ಮಂಗಳೂರು : ವೈಷ್ಣವಿ ಪ್ರೆಂಡ್ಸ್, ಮಾರುತಿ ಹೈ-ಟೆಕ್ ಜಿಮ್ ಮಂಗಳೂರು ಹಾಗೂ ದಕ್ಷಿಣ ಕನ್ನಡ ಬಾಡಿ ಬಿಲ್ಡರ್ಸ್ ಅಸೋಸಿಯೇಶನ್ ಸಹಯೋಗದೊಂದಿಗೆ ಮಂಗಳೂರು ಪುರಭವನದಲ್ಲಿ ಫೆಬ್ರವರಿ 27 ಬುಧವಾರ ಸಂಜೆ “ಮಿ. ದಕ್ಷಿಣ ಕನ್ನಡ 2013” ದೇಹಧಾರ್ಡ್ಯ ಸ್ಪರ್ಧೆ ನಡೆಯಿತು.
ಕಾರ್ಯಕ್ರಮವನ್ನು ಕಾಮನ್ ವೆಲ್ತ್ ಕ್ರಿಡಾಕೂಟದಲ್ಲಿ ಚಿನ್ನದ ಪದಕ ಪಡೆದು ಉಪ್ಪಳ ಸಿಂಡಿಕೇಟ್ ಬ್ಯಾಂಕಿನ ಮಹಾಪ್ರಭಂದಕ ಪುಪ್ಪರಾಜ ಹೆಗ್ಡೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮನುಷ್ಯ ಆರೋಗ್ಯವಾಗಿರಬೇಕಾದರೆ ವ್ಯಾಯಮ ಅತ್ಯಗತ್ಯ ಜಿಮ್ನೆಶಿಯಂಗಳಂತಹ ವ್ಯಾಯಾಮಶಾಲೆಗಳಿಂದ ಆರೋಗ್ಯ ಮತ್ತು ದೇಹಧಾರ್ಡ್ಯತೆಗಳೆರಡನ್ನು ಬೆಳೆಸಿಕೊಳ್ಳಬಹುದು ಎಂದು ಅವರು ಹೇಳಿದರು
ಮುಖ್ಯ ಅತಿಥಿಗಳಾಗಿ ವಕೀಲರಾದ ರವೀಂದ್ರನಾಥ ರೈ, ನೈಸ್ ಕೇಟರರ್ಸ್ ಮಾಲಕರಾದ ದೀಪಕ್ ಕೋಟ್ಯಾನ್, ಮೈಕೊ ಇಲೆಕ್ಟ್ರಿಕಲ್ ಮಂಗಳೂರು ಇದರ ಮಾಲಕರಾದ ದಿಲೀಪ್ ಜೈನ್, ಪಾಲ್ಗುಣಿ ಟೆಕ್ಟ್ಸ್ಲೈಸ್ ಮನೋಜ್ ಕುಮಾರ್ ಉಪಸ್ಥಿತರಿದ್ದರು
ಸ್ಪರ್ಧೆಯಲ್ಲಿ ಹಿರಿಯ, ಮಾಸ್ಟರ್ ಹಾಗೂ ವಿಕಲ ಚೇತಾನ ದೇಹದಾಢ್ಯಪಟುಗಳು ಭಾಗವಹಿಸಿದ್ದರು. ಬಹುಮಾನ ವಿತರಣೆಯನ್ನು ಮಹಾಲಕ್ಮಿ ಜ್ಯುವೆಲಸರ್ಸ್ ನ ರವೀಂದ್ರ ನಿಕಂ, ವಕೀಲರಾದ ವಿಠಲಕುಡ್ವ, ಬಿ.ಆರ್ ಪ್ರೂಟ್ಸ್ ನ ನಸೀರ್, ಪೂಜಾ ಗೋಲ್ಡ್ ಟೆಸ್ಟಿಂಗ್ ನ ಸತ್ಯವನ್ ಬಾಬರ್ ನೆರೆವೇರಿಸಿದರು.
Click this button or press Ctrl+G to toggle between Kannada and English