ಮಂಗಳೂರು : ಕಾಂಗ್ರೆಸ್ ಅಭ್ಯರ್ಥಿ ಗಣೇಶ್ ಪೂಜಾರಿ ಪಾಲಿಕೆಯ ಕಟ್ಟಡದಲ್ಲಿ ವಾಣಿಜ್ಯ ಮಳಿಗೆಯನ್ನು ಬಾಡಿಗೆ ಪಡೆದು ಬಾಡಿಗೆಯನ್ನು ಹಲವು ತಿಂಗಳುಗಳಿಂದ ಪಾವತಿಸುತ್ತಿಲ್ಲ ಹಾಗಾಗಿ ಅವರು ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಬಾರದು ಹಾಗೂ ನಾಮ ಪತ್ರವನ್ನು ತಿರಸ್ಕರಿಸಬೇಕು ಎಂದು ಸೋಮವಾರ ಬಿಜೆಪಿಯ ಅಭ್ಯರ್ಥಿ ನವೀನಚಂದ್ರ ಚುನಾವಣಾಧಿಕಾರಿಯವರಲ್ಲಿ ಕೇಳಿಕೊಂಡಿದ್ದರು. ಇದಕ್ಕೆ ಚುನಾವಣಾಧಿಕಾರಿಯು ಮಂಗಳವಾರ ಸರಿಯಾದ ದಾಖಲೆ ಪತ್ರಗಳನ್ನು ಸಲ್ಲಿಸುವಂತೆ ತಿಳಿಸಿದ್ದರು.
ಅದರಂತೆ ಇಂದು ಬೆಳಗ್ಗೆ ಬಿಜೆಪಿಯ ಅಭ್ಯರ್ಥಿ ನವೀನಚಂದ್ರ ಹಾಗೂ ಅವರ ಕಾನೂನು ಸಲಹೆಗಾರರು ಚುನಾವಣಾಧಿಕಾರಿಯವರ ಮುಂದೆ ದಾಖಲೆಗಳನ್ನು ಪ್ರಸ್ತುತ ಪಡಿಸಿದರು ಮತ್ತು ಕಾಂಗ್ರೆಸ್ ಅಭ್ಯರ್ಥಿಯವರು ಕೂಡ ಬಾಡಿಗೆ ಹಣವನ್ನು ಕಟ್ಟುವ ಬಗೆಗೆ ಚೆಕ್ ನ್ನು ಚುನಾವಣಾಧಿಕಾರಿಯವರಿಗೆ ನೀಡಿದರು ಎರಡೂ ದಾಖಲೆಗಳನ್ನು ಪರಿಶೀಲಿಸಿದ ಚುನಾವಣಾಧಿಕಾರಿಯವರು ಗಣೇಶ್ ಅವರಿಗೆ ಪಾಲಿಕೆಯಿಂದ ಬಾಡಿಗೆ ಕಟ್ಟದೇ ಇರುವ ಬಗ್ಗೆ ಯಾವುದೇ ನೊಟೀಸು ನೀಡದೇ ಇರುವುದು ಹಾಗೂ ಗಣೇಶ್ ಅವರು ಬಾಡಿಗೆಯನ್ನು ಚೆಕ್ಕುಗಳ ಮೂಲಕ ಪಾವತಿ ಮಾಡಿರುವುದರಿಂದ ಅವರ ನಾಮಪತ್ರವು ಸಿಂಧುವಾಗಿದೆ ಎಂದು ತಿಳಿಸಿ ನಾಮಪತ್ರವನ್ನು ಸ್ವೀಕೃತಗೊಳಿಸಿದರು.
Click this button or press Ctrl+G to toggle between Kannada and English