ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸಬೇಕು : ವಿ. ಉಮೇಶ್‌

12:40 PM, Tuesday, February 26th, 2013
Share
1 Star2 Stars3 Stars4 Stars5 Stars
(No Ratings Yet)
Loading...

SHD Principal Secretary V Umeshಮಂಗಳೂರು : ಹೈದರಾಬಾದ್‌ ದಾಳಿ ಹಿನ್ನೆಲೆ ಮತ್ತು ಚುನಾವಣಾ ಸಮಯದಲ್ಲಿ ರಾಷ್ಟ್ರೀಯ ಭದ್ರತೆ ನೀಡಬೇಕಿರುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ, ಸಲಹೆ ನೀಡುವ ಸಲುವಾಗಿ  ಸೋಮವಾರ ರಾಜ್ಯ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ವಿ. ಉಮೇಶ್‌  ರ ನೇತೃತ್ವದಲ್ಲಿ  ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರಕನ್ನಡದ ಜಿಲ್ಲಾ ಮುಖ್ಯಸ್ಥರು, ಪೊಲೀಸ್‌, ಮೀನುಗಾರಿಕೆ ಮತ್ತು ಪ್ರವಾಸೋದ್ಯಮ, ಕೋಸ್ಟ್‌ಗಾರ್ಡ್‌ ಅಧಿಕಾರಿಗಳ ಸಭೆ ನಡೆಯಿತು.

ಚುನಾವಣೆ ಸಂದರ್ಭ ದೇಶದ ಭದ್ರತೆ ದೃಷ್ಟಿಯಿಂದ ಪೊಲೀಸ್‌, ಮೀನುಗಾರಿಕೆ ಮತ್ತು  ಜಿಲ್ಲಾಡಳಿತ ಹಾಗೂ  ಪ್ರವಾಸೋದ್ಯಮ ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸಬೇಕು, ಸೂಕ್ತ ಸಮಯ ಸಮಗ್ರ ಮಾಹಿತಿಯೊಂದಿಗೆ ಸದಾ ಸನ್ನದ್ಧರಾಗಿರುವುದರಿಂದ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯ ಎಂದು ಅವರು ಹೇಳಿದರು.

ಕರಾವಳಿ ತೀರಗಳ ಮೂಲಕ ಅಕ್ರಮ ಪ್ರವೇಶ, ಅಕ್ರಮ ಶಸ್ತ್ರಾಸ್ತ್ರ, ಮಾದಕ ವಸ್ತುಗಳ ಸಾಗಾಟ, ಮಾನವ ಕಳ್ಳಸಾಗಾಟ ತಡೆಯಲು ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಾಚರಿಸುವಂತೆ ಸಲಹೆ ಮಾಡಿದರು. ರಕ್ಷಣಾ ವ್ಯವಸ್ಥೆಗೆ ಮಾರಕವೆನಿಸುವ ಯಾವುದೇ ರಾಜಿಗೆ ರಾಜ್ಯದಲ್ಲಿ ಅವಕಾಶವಿಲ್ಲ, ಪ್ರವಾಸೋದ್ಯಮ ಇಲಾಖೆ ಬೀಚ್‌ಗಳ ನಿರ್ವಹಣೆ ಮತ್ತು ಅಭಿವೃದ್ಧಿಯನ್ನು ಖಾಸಗಿಯವರಿಗೆ ವಹಿಸಿ ಮೌನವಾಗಿರದೆ ಅಲ್ಲಿ ನಡೆಯುತ್ತಿರುವ ಎಲ್ಲ ಚಟುವಟಿಕೆಗಳ ಬಗ್ಗೆ ಎಚ್ಚರಿಕೆ ವಹಿಸಿ, ಮೇಲ್ವಿಚಾರಣೆ ನಡೆಸಿ ಶರತ್ತುಗಳು ಪಾಲನೆಯಾಗುತ್ತಿರುವುದನ್ನು ಖಾತರಿಪಡಿಸಿಕೊಳ್ಳಬೇಕು. ಪ್ರವಾಸೋದ್ಯಮ ಅಭಿವೃದ್ಧಿ ಹೆಸರಿನಲ್ಲಿ ಪರವಾನಿಗೆಯಿಲ್ಲದೆ ವಾಟರ್‌ ನ್ಪೋರ್ಟ್ಸ್, ಸ್ಕೂéಬಾ ಡೈವಿಂಗ್‌ ನಡೆಸುತ್ತಿರುವುದು, ತರಬೇತಿ ನೀಡುತ್ತಿರುವುದು ಗಮನಕ್ಕೆ ಬಂದರೆ ಕ್ರಮಕೈಗೊಳ್ಳಿ ಎಂದು ಗೃಹ ಇಲಾಖೆ ಮುಖ್ಯ ಕಾರ್ಯದರ್ಶಿ ವಿ. ಉಮೇಶ್‌ ಸೂಚಿಸಿದರು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎನ್‌. ಪ್ರಕಾಶ್‌ , ಕರಾವಳಿ ರಕ್ಷಣಾ ಪಡೆ ಮತ್ತು ಆಂತರಿಕ ಭದ್ರತೆಯ ಐಜಿಪಿ ಭಾಸ್ಕರ್‌ ರಾವ್‌, ಪಶ್ಚಿಮ ವಲಯ ಐಜಿಪಿ ಪ್ರತಾಪ್‌ ರೆಡ್ಡಿ, ಪೊಲೀಸ್‌ ಕಮಿಷನರ್‌ ಮನೀಷ್‌ ಕರ್ಬಿಕರ್‌, ಎನ್‌ಎಂಪಿಟಿಯ ಮೂರ್ತಿ, ಕಾರವಾರ ಅಡಿಷನಲ್‌ ಎಸ್‌ಪಿ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಭಿಷೇಕ್‌ ಗೋಯಲ್‌, ಕೋಸ್ಟ್‌ಗಾರ್ಡ್‌ ಐಜಿಪಿ ರಾಜೇಂದ್ರ ಸಿಂಗ್‌, ಕಮಾಂಡೆಂಟ್‌ ಸಫಲ್‌ ಸಿಂಗ್‌, ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಸುರೇಶ್‌ ಕುಮಾರ್‌, ಪ್ರವಾಸೋದ್ಯಮ ಇಲಾಖಾಧಿಕಾರಿ ಜಿತೇಂದ್ರ ಅವರನ್ನೊಳಗೊಂಡಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English