಯಿಸಿಕೊಂಡರು.
ನಗರ ಪಾಲಿಕೆ ಆಯುಕ್ತ ಕೆ.ಏನ್. ವಿಜಯಪ್ರಕಾಶ್ ಮಾತನಾಡಿ ಮಂಗಳೂರಿನ ಸಾಂಸ್ಕೃತಿಕ ಹಾಗೂ ಚಾರಿತ್ರಿಕ ವಿಷಯಗಳ ಬಗ್ಗೆ ಕೆನಡಾದ ಅತಿಥಿಗಳಿಗೆ ಮನವರಿಕೆ ಮಾಡಿದರು. ಮಂಗಳೂರು ನಗರ ಪಾಲಿಕೆ ಶುಚಿತ್ವ ದಲ್ಲಿ ವಿಶ್ವದಲ್ಲೇ ೮ ನೆ ಸ್ಥಾನ ಪಡೆದಿದೆ. ಮಂಗಳಾ ಕಾರ್ನಿಶ್ ಹಾಗೂ ರೋಪ್ ವೇ ಯಂತಹ ಮಹಾನ್ ಯೋಜನೆಗಳು ನಗರಕ್ಕೆ ಬರಲಿವೆ ಎಂದರು.
ಡೆಲ್ಟಾ ನಿಯೋಗದೊಂದಿಗಿನ ಈ ಒಡಬಂಡಿಕೆಯ ಒಪ್ಪಂದದಲ್ಲಿ ಮನಾಪ ಮೇಯರ್ ರಜನಿ ದುಗ್ಗಣ್ಣ, ಉಪ ಮೇಯರ್ ರಾಜೇಂದ್ರ ಕುಮಾರ್, ಮನಾಪ ಅಯುಕ್ತ ಡಾ| ಎನ್ ವಿಜಯ್ ಪ್ರಕಾಶ್, ವಿಪಕ್ಷ ನಾಯಕ ಡಿ.ಕೆ.ಆಶೋಕ್ ಕುಮಾರ್ ಹಾಗೂ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಮನಾಪ ಸದಸ್ಯರು, ಅಧಿಕಾರಿಗಳು ಭಾಗವಹಿಸಿದ್ದರು.
Click this button or press Ctrl+G to toggle between Kannada and English
December 7th, 2011 at 04:07:27
sAdTwl uwyxeakaxqzc, [url=http://uvzospruvpkd.com/]uvzospruvpkd[/url], [link=http://ghcvwkrmwlkr.com/]ghcvwkrmwlkr[/link], http://oznjmawytaps.com/