ಕಾಸರಗೋಡು : ಕಳೆದ ಹಲವು ದಿನಗಳಿಂದ ಎಂಡೋಸಲ್ಫಾನ್ ಸಂತ್ರಸ್ಥ ಜನಪರ ಒಕ್ಕೂಟದ ನೇತೃತ್ವದಲ್ಲಿ ಕಾಸರಗೋಡಿನ ಹೊಸ ಬಸ್ಸು ನಿಲ್ದಾಣ ಪರಿಸರದ ಸಹಿ ವೃಕ್ಷದಡಿ ನಡೆಸುತ್ತಿರುವ ನಿರಾಹಾರ ಸತ್ಯಾಗ್ರಹ 12ನೇ ದಿನಕ್ಕೆ ಕಾಲಿಟ್ಟಿದೆ. ಮುಷ್ಕರ ನಡೆಯುವ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎನ್.ಎ.ನೆಲ್ಲಿಕುನ್ನು ಎಂಡೋಸಲ್ಫಾನ್ ಸಂತ್ರಸ್ತರ ಸಾಲ ಮನ್ನಾ ಮಾಡುವ ಕುರಿತು ಸಮಿತಿಯೊಂದನ್ನು ನೇಮಿಸಿ, ಮಾನವ ಹಕ್ಕು ಆಯೋಗ ನೀಡಿದ ಸಲಹೆಯಂತೆ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿರುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.
ಆದರೆ ಶಾಶ್ವತ ಪರಿಹಾರ ಕುರಿತು ಮುಖ್ಯಮಂತ್ರಿ ಜತೆ ಮಾತುಕತೆ ನಡೆಸಿದ ಬಳಿಕವಷ್ಟೇ ಮುಷ್ಕರದಿಂದ ಹಿಂದೆ ಸರಿಯುವುದಾಗಿ ಹೋರಾಟ ನಾಯಕರು ಶಾಸಕರಿಗೆ ಮನವರಿಕೆ ಮಾಡಿದರು. ಸಿಪಿಐ ರಾಜ್ಯ ಸಮಿತಿ ಸದಸ್ಯ ಪಿ.ಕೃಷ್ಣನ್, ಜಿಲ್ಲಾ ಕಾರ್ಯದರ್ಶಿ ಗೋವಿಂದನ್ ಪಳ್ಳಿ ಕಾಪಿಲ್, ಜಿಲ್ಲಾ ಪಂ.ಉಪಾಧ್ಯಕ್ಷ ಕೆ.ಎಸ್.ಕುರ್ಯಾಕೋಸ್, ವಿ.ರಾಜನ್, ರಾಧಾಕೃಷ್ಣನ್ ಪೆರುಂಬಳ, ನ್ಯಾಯವಾದಿ ಸುರೇಶ್ ಬಾಬು, ಬಿಜು ಉಣ್ಣಿತ್ತಾನ್ ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English