ಯೋಗೀಶ್ವರ್‌, ರಾಜೂಗೌಡ ಕಾಂಗ್ರೆಸ್ ಸೇರ್ಪಡೆ, ಕಾಂಗ್ರೆಸ್ ಹೈಕಮಾಂಡ್ ತಡೆ

5:43 PM, Saturday, February 23rd, 2013
Share
1 Star2 Stars3 Stars4 Stars5 Stars
(No Ratings Yet)
Loading...

CP Yogishvar & Raju Gauwdaಬೆಂಗಳೂರು : ರಾಜ್ಯ ಮಾಜಿ ಅರಣ್ಯ ಸಚಿವ ಸಿ.ಪಿ. ಯೋಗೀಶ್ವರ್‌ ಹಾಗೂ ರಾಜೂಗೌಡ ತಮ್ಮ ಬಿಜೆಪಿ ಪಕ್ಷದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.  ಸಿ.ಪಿ. ಯೋಗೀಶ್ವರ್‌ ಮಡಿಕೇರಿಯಲ್ಲಿ  ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಅವರಿಗೆ ರಾಜೀನಾಮೆ ಸಲ್ಲಿಸುವ ಮೂಲಕ ಅವರು ತಮ್ಮ ಬಿ.ಜೆ.ಪಿ.ಯೊಂದಿಗಿನ ನಂಟನ್ನು ಕಡಿದುಕೊಂಡಿದ್ದಾರೆ.

ಯೋಗೇಶ್ವರ್‌ ಹಾಗೂ ರಾಜೂಗೌಡ ರಾಜ್ಯ ಕಾಂಗ್ರೆಸ್‌ ನಾಯಕರ ನಿರ್ದೇಶನದಂತೆ ಬಿಜೆಪಿ ಗೆ ರಾಜಿನಾಮೆ ನೀಡಿ ಕಾಂಗ್ರಸ್ ಗೆ ಸೇರುವ ತವಕದಲ್ಲಿದ್ದಾರೆ ಇನ್ನೊಂದೆಡೆ ಕಾಂಗ್ರೆಸ್‌ ಹೈಕಮಾಂಡ್‌ ಮಾತ್ರ ಇದಕ್ಕೆ ಒಪ್ಪಿಗೆ ನೀಡಿಲ್ಲ. ರಾಜ್ಯ ಕಾಂಗ್ರೆಸ್ ನಾಯಕರನ್ನು ನಂಬಿ ರಾಜಿನಾಮೆ ನೀಡಿರುವ ಇವರಿಬ್ಬರು ಕಾಂಗ್ರೆಸ್‌ ಹೈಕಮಾಂಡ್‌ ನಿರ್ಧಾರದಿಂದ ಪೇಚಿಗೆ ಸಿಲುಕಿದ್ದಾರೆ. ಇನ್ನೊಂದೆಡೆ ಯೋಗೇಶ್ವರ್‌ ಹಾಗೂ ರಾಜೂಗೌಡ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ತವಕ  ರಾಜ್ಯ ಕಾಂಗ್ರೆಸ್‌ ನಾಯಕರಿಗಿದ್ದರು, ಹೈಕಮಾಂಡ್  ನ ನಿರ್ಧಾರದಿಂದಾಗಿ ಇವರನ್ನು  ಪಕ್ಷಕ್ಕೆ ಸೇರಿಸಿಕೊಳ್ಳುವ ಸ್ಥಿತಿಯಲ್ಲಿ ಪಕ್ಷದ ರಾಜ್ಯ ನಾಯಕರು ಇಲ್ಲ.

ಇನ್ನೊಂದೆಡೆ ಗುರುವಾರವಷ್ಟೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಶುಕ್ರವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದ ರಾಜೂಗೌಡ ಅವರು ಕಾಂಗ್ರೆಸ್‌ ಹೈಕಮಾಂಡ್‌ ಉಲ್ಟಾ ಹೊಡೆದಿದ್ದರ ಸೂಚನೆ ದೊರೆಯುತ್ತಿದ್ದಂತೆಯೇ ರಾಜೀನಾಮೆ ನೀಡುವ ನಿರ್ಧಾರವನ್ನು ತಡೆಹಿಡಿದಿದ್ದಾರೆ. ಶುಕ್ರವಾರ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ನಂತರ ಯೋಗೇಶ್ವರ್‌ ಅವರೊಂದಿಗೆ ತೆರಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಯೋಚನೆಯನ್ನು ಬದಲಿಸಿ ಹಿನ್ನಡೆದಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English