ಜಿಲ್ಲಾಧಿಕಾರಿಗಳಿಂದ ನಗರದ ನೈರ್ಮಲ್ಯ ಪರಿಶೀಲನೆ

3:02 PM, Wednesday, February 27th, 2013
Share
1 Star2 Stars3 Stars4 Stars5 Stars
(No Ratings Yet)
Loading...

city's sanitation inspectionಮಂಗಳೂರು  : ಇಂದು ಬೆಳಗ್ಗೆ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಆಡಳಿತಾಧಿಕಾರಿಯೂ ಆದ ಶ್ರೀ ಎನ್. ಪ್ರಕಾಶ್ ಅವರು  ಮಾನ್ಯ ಆಯುಕ್ತರು ಹಾಗೂ ಪರಿಸರ ಅಭಿಯಂತರರೊಂದಿಗೆ ಪಾಲಿಕಾ ವ್ಯಾಪ್ತಿಯೊಳಗಿನ ಘನತ್ಯಾಜ್ಯ ವಿಲೇವಾರಿ ಹಾಗೂ ನೈರ್ಮಲ್ಯಕ್ಕೆ ಸಂಬಂಧಿಸಿ ಕೆಲ  ಪ್ರದೇಶಗಳಿಗೆ ಸ್ವತಹ ಸಂದರ್ಶಿಸಿ ಪರಿಶೀಲನೆ ನಡೆಸಿದರು.

city's sanitation inspectionನಗರದ ಫಳ್ನೀರು ರಸ್ತೆ, ಕಂಕನಾಡಿ, ಶಾಂತಿನಿಲಯ ರಸ್ತೆ, ನಂದಿಗುಡ್ಡ, ಪಾಂಡೇಶ್ವರ, ಕೋರ್ಟ್, ದಕ್ಕೆ, ಸೆಂಟ್ರಲ್ ಮಾರ್ಕೆಟ್, ರಥಬೀದಿ, ಬಂದರು, ಕುದ್ರೋಳಿ, ಮಣ್ಣಗುಡ್ಡೆ, ಉರ್ವ, ಕೊಟ್ಟಾರ, ಬಿಜೈ, ಕದ್ರಿ, ಶಿವಭಾಗ್, ಬೆಂದೂರು ಹಾಗೂ ಇತರ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೆಲವು ಪ್ರದೇಶಗಳಲ್ಲಿ ನೈರ್ಮಲ್ಯ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಿರುವುದರಿಂದ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ಅವರು ಫಳ್ನೀರ್ ರಸ್ತೆ, ಕಂಕನಾಡಿ ಮತ್ತು ವೆಲೆನ್ಸಿಯಾ ಪ್ರದೇಶಗಳಲ್ಲಿ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಿರ್ವಹಿಸದೇ ಹಾಗೂ ಸೂಕ್ತ ಮೇಲ್ವಿಚಾರಣೆಯನ್ನು ನಡೆಸದೇ ಇರುವುದರಿಂದ ಸದ್ರಿ ಪ್ರದೇಶದ ನೈರ್ಮಲ್ಯ ನಿರೀಕ್ಷಕರನ್ನು ಸ್ಥಳದಲ್ಲಿಯೇ ಅಮನತು ಮಾಡಲು ಆದೇಶಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English