ನವದೆಹಲಿ : ದೆಹಲಿಯಲ್ಲಿ ನಡೆದ 19ನೇ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಈ ಬಾರಿ ಭರ್ಜರಿ 38 ಸ್ವರ್ಣ ಪದಕ, 27ಬೆಳ್ಳಿ, 36 ಕಂಚು ಒಟ್ಟು101 ಪದಕ ಗೆದ್ದುಕೊಳ್ಳುವ ಮೂಲಕ ಆತಿಥೇಯ ಭಾರತ ತಂಡವು ನೂತನ ಇತಿಹಾಸ ರಚಿಸಿದೆ.
ಕಾಮನ್ ವೆಲ್ತ್ ಗೇಮ್ಸ್ ನ ಕೊನೆಯ ದಿನವಾದ ಇಂದು ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಸಿಂಗಲ್ಸ್ ವಿಭಾಗದಲ್ಲಿ ಜಯಗಳಿಸಿ ಭಾರತವನ್ನು ಪದಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆರುವಂತೆ ಮಾಡಿದರು.
2002ರಲ್ಲಿ ನಡೆದ ಮ್ಯಾಂಚೆಸ್ಟರ್ ಕೂಟದಲ್ಲಿ ಭಾರತ 22 ಚಿನ್ನಗಳನ್ನು ಗೆದ್ದುಕೊಂಡಿತ್ತು. ಈ ಬಾರಿ ಭರ್ಜರಿ 38 ಸ್ವರ್ಣ ಪದಕಗಳ ಮೂಲಕ ಹಿಂದಿನ ದಾಖಲೆಯನ್ನು ಮುರಿದಿದೆ. ಇದೇ ಮೊದಲ ಬಾರಿಗೆ ಭಾರತ ಪದಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದೆ. 2006ರ ಮೆಲ್ಬೋರ್ನ್ ಮತ್ತು 2002ರಲ್ಲಿ ನಡೆದ ಮ್ಯಾಂಚೆಸ್ಟರ್ ಕೂಟದಲ್ಲಿ ಭಾರತ 4ನೇ ಸ್ಥಾನದಲ್ಲಿತ್ತು.
Click this button or press Ctrl+G to toggle between Kannada and English