ಜೀವನೋತ್ಸಾಹದಿಂದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ – ಶ್ರೀ.ಎಸ್ ಗಣೇಶ್ ರಾವ್

4:51 PM, Friday, March 1st, 2013
Share
1 Star2 Stars3 Stars4 Stars5 Stars
(No Ratings Yet)
Loading...

Karavali College ಮಂಗಳೂರು : ಜೀವನೋತ್ಸಾಹ ನಮ್ಮ ಜೀವನದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ಆತ್ಮವಿಶ್ವಾಸ, ಶ್ರದ್ಧೆ, ತ್ಯಾಗದಿಂದ ಜೀವನೋತ್ಸಾಹ ವೃದ್ಧಿಸುತ್ತದೆ ಮತ್ತು ಎಂತಹದೇ ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತದೆ. ಭಾರತ ದೇಶ ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧೀಜಿ, ಅಬ್ದುಲ್ ಕಲಾಂರಂತಹ ಮಹಾತ್ಮರುಗಳನ್ನು ಹೊಂದಿರುವ ಶ್ರೇಷ್ಠ ರಾಷ್ಟ್ರ. ಇಂದಿನ ಯುವ ಜನತೆ ಅಂತಹ ಮಹಾತ್ಮರ ಜೀವನವನ್ನು ಕುರಿತು ಕಲಿತು ಜೀರ್ಣಿಸುವುದಷ್ಟೇ ಅಲ್ಲ ಅವರನ್ನು ತಮ್ಮ ಬದುಕಿಗೆ  ಮಾದರಿಯಾಗಿರಿಸಿ ಆ ಮಹಾತ್ಮರು ದೇಶದ ಅಭಿವೃದ್ಧಿಯ ಬಗ್ಗೆ ಕಂಡ ಕನಸುಗಳನ್ನು ಸಾಕಾರಗೊಳಿಸುವ ರೂವಾರಿಗಳಾಗಬೇಕು ಎಂದು  ಕರಾವಳಿ ಕಾಲೇಜುಗಳ ಸಮೂಹದ ಆಡಳಿತ ಮಂಡಳಿ, ಜಿ.ಆರ್ ಎಜ್ಯುಕೇಶನ್ ಟ್ರಸ್ಟ್ (ರಿ.)ನ ಸ್ಥಾಪಕಾಧ್ಯಕ್ಷಾರಾದ ಶ್ರೀ.ಎಸ್. ಗಣೇಶ್ ರಾವ್ ರವರು ನಗರದ ಪ್ರತಿಷ್ಠಿತ ಕರಾವಳಿ ಕಾಲೇಜಿನಲ್ಲಿ ಆಯೋಜಿಸಲಾದ ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಐ.ಟಿ ಮತ್ತು ಮೇನೆಂಜ್ಮೆಂಟ್ ಫೆಸ್ಟ್ ಪಿಕ್ಸೆಲ್-2k13 ಮತ್ತು ನಕ್ಷತ್ರ 2013ರನ್ನು ಉದ್ಫಾಟಿಸಿ ಮಾತನಾಡಿದರು.

Karavali Collegeಅವರು ಮುಂದುವರಿದು ಸ್ಪರ್ಧಾಮನೋಭಾವ, ಕಠಿಣ ಪರಿಶ್ರಮದಿಂದ ಯಾರೂ ಸಾಧಕರಾಗಬಹುದು ಕಾನೂನು ಮತ್ತು ನೈತಿಕ ನೆಲೆಗಳ ಮೇಲೆ ಸಾಧಿಸಿದಾಗ ಸಿಗುವ ಆತ್ಮತೃಪ್ತಿ ನಮ್ಮನ್ನು ಇನ್ನೂ ಹೆಚ್ಚಿನ ಧನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತದೆ. ಸ್ಪರ್ಧಿ ಯ ಹುರುಪು, ಬುದ್ಧಿವಂತಿಕೆ ಮತ್ತು ಛಲ ಇದ್ದಲ್ಲಿ ಸೋಲು – ಗೆಲುವನ್ನು ಮೀರಿ ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬಹುದು. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಿಂದಲೇ ಈ ಚಿಂತನೆಗಳನ್ನು ಮೈಗೂಡಿಸಿಕೊಂಡಲ್ಲಿ ಬದುಕು ಸುಂದರವಾಗುತ್ತದೆ. ಏಕೆಂದರೆ ಜೀವನವೇ ಒಂದು ಸ್ಪರ್ಧೆ  ಜೀವನದ ಪ್ರತಿಯೊಂದು ಹಂತದಲ್ಲೂ ಸ್ಪರ್ಧೆ ಗಳು ಏರ್ಪಡುತ್ತಲೇ ಇರುತ್ತವೆ. ಅದನ್ನು ಎದುರಿಸಲು ಚಾಣಕ್ಷತೆ, ಆತ್ಮವಿಶ್ವಾಸವನ್ನು ಎಳೆಯದರಲ್ಲೇ ಬೆಳೆಸಿಕೊಂಡವನು ಖಂಡಿತವಾಗಿಯೂ ಜೀವನದಲ್ಲಿ ಉನ್ನತ ಸ್ಥಾನವನ್ನು ಗಳಿಸುತ್ತಾನೆ.

Karavali Collageಸಮಾರಂಭವನ್ನು ಕರಾವಳಿ ಕಾಲೇಜುಗಳ ಸಮೂಹದ ನಿದೇರ್ಶಕಿ ಶೀಮತಿ ಲತಾ.ಜಿ.ರಾವ್ ಉದ್ಫಾಟಿಸಿದರು,  ಪ್ರಾಂಶುಪಾಲರಾದ ಮೋಹನ್ ನಾಯ್ಕ್, ಬಿ.ಸಿ.ಎ ವಿಭಾಗದ ಮುಖ್ಯಸ್ಥರಾದ ಶ್ರೀ.ರಘನಂದನ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕಿ ಕು.ಸಂಝೀನ ನಿರೂಪಿಸಿದರು, ವಿದ್ಯಾರ್ಥಿನಿ ಕು. ತಾನಿಯ ಸ್ವಾಗತಿಸಿದರು, ವಿದ್ಯಾರ್ಥಿ ಸಂದೇಶ್ ವಂದಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English