ಮಂಗಳೂರು : ಕಾನೂನು ಮತ್ತು ನಗರಾಭಿವೃದ್ಧಿ ಸಚಿವ ಸುರೇಶ್ ಕುಮಾರ್ ಅವರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ, ಕಳೆದ ೫ ವರ್ಷಗಳಿಂದ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಸಾರ್ಥಕ ಸಾಧನೆಯನ್ನು ಬಿಜೆಪಿ ಮಾಡಿದೆ. ನಗರದ ರಸ್ತೆಗಳನ್ನು ಉನ್ನತದರ್ಜೆಗೇರಿಸುವಲ್ಲಿ ಆದ್ಯತೆಯ ಮೇರೆಗೆ ಈಗಾಗಲೇ 75 ಕಿ.ಮೀ. ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಿದೆ. 40 ಕಿ.ಮೀ. ರಸ್ತೆಯನ್ನು ಇಂಟರ್‌ಲಾಕ್ ರಸ್ತೆಯಾಗಿ ನಿರ್ಮಾಣ ಮಾಡಿದೆ. ಫುಟ್‌ಪಾತ್ ಹಾಗೂ ಚರಂಡಿ ನಿರ್ಮಾಣದ ಕಾಮಗಾರಿ ನಡೆಯತ್ತಿದೆ ಎಂದರು.
ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ತುಂಬೆಯಲ್ಲಿ 75 ಕೋ. ರೂ. ವೆಚ್ಚದ ಹೊಸ ವೆಂಟೆಡ್ ಡ್ಯಾಂ ನಿರ್ಮಾಣ ಪ್ರಗತಿಯಲ್ಲಿದೆ. ನಗರದ ಪಡೀಲ್ ಬಜಾಲ್ ರೈಲ್ವೇ ಕ್ರಾಸಿಂಗ್ ಬಳಿ ಅಂಡರ್‌ಪಾಸ್ ರಚನೆಗೆ 5.16 ಕೋ. ರೂ. ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆ ಆರಂಭಗೊಂಡಿರುವುದು ಸೇರಿದಂತೆ ಹಲವಾರು ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಂಡಿದೆ. ಪಾಲಿಕೆಗೆ ಸಮಗ್ರ ಕರ್ನಾಟಕದಲ್ಲಿ ಘನತಾಜ್ಯ ವಿಲೇವಾರಿಯಲ್ಲಿ ಮತ್ತು ನೈರ್ಮಲ್ಯಕ್ಕಾಗಿ ಪ್ರಥಮ ಸ್ಥಾನ ದೊರಕಿದೆ ಎಂದವರು ವಿವರಿಸಿದರು.
ಸಂಸದ ನಳಿನ್ ಕುಮಾರ್ ಕಟೀಲು, ವಿಧಾನಸಭಾ ಉಪಸಭಾಧ್ಯಕ್ಷ ಎನ್. ಯೋಗೀಶ್ ಭಟ್, ವಿಧಾನ ಪರಿಷತ್ ಸದಸ್ಯ ಕೆ. ಮೋನಪ್ಪ ಭಂಡಾರಿ, ಜಿಲ್ಲಾ ಪ್ರಭಾರಿ ಕೆ. ಪ್ರತಾಪಸಿಂಹ ನಾಯಕ್, ನಾಯಕರಾದ ಶ್ರೀಕರ ಪ್ರಭು, ಫ್ರಾನ್ ಕ್ಲಿನ್ ಮೊಂತೇರೊ ಮತ್ತಿತರರು ಉಪಸ್ಥಿತರಿದ್ದರು.
ಪ್ರಣಾಳಿಕೆಯಲ್ಲಿನ ಪ್ರಮುಖ ಅಂಶಗಳು :
ಎಲ್ಲ ವಾರ್ಡ್‌ಗಳಲ್ಲಿ ದಿನದ 24 ಗಂಟೆಯೂ ಕುಡಿಯುವ ನೀರಿನ ಪೂರೈಕೆ.
ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಆಶ್ರಯ ಯೋಜನೆಯಡಿ ಮನೆ ನಿವೇಶನ ನೀಡುವ ವ್ಯವಸ್ಥೆ.
ನಗರದ ಪ್ರಮುಖ ರಸ್ತೆಗಳ ಡಾಮರೀಕರಣ.
ಸುಗಮ ಸಂಚಾರಕ್ಕೆ ಫ್ಲೆ$çಓವರ್‌ಗಳ ನಿರ್ಮಾಣ.
ಪ್ರಮುಖ ರಸ್ತೆಗಳಲ್ಲಿ ಅಗತ್ಯ ಇರುವ ಕಡೆಗಳಲ್ಲಿ ಬಸ್ ತಂಗುದಾಣ ಹಾಗೂ ಬಸ್‌ಬೇ ರಚನೆ.
ವಸತಿ ಯೋಜನೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮೂಡ ಸಹಯೋಗದೊಂದಿಗೆ ಹೊಸ ಬಡಾವಣೆಗಳ ನಿರ್ಮಾಣ.
ಮನಪಾದಲ್ಲಿ ಏಕಗವಾಕ್ಷಿ ಸೌಲಭ್ಯ.
Click this button or press Ctrl+G to toggle between Kannada and English