ಮಂಗಳೂರು ವಿಶ್ವವಿದ್ಯಾನಿಲಯದ 31ನೇ ಘಟಿಕೋತ್ಸವದ ಅಂಗವಾಗಿ ನಡೆದ ಡಾಕ್ಟರೇಟ್ ಪದವಿ ಪ್ರಧಾನ ಸಮಾರಂಭ

12:22 PM, Monday, February 25th, 2013
Share
1 Star2 Stars3 Stars4 Stars5 Stars
(No Ratings Yet)
Loading...

Mangalore University ಮಂಗಳೂರು : ಶನಿವಾರ ಮಂಗಳೂರು ವಿಶ್ವವಿದ್ಯಾನಿಲಯದ 31ನೇ ಘಟಿಕೋತ್ಸವದ ಅಂಗವಾಗಿ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಮಂಗಳಾ ಸಭಾಂಗಣದಲ್ಲಿ ರಾಜ್ಯಪಾಲ ಹಾಗೂ ವಿ.ವಿ.ಕುಲಾಧಿಪತಿ ಎಚ್.ಆರ್.ಭಾರದ್ವಾಜ್ ಅವರು ಹಿರಿಯ ಹಾಕಿ ಆಟಗಾರ ಎ,.ಬಿ.ಸುಬ್ಬಯ್ಯ, ಖ್ಯಾತ ಸಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಹಾಗೂ ಖ್ಯಾತ ಸಾಹಿತಿ ಚಂದ್ರಶೇಖರ ಕಂಬಾರ ಅವರಿಗೆ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಹೊಸದಿಲ್ಲಿಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಕಾರ್ಯದರ್ಶಿ ರಾಮಸ್ವಾಮಿ, ದೇಶದಲ್ಲಿರುವ 600 ವಿಶ್ವ ವಿದ್ಯಾನಿಲಯಗಳ ಪೈಕಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಗೆ ೪೪ ವಿ.ವಿ.ಗಳು ಆಯ್ಕೆಯಾಗಿದ್ದು, ಮಂಗಳೂರು ವಿ.ವಿ. ಇದರಲ್ಲಿ ಒಂದು ಎಂದು ಅವರು ಅಭಿನಂಧಿಸಿದರು.

ಭಾರತದಲ್ಲಿ 15ರಿಂದ 20 ವರ್ಷ ವಯಸ್ಸಿನ ಯುವಕರಿಗೆ ಸರಿಯಾದ ಹಾಗೂ ಆರೋಗ್ಯಕರವಾದ ಶಿಕ್ಷಣವನ್ನು ನೀಡುವುದರಿಂದ ನಮ್ಮ ದೇಶದ ಭವಿಷ್ಯವನ್ನು ಸರಿಯಾದ ರೀತಿಯಲ್ಲಿ ಕಟ್ಟಬಹುದು. ವಿದ್ಯಾಭ್ಯಾಸದಿಂದ ಮಾನವನಲ್ಲಿ ಜಾಗೃತವಾಗಿರದ ಶಕ್ತಿಯನ್ನು ಜಾಗೃತಗೊಳಿಸಬಹುದು. ಉತ್ತಮ ವಿದ್ಯಾಭ್ಯಾಸ ಹೊಂದಿದ ವ್ಯಕ್ತಿಯು ಸಮಾಜದಲ್ಲಿ ಶಾಂತಿಯುತ ಹಾಗೂ ಉತ್ತಮ ವಾತಾವರಣವನ್ನು ಉಂಟು ಮಾಡಬಲ್ಲ. ವಿಧ್ಯಾಭ್ಯಾಸ ಅಥವಾ ಕಲಿಕೆಯು ಅಂತ್ಯವನ್ನು ಪಡೆಯದೆ ನಮ್ಮ ಜೀವನದುದ್ದಕ್ಕೂ ನಡೆಯುವ ಪ್ರಕ್ರಿಯೆಯಾಗಿದೆ. ವಿದ್ಯಾಭ್ಯಾಸವು ವ್ಯಕ್ತಿಯ ಗುಣವನ್ನು ಉತ್ತಮಗೊಳಿಸಿ ಅವನನ್ನು ಬಲಶಾಲಿಯನ್ನಾಗಿ ಮಾಡಬೇಕೇ ಹೊರತು ಇತರರೊಂದಿಗೆ ಸ್ಪರ್ಧಿಸುವುದು ಮಾತ್ರ ಅದರ ಮೂಲ ಉದ್ದೇಶವಾಗಬಾರದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ರಾಜ್ಯಪಾಲರು ೮೪ ಮಂದಿಗೆ ಡಾಕ್ಟರೇಟ್, 7 ಮಂದಿಗೆ ಎಂ.ಪಿಲ್, 36 ಮಂದಿಗೆ ಚಿನ್ನಡ ಪದಕ ಹಾಗೂ ೫೫ ಮಂದಿಗೆ ನಗದು ಬಹುಮಾನ ಹಾಗು 60  ಮಂದಿಗೆ ರ್‍ಯಾಂಕ್ ಗಳನ್ನು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಟಿ.ಸಿ.ಶಿವಶಂಕರ ಮೂರ್ತಿ, ಕುಲಸಚಿವ ಪ್ರೊ.ಯೆಡಪಡಿತ್ತಾಯ ಹಾಗೂ ಇತರರು ಉಪಸ್ಥಿತರಿದ್ದರು

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English