ಕಾಸರಗೋಡು : ಎಂಡೋಸಲ್ಫಾನ್ ಸಂತ್ರಸ್ತ ಜನಪರ ಒಕ್ಕೂಟ ಹೊಸಬಸ್ಸು ನಿಲ್ದಾಣ ಪರಿಸರದ ಸಹಿವೃಕ್ಷದಡಿಯಲ್ಲಿ ಕಳೆದ ಎಂಟು ದಿನಗಳಿಂದ ಸತ್ಯಾಗ್ರಹ ನಡೆಸುತ್ತಿದ್ದಾರೆ. ಆದರೆ ಈವರೆಗೂ ಸರಕಾರ ಹಾಗೂ ಸರಕಾರದ ಯಾವೊಬ್ಬ ಅಧಿಕಾರಿಗಳು ಭೇಟಿ ನೀಡದೆ ತಟಸ್ಥ ವಾಗಿದ್ದು ಇದರಿಂದ ನೊಂದ ಪ್ರತಿಭಟನಾ ಕಾರರು ಇಂದು ರಸ್ತೆ ತಡೆಯ ಮೂಲಕ ತೀವ್ರ ಸ್ವರೂಪದ ಹೋರಾಟಕ್ಕೆ ಮುಂದಾಗಿದ್ದಾರೆ.
ಇಂದು ಬೆಳಗ್ಗೆ ನಗರದ ಹೊಸಬಸ್ಸು ನಿಲ್ದಾಣ ಪರಿಸರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂತ್ರಸ್ತ ವಲಯದ ಗೃಹಿಣಿಯರು ರಸ್ತೆ ತಡೆ ನಡೆಸಿದರು. ರಸ್ತೆ ತಡೆಯನ್ನು ಎಂಡೋಸಲ್ಫಾನ್ ಸಂತ್ರಸ್ತೆ ಮುನೀಶಾ ಉದ್ಘಾಟಿಸಿದರು. ಬೇಡಿಕೆ ಈಡೇರಿಕೆಗಾಗಿ ಕಳೆದ ಎಂಟು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದೇವೆ. ಆದರೆ ಸರ್ಕಾರ ತಮಗೆ ಸಂಬಂಧವೇ ಇಲ್ಲವೆಂಬಂತೆ ಸೂಕ್ತ ಗಮನ ಹರಿಸದೇ ತಮ್ಮಷ್ಟಕ್ಕೆ ತಾವು ಇದ್ದು ಬಿಟ್ಟಿದ್ದಾರೆ. ಇನ್ನು ಮುಂದಕ್ಕೂ ಇದೇ ರೀತಿ ಮುಂದುವರಿದರೆ ಹೋರಾಟ ಮತ್ತಷ್ಟು ತೀವ್ರಗೊಳಿಸಲು ಒಕ್ಕೂಟ ತೀರ್ಮಾನಿಸಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಹೋರಾಟ ಸಮಿತಿಯ ಸಂಚಾಲಕ ಅಂಬತ್ತರ ಕುಂಞ ಕೃಷ್ಣನ್, ಡಾ.ಸುರೇಂದ್ರನಾಥ್, ಟಿ.ಶೋಭಾನ, ಎನ್.ಮುರಳೀಧರನ್, ಪಿ.ನಳಿನಿ ಮೊದಲಾದವರು ಮಾತನಾಡಿದರು.
Click this button or press Ctrl+G to toggle between Kannada and English