ಮಂಗಳೂರು :ಈಗಾಗಲೇ ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಗೆ ವಿವಿಧ ಪಕ್ಷಗಳ ಅಭ್ಯರ್ಥಿ ಗಳು ನಾಮಪತ್ರ ಸಲ್ಲಿಸಿರುವ ಹಿನ್ನಲೆಯಲ್ಲೇ ಇಂದು ಪಾಲಿಕೆ ಕಚೇರಿಯಲ್ಲಿ ಜೆಪ್ಪು ವಾರ್ಡ್ ನಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಅಪ್ಪಿ ಅವರ ನಾಮಪತ್ರ ತಿರಸ್ಕರಿಸುವಂತೆ ಜೆಡಿಎಸ್ ಕಾರ್ಯಕರ್ತರು ಚುನಾವಣಾಧಿಕಾರಿ ಯವರನ್ನು ಒತ್ತಾಯಿಸಿದ ಘಟನೆ ನಡೆಯಿತು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಪ್ಪಿಯವರು ಸರ್ಕಾರಿ ಸೇವೆಯಲ್ಲಿದ್ದರು ಹಾಗೂ ಉಚ್ಚಾಟಿತರಾಗಿರುವ ಬಗ್ಗೆ ತಮ್ಮಲ್ಲಿ ದಾಖಲೆಗಲಿದ್ದು, ಈ ಬಗ್ಗೆ ಅಪ್ಪಿಯವರು ನಾಮ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಎಲ್ಲಿಯೂ ಪ್ರಸ್ತಾಪವನ್ನು ಮಾಡಿಲ್ಲ ಆದ್ದರಿಂದ ಈ ಬಗ್ಗೆ ಸರಿಯಾದ ವಿಚಾರಣೆ ನಡೆಸಿ ನಾಮಪತ್ರವನ್ನು ಪುರಸ್ಕರಿಸಬೇಕು ಇಲ್ಲದೇ ತಿರಸ್ಕರಿಸಬೇಕು ಎಂದು ಜೆಡಿಎಸ್ ಪಕ್ಷದ ಕಾರ್ಯಕರ್ತರು ಸಮರ್ಥಿಸಿಕೊಂಡರೆ ಇನ್ನೊಂದೆಡೆ ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದ್ದು ಅನಗತ್ಯ ವಾದವನ್ನು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ಸ್ ನವರು ವಾದಿಸಿದರು, ಈ ರೀತಿ ಎರಡೂ ಪಕ್ಷಗಳ ನಾಯಕರು ಚುನಾವಣಾಧಿಕಾರಿಯಲ್ಲಿ ತಮ್ಮ ತಮ್ಮನ್ನು ಸಮರ್ಥಿಸತೊಡಗಿದಾಗ ಈ ಬಗ್ಗೆ ಪರಿಶೀಲಿಸಿದ ಚುನಾವಣಾಧಿಕಾರಿ ಈ ಪ್ರಕರಣವು ತನ್ನ ವ್ಯಾಪ್ತಿಯೊಳಗೆ ಬಾರದೇ ಇದ್ದು ಇದೀಗ ನಾಮತ್ರವನ್ನು ಪುರಸ್ಕರಿಸುವುದಾಗಿ ತಿಳಿಸಿ ಗೊಂದಲಕ್ಕೆ ಅಂತ್ಯ ಹಾಡಿದರು.
ಈ ಬಗೆಗೆ ಕಾಂಗ್ರೆಸ್ ನಾಯಕ ಐವನ್ ಡಿಸೋಜ ಮಾತನಾಡಿ, ಅಪ್ಪಿಯವರು ಸರ್ಕಾರಿ ಸೇವೆಯಲ್ಲಿದ್ದರು ಎಂಬುದು ಸತ್ಯಕ್ಕೆ ದೂರವಾದ ಮಾಹಿತಿಯಾಗಿದ್ದು ಜೆಡಿಎಸ್ ನವರು ಈ ಬಗ್ಗೆ ಅನಗತ್ಯ ವಿವಾದವನ್ನು ಸೃಷ್ಟಿಮಾಡಿದ್ದಾರೆ. ಅವರು ತಂದಿರುವ ದಾಖಲೆಗಳಲ್ಲಿ ಅಪ್ಪಿಲತ ಎಂಬ ಹೆಸರಿದ್ದು, ಇದು ಪ್ರಸ್ತುತ ಅಭ್ಯರ್ಥಿ ಅಪ್ಪಿಯವರದಲ್ಲ ಎಂದರು. ಇದಕ್ಕೆ ಪ್ರತಿಯಾಗಿ ಜೆಡಿಎಸ್ ಮುಖಂಡ ಎಂ.ಜಿ.ಹೆಗ್ಡೆ ಪ್ರತಿಕ್ರಿಯಿಸಿ ಅಪ್ಪಿಯವರು ಸರ್ಕಾರಿ ಸೇವೆಯಲ್ಲಿದ್ದರು ಹಾಗೂ ಉಚ್ಚಾಟಿತರಾಗಿರುವ ಬಗ್ಗೆ ತಮ್ಮಲ್ಲಿ ದಾಖಲೆಗಳಿದ್ದು, ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದರು.
Click this button or press Ctrl+G to toggle between Kannada and English