ಮೂಡುಬಿದಿರೆ : ದ.ಕ.ಜಿಲ್ಲೆಯ ಕಲ್ಲಮುಂಡ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಡ್ಡೋಡಿ ಗ್ರಾಮದಲ್ಲಿ ನಾಲ್ಕುಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಉಷ್ಣವಿದ್ಯುತ್ ಸ್ಥಾವರ ಸ್ಥಾಪಿಸಲುದ್ದೇಶಿಸಿರುವ ವಿಷಯ ಬಹಿರಂಗವಾಗಿದ್ದು, ಕೃಷಿ ಪ್ರಧಾನ ವಾದ ಈ ಪ್ರದೇಶದಲ್ಲಿ ಉಷ್ಣವಿದ್ಯುತ್ ಸ್ಥಾವರ ಸ್ಥಾಪನೆ ವಿರೋಧಿಸಿ ಈ ಪರಿಸರದ ಜನ ರಾಜಕೀಯೇತರ ಹೋರಾಟಕ್ಕೆ ಸಜ್ಜಾಗಿದ್ದಾರೆ.
ನಿಡ್ಡೋಡಿ ಉಷ್ಣವಿದ್ಯುತ್ ಸ್ಥಾವರ ಸ್ಥಾಪನೆಗೆ ಸುಮಾರು 4,000 ಎಕ್ರೆ ಜಾಗದ ಅಗತ್ಯತೆ ಇದೆ. ಶೇ. 85ರಷ್ಟು ಕೃಷಿಭೂಮಿಯೇ ಇರುವ ನಿಡ್ಡೋಡಿಯಲ್ಲಿ ಒಂದು ವೇಳೆ ಈ ಯೋಜನೆ ಜಾರಿಗೆ ಬಂದಲ್ಲಿ ತಲೆತಲಾಂತರಗಳಿಂದ ಕೃಷಿಯನ್ನೇ ನಂಬಿರುವ ಕುಟುಂಬಗಳಿದ್ದು ಈ ಯೋಜನೆಯಿಂದ ಇಲ್ಲಿನ ಕೃಷಿ ಸಂಪತ್ತೆಲ್ಲ ನಾಶವಾಗಿ, ಕೃಷಿಕರು, ಕೃಷಿ ಅವಲಂಬಿತ ಕಾರ್ಮಿಕ ಕುಟುಂಬಗಳು ಬೀದಿಪಾಲಾಗಲಿದ್ದು, ಭಾರೀ ನೀರಾಶ್ರಯವಿರುವ ಈ ಪ್ರದೇಶದ ಅಂತರ್ಜಲ ಮೂಲಗಳಿಗೆ ತೀವ್ರ ಧಕ್ಕೆ ಉಂಟಾಗಲಿದೆ. ಇದರಿಂದ ಈ ಭಾಗದ ಜನತೆ ಆತಂಕಿತರಾಗಿದ್ದಾರೆ.
ಆದ್ದರಿಂದ ಮಂಗಳವಾರ ಕಲ್ಲಮುಂಡ್ಕೂರಿನ ಮಾತಭೂಮಿ ಸಂರಕ್ಷಣಾ ಹೋರಾಟ ಸಮಿತಿಯ ನೇತತ್ವದಲ್ಲಿ ಮಂಗಳೂರಿನ ನಿಡ್ಡೋಡಿ ಕೊಲತ್ತಾರು ಪದವು ಪೂವಪ್ಪ ಗೌಡ ಅವರ ಕೃಷಿ ತೋಟದಲ್ಲಿ ಗ್ರಾಮಸ್ಥರು ಹಾಗೂ ಕೃಷಿಕರು ಸಭೆಸೇರಿ ಈ ಯೋಜನೆಯ ವಿರುದ್ಧ ಪ್ರತಿಭಟನೆ ನಡೆಸಿದರು. ಮತ್ತು ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿಸಿದರು. ಮೊದಲ ಹಂತವಾಗಿ ಈ ಯೋಜನೆಯನ್ನು ಕೆಬಿಡುವಂತೆ ಆಗ್ರಹಿಸಿ ತಹಸೀಲ್ದಾರ್ ಅವರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.
ಕಲ್ಲಮುಂಡ್ಕೂರು ಗ್ರಾ.ಪಂ. ಅಧ್ಯಕ್ಷ ಜೋಕಿಂ ಕೊರೆಯಾ ಅವರು ಮಾತನಾಡಿ, ‘2,553 ಎಕ್ರೆಯಷ್ಟು ವಿಸ್ತಾರವಾಗಿರುವ ನಿಡ್ಡೋಡಿಯ 85 ಶೇ. ಜಾಗ ಕೃಷಿಭೂಮಿಯಾಗಿದೆ. ಕೃಷಿ ಬದುಕಿಗೆ ಕೊಳ್ಳಿ ಇಡುವ ಈ ಯೋಜನೆಯನ್ನು ಕೊನೆ ಉಸಿರು ಇರುವ ತನಕ ವಿರೋಧಿಸುತ್ತೇವೆ’ ಎಂದರು.
ಕೃಷಿಕ ಭಾಸ್ಕರ ದೇವಸ್ಯ ಮಾತನಾಡಿ, ನಂದಿಕೂರು ಉಷ್ಣ ವಿದ್ಯುತ್ ಸ್ಥಾವರದಿಂದಾಗಿ ನೂರಾರು ಮಂದಿ ನಿರಾಶ್ರಿತರಾಗಿದ್ದು , ಈ ಯೋಜನೆ ಅನುಷ್ಠಾನಗೊಂಡಲ್ಲಿ ಈ ಭಾಗದ ಜನರು ನಿರಾಶ್ರಿತರಾಗಲಿದ್ದಾರೆ. ಇದು ನಿಡ್ಡೋಡಿಗೆ ಮಾತ್ರವಲ್ಲ ಈ ಜಿಲ್ಲೆಗೆ ಬರಬಾರದು. ಈ ಬಗ್ಗೆ ರಾಜಕೀಯೇತರ ಹೋರಾಟ ನಡೆಸಲಿದ್ದು ಜಿಲ್ಲೆಯ ಜನತೆ ಬೆಂಬಲ ನೀಡಬೇಕು ಎಂದು ವಿನಂತಿಸಿದರು.
ಜಿ.ಪಂ. ಸದಸ್ಯರಾದ ಈಶ್ವರ ಕಟೀಲು, ಜನಾರ್ದನ ಗೌಡ, ಹೋರಾಟ ಸಮಿತಿ ಸಂಚಾಲಕ, ಪತ್ರಕರ್ತ ಕಿರಣ್ ಮಂಜನಬೈಲು, ಕಲ್ಲಮುಂಡ್ಕೂರು ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಗಂಗಾಧರ ಶೆಟ್ಟಿ, ಮಾಜಿ ಅಧ್ಯಕ್ಷ ಪೂವಪ್ಪ ಗೌಡ, ತೆಂಕಮಿಜಾರು ಗ್ರಾ.ಪಂ. ಮಾಜಿ ಅಧ್ಯಕ್ಷ ವಿ. ಶಂಕರ ರಾವ್, ನಿಡ್ಡೋಡಿ ಕೆಥೋಲಿಕ್ ಸಭಾದ ಅಧ್ಯಕ್ಷ ವಲೇರಿಯನ್ ಸಿಕ್ವೇರಾ ಮಂಜನಬೈಲು, ಕಿನ್ನಿಗೋಳಿ ಕೆಥೋಲಿಕ್ ಸಭಾದ ಮಾಜಿ ಅಧ್ಯಕ್ಷ ಅಲೊ#àನ್ಸ್ ಡಿ’ಸೋಜಾ, ರಾಮಾಂಜನೇಯ ಯುವ ಒಕ್ಕೂಟದ ಅಧ್ಯಕ್ಷ ವಿ. ರಂಗನಾಥ ಭಟ್, ಗಿರೀಶ ಕೊಂಚಾಡಿ, ಲೋಕನಾಥ ಸಾಲ್ಯಾನ್, ನಿಡ್ಡೋಡಿ ಅಟೋರಿಕ್ಷಾ ಮಾಲಕರು ಹಾಗೂ ಚಾಲಕರ ಸಂಘದ ಪ್ರಮುಖರಾದ ನಿಡ್ಡೋಡಿ ಮಾಧವ ಗೌಡ, ಅಶೋಕ ನಾಯ್ಕ, ನಾರಾಯಣ ಅಂಚನ್, ಕಲ್ಲಮುಂಡ್ಕೂರು ಹಾಲು ಉ.ಸ. ಸಂಘದ ನಿರ್ದೇಶಕ ಅಶೋಕ ನಾಯ್ಕ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಪ್ರತೀಕ್ ಶೆಟ್ಟಿ ಎಕ್ಕಾರು, ಪ್ರಗತಿ ಪರ ರೈತ ನಿಡ್ಡೋಡಿ ರಾಮ ಸುವರ್ಣ, ಪ್ರಶಾಂತ್ ಶೆಟ್ಟಿ, ಮೊದಲಾದವರು ಸಭೆಯಲ್ಲಿದ್ದು ಯೋಜನೆಗೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿದರು.
Click this button or press Ctrl+G to toggle between Kannada and English