ಪಂಪ್‌ವೆಲ್ ಬಳಿ ಕೆ.ಎಸ್.ಆರ್.ಟಿ.ಸಿ ಬಸ್ ಅಫಘಾತ ಪಾದಾಚಾರಿ ಸಹಿತ ಇಬ್ಬರು ಧಾರುಣ ಸಾವು, ಒರ್ವ ಗ್ಂಬೀರ

12:13 AM, Sunday, February 24th, 2013
Share
1 Star2 Stars3 Stars4 Stars5 Stars
(5 rating, 4 votes)
Loading...

KSRTC Bus Accidentಮಂಗಳೂರು : ನಗರದ ಪಂಪ್‌ವೆಲ್‌ ಬಳಿ ಶನಿವಾರ ಸಂಜೆ ಮಂಗಳೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು ಹಲವು ವಾಹನಗಳು ಜಖಂ ಘಟನೆ  ಸಂಭವಿಸಿದೆ.

ಮಂಗಳೂರಿನಿಂದ ಹಾಸನಕ್ಕೆ ಪಂಪ್‌ವೆಲ್‌ ಮಾರ್ಗವಾಗಿ ಹೊರಟ್ಟಿದ್ದ ಕೆ.ಎಸ್.ಆರ್.ಟಿ.ಸಿ ಬಸ್‌ನ ಚಾಲಕ  ಇನ್ನೊಂದು ವಾಹನವನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಮುಂದಿನಿಂದ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಾಗ ಬೈಕ್ ಸವಾರ ಸ್ಥಳದಲ್ಲೆ ಮೃತ ಪಟ್ಟ, ನಿಯಂತ್ರಣ ಕಳೆದುಕೊಂಡ ಚಾಲಕ ಪಕ್ಕದಲ್ಲೇ ಇದ್ದ ಹಲವು ವಾಹನಗಳಿಗೆ ಹಾಗೂ ಪಾದಾಚಾರಿಯೊಬ್ಬರಿಗೆ ಡಿಕ್ಕಿ ಹೊಡೆದಿದ್ದಾನೆ.

ಘಟನೆಯಲ್ಲಿ ಮೃತ ದುರ್ದೈವಿಗಳನ್ನು ಬಜಲ್‌ ನಿವಾಸಿ ರಿತೇಶ್ ಮೊಂತೆರೋ (28) ಹಾಗೂ ಬಿ.ಸಿ.ರೋಡ್ ನಿವಾಸಿ ರಾಜೇಶ್ (52) ಎಂದು ಗುರುತಿಸಲಾಗಿದೆ.

ಬಸ್ ಡಿಕ್ಕಿ ಹೊಡೆದ ಯಾಕ್ಟೀವ್ ವಾಹನದ ಸವಾರರೊಬ್ಬರಿಗೆ ಗಂಭೀರ ಸ್ವರೂಪದ ಏಟು ತಗಲಿದ್ದು, ಅವರನ್ನು ತಕ್ಷಣ ಸಾರ್ವಜನಿಕರು ಆಸ್ಪತ್ರೆಗೆ ದಾಖಾಲಿಸಿದ್ದಾರೆ.

ಕಂಕನಾಡಿ ಪೊಲೀಸರು ಬಸ್ ಚಾಲಕನನ್ನು ವಶಕ್ಕೆ ಪಡೆದು,  ಕಂಕನಾಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

KSRTC Bus Accident

ksrtc Bus Accident

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English