ಮಹಾನಗರ ಪಾಲಿಕೆ ಚುನಾವಣೆ ಜೆಡಿಎಸ್ ನಿಂದ ಚುನಾವಣಾ ಪ್ರಣಾಳಿಕೆ ಬಿಡುಗಡೆ

4:30 PM, Thursday, February 28th, 2013
Share
1 Star2 Stars3 Stars4 Stars5 Stars
(No Ratings Yet)
Loading...

JDS election manifestoಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಗೆ ಮಾರ್ಚ್  7ರಂದು ನಡೆಯುವ ಚುನಾವಣೆಗೆ ಸಂಬಂಧಿಸಿದಂತೆ ಬುಧವಾರ ನಗರದಲ್ಲಿ ಜಾತ್ಯಾತೀತ ಜನತಾ ದಳದ ರಾಜ್ಯ ಉಪಾಧ್ಯಕ್ಷ- ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ ಜಾತ್ಯಾತೀತ ಜನತಾದಳದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು.

ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಜೆಡಿ‌ಎಸ್, ಮನಪಾ ವ್ಯಾಪ್ತಿಯ 60ವಾರ್ಡ್‌ಗಳಿಗೆ ಸಂಬಂಧಿಸಿದಂತೆ ವಿವಿಧ ಸಮಸ್ಯೆಗಳನ್ನು ಗಮನದಲ್ಲಿ ಇರಿಸಿಕೊಂಡು ವಿವಿಧ ನಾಗರಿಕ ಸೌಲಭ್ಯಗಳನ್ನು ಒದಗಿಸಿಕೊಡುವ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ.

ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಾಗರಾಜ ಶೆಟ್ಟಿ, ಕಳೆದ ಕೆಲವು ವರ್ಷಗಳಿಂದ ಆಡಳಿತಾ ನಡೆಸಿರುವ ಪಕ್ಷಗಳು ಜನರಿಗೆ ಸರಿಯಾದ ಮೂಲಭೂತ ಸೌಕರ್ಯಗಳನ್ನು ನೀಡುವಲ್ಲಿ ವಿಫಲವಾಗಿದ್ದು, ಈ ಪಕ್ಷಗಳ ದುರಾಡಳಿತದಿಂದ ನಗರದ ಜನತೆ ರೋಸಿ ಹೋಗಿ ಬದಲಾವಣೆ ಬಯಸಿದ್ದಾರೆ  ಎಂದರು. ಈ ಚುನಾವಣೆಯಲ್ಲಿ 48 ವಾರ್ಡ್ ಗಳಲ್ಲಿ ಪಕ್ಷವು ನೇರವಾಗಿ ಸ್ಪರ್ಧಿಸಿದರೆ 5 ವಾರ್ಡ್ ಗಳಲ್ಲಿ ಪಕ್ಷೇತರರಿಗೆ ಬೆಂಬಲ ನೀಡಲಿದ್ದು,  ಸ್ವಚ್ಚ, ಜನಪರ, ಭ್ರಷ್ಟಾಚಾರ ರಹಿತ ಆಡಳಿತ ನೀಡುವಲ್ಲಿ ಜೆಡಿಎಸ್ ಶ್ರಮಿಸಲಿದೆ ಎಂದರು.

ಜೆಡಿಎಸ್ ಪ್ರಣಾಳಿಕೆಯಲ್ಲಿನ ಮುಖ್ಯ ಅಂಶಗಳು

  • ಹಳೆ ಬಸ್ ನಿಲ್ದಾಣದ ಸ್ಥಳವನ್ನು ವಾಣಿಜ್ಯಕ್ಕೆ -ಪಾರ್ಕಿಂಗ್ ಸೌಲಭ್ಯಕ್ಕೆ ಬಳಕೆ.
  • ಖಾಸಗಿ ಬಸ್ ನಿಲ್ದಾಣದ ಸಮಸ್ಯೆಗೆ ಶಾಶ್ವತ ಪರಿಹಾರ.
  • ವೈಜ್ಞಾನಿಕ ಕಸ ವಿಲೇವಾರಿ.
  • ಮನೆ ಕಟ್ಟಲು ಸರಳ ರೀತಿಯ ಏಕ ಗವಾಕ್ಷಿ ಪರವಾನಗಿ ವ್ಯವಸ್ಥೆ.
  • ರಸ್ತೆ ಬದಿ ಚರಂಡಿ ವ್ಯವಸ್ಥೆ ಹಾಗೂ ಪಾದಚಾರಿಗಳಿಗೆ ಸೂಕ್ತವಾದ ವ್ಯವಸ್ಥೆ ಕಲ್ಪಿಸುವುದು.
  • ಬೀದಿ ಬದಿ ವ್ಯಾಪಾರಿಗಳ ಸಮಸ್ಯೆಗೆ ಪರಿಹಾರ.
  • ಬಡವರಿಗೆ ಮನೆ ನಿರ್ಮಾಣ, ದಿನಕೂಲಿ ನೌಕರರನ್ನು ಖಾಯಂಗೊಳಿಸುವುದು.
  • ಪ್ರತಿ ಸದಸ್ಯರ ವ್ಯಾಪ್ತಿಯಲ್ಲಿ ಮೀಸಲು ನಿಧಿಯನ್ನು ೨೦ ಲಕ್ಷದಿಂದ ೫೦ ಲಕ್ಷಕ್ಕೆ ಏರಿಸುವುದು.
  • ಕುಡಿಯುವ ನೀರು- ವಿದ್ಯುತ್ -ರಸ್ತೆ ಮುಂತಾದ ಮೂಲ ಸೌಕರ್ಯಗಳಿಗೆ ಆದ್ಯತೆ.

ಜೆಡಿಎಸ್ ಮುಖಂಡರಾದ ಎಂ. ಜಿ. ಹೆಗಡೆ, ಡಿ. ಎಂ. ಅಸ್ಲಂ, ಸುಶೀಲ್‌ ನೊರೊನ್ಹಾ, ಸುರೇಶ್ಚಂದ್ರ ಶೆಟ್ಟಿ, ಶಶಿರಾಜ್ ಶೆಟ್ಟಿ, ಚಿತ್ತರಂಜನ್ ರೈ, ಅಕ್ಷಿತ್ ಸುವರ್ಣ, ಗೋಪಾಲಕೃಷ್ಣ ಅತ್ತಾವರ ಮುಂತಾದವರು ಉಪಸ್ಥಿತರಿದ್ದರು

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English