ಬಂಟ್ವಾಳ : ಬಾಳ್ತಿಲ ಗ್ರಾಮದ ಕುಂಟಲ್ಪಾಡಿ ಯಲ್ಲಿ ಸೋಮವಾರ ಅತ್ಯಾಚಾರ ಯತ್ನದ ಬಳಿಕ ಕೊಲೆಗೀಡಾಗಿರುವ ಸೌಮ್ಯಾ ಅವರ ಮನೆಗೆ ಬುಧವಾರ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಮತ್ತು ಕಾಂಗ್ರೆಸ್ಸ್ ನಾಯಕರು ಭೇಟಿ ನೀಡಿ ಮೃತಳ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಹಾಗು ಈ ಸಂದರ್ಭದಲ್ಲಿ ಅವರು ಕಾಂಗ್ರೆಸ್ ಕಾರ್ಯಕರ್ತರಿಂದ ಮಂಗಳವಾರ ಸಂಗ್ರಹಿಸಿದ 1.10 ಲಕ್ಷ ರೂಪಾಯಿಗಳನ್ನು ಸೌಮ್ಯಾ ಳ ಹೆತ್ತವರಿಗೆ ಹಸ್ತಾಂತರಿಸಿದರು.
ಬಳಿಕ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಮಹಿಳೆಗೆ ರಕ್ಷಣೆ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದ್ದು, ಇದೊಂದು ಮನುಕುಲಕ್ಕೆ ಎದುರಾದ ಕಳಂಕ ಎಂದರು. ಘಟನೆಗೆ ಕಾರಣನಾದ ಆರೋಪಿಗೆ ಕಠಿಣ ಶಿಕ್ಷೆ ಯನ್ನು ವಿಧಿಸಲು ಒತ್ತಾಯಿಸಿರುವುದಾಗಿ ತಿಳಿಸಿದ ಅವರು ಇಂತಹ ಘಟನೆ ಇನ್ನು ನಡೆಯದಂತೆ ಎಚ್ಚರ ವಹಿಸುವುದು ಅಗತ್ಯ ಎಂದರು. ಯುವ ಸಮುದಾಯದಲ್ಲಿನ ಇಂತಹ ರಾಕ್ಷಸಿ ಮನೋಭಾವನೆಯನ್ನು ತಡೆಗಟ್ಟಲು ಧರ್ಮಗುರುಗಳು, ಮಠಾಧೀಶರು ಪ್ರಯತ್ನಿಸಬೇಕು ಎಂದು ಅವರು ತಿಳಿಸಿದರು.
ಕೆ. ಹರಿಕೃಷ್ಣ ಬಂಟ್ವಾಳ್, ಕೆಪಿಸಿಸಿ ಕಾರ್ಯದರ್ಶಿ ಅಶ್ವನಿ ಕುಮಾರ್ ರೈ, ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್. ಮಹಮ್ಮದ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಟಾಸ್ ಅಲಿ, ಪ್ರಮುಖರಾದ ಮೋಹನ್ ಪಿ.ಎಸ್., ಎ. ನೋಣಯ್ಯ ಪೂಜಾರಿ, ಮಧುಸೂದನ್ ಶೆಣೈ ಮತ್ತು ಸ್ಥಳೀಯ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English