ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸಲಿದೆ : ಪಾಲೆಮಾರ್‌

2:20 PM, Tuesday, March 5th, 2013
Share
1 Star2 Stars3 Stars4 Stars5 Stars
(No Ratings Yet)
Loading...

Krishna J Palemarಮಂಗಳೂರು : ಮಂಗಳೂರುಮಹಾನಗರ ಪಾಲಿಕೆಯ ಕಳೆದ ಚುನಾವಣೆಯಲ್ಲಿ ಆಡಳಿತ ನಡೆಸಲು ಬಿಜೆಪಿಗೆ ಪ್ರಥಮ ಬಾರಿಗೆ  ಮತದಾರರು ಅವಕಾಶ ನೀಡಿದ್ದು ಅದನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡ ಬಿಜೆಪಿ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಕಾಲಿಕ ಸರ್ವಶ್ರೇಷ್ಠ ಅಭಿವೃದ್ಧಿಯನ್ನು ಸಾಧಿಸಿದೆ. ಆದ್ದರಿಂದ ಜನತೆ ಈ ಬಾರಿಯೂ ಬಿಜೆಪಿಗೆ ಪ್ರಚಂಡ ಬಹುಮತ ನೀಡಲಿದ್ದಾರೆಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ – ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್‌ ಹೇಳಿದರು.

ಸೋಮವಾರ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಸ್ತೆ ನೀರು, ವಿದ್ಯುತ್‌, ಒಳಚರಂಡಿ ಮುಂತಾದ ಮೂಲಸೌಕರ್ಯಕ್ಕೆ ಆದ್ಯತೆ ನೀಡಲಾಗಿದೆ. ತುಂಬೆ ವೆಂಟೆಡ್‌ ಡ್ಯಾಂನ 75 ಕೋಟಿ ರೂ. ನ ವಿಸ್ತೃತ ಕಾರ್ಯ ಪ್ರಗತಿಯಲ್ಲಿದೆ. ಎಡಿಬಿ ಯೋಜನೆ ಮುಕ್ತಾಯದ ಹಂತದಲ್ಲಿದೆ. 3,000ಕ್ಕೂ ಹೆಚ್ಚಿನ ವಸತಿ ವಿತರಣೆ ಯೋಜನೆ ಅನುಷ್ಠಾನವಾಗುತ್ತಿದೆ. ನಾಗರಿಕರಿಗೆ ಒಂದೆಡೆ ಸೇವೆಯ ಮಂಗಳೂರು ವನ್‌ ಯಶಸ್ವಿಯಾಗಿದೆ. 3ನೇ ಹಂತದ 100 ಕೋಟಿ ರೂ. ಅನುದಾನ ದೊರೆಯುತ್ತಿದೆ. ಸಕಾಲ ಸಂಪೂರ್ಣ ಯಶಸ್ವಿಯಾಗಿದೆ ಎಂದರು.

ಕಾಂಗ್ರೆಸ್ ಅಧಿಕಾರದಲ್ಲಿರುವಾಗ ಸಮಗ್ರ ಅಭಿವೃದ್ದಿ ಯೋಜನೆಯ ನೀತಿಯಿಂದಾಗಿ ನಗರದಲ್ಲಿ ಬಡವರು ಕಾನೂನಾತ್ಮಕವಾಗಿ ಮನೆ ಕಟ್ಟುವುದಕ್ಕೆ ಅವಕಾಶವಿರಲಿಲ್ಲ ಆದರೆ ಅಧಿಕಾರಿಗಳು ಶಿಸ್ತಿನ ಕ್ರಮ ಕೈಗೊಳ್ಳದೇ ಇದ್ದುದರಿಂದ ಜನರು ಮನೆಗಳನ್ನು ಕಟ್ಟಿಕೊಳ್ಳುತ್ತಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಇದ್ದ ತೊಡಕುಗಳನ್ನೆಲ್ಲ ಸರಿಪಡಿಸಲು ಸಮಗ್ರ ಅಭಿವೃದ್ದಿ ಯೋಜನೆಯನ್ನು ಬದಲಾಯಿಸಿ ಬಡವರಿಗೆ ಸಹಾಯವಾಗುವಂತೆ ಮಾಡಿಕೊಡಲಾಯಿತು.

ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ 22 ವಾರ್ಡ್‌ಗಳಲ್ಲಿ ಸದಸ್ಯರ ವಾರ್ಷಿಕ ಅನುದಾನ ಸಹಿತ ಕಳೆದ 5 ವರ್ಷಗಳಲ್ಲಿ 206.56 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ ಎಂದು ಪಾಲೆಮಾರ್‌ ತಿಳಿಸಿದರು. ಈ ಸಾಧನೆಯ ಹಿನ್ನೆಲೆಯಲ್ಲಿ ಬಿಜೆಪಿಯನ್ನು ಮತ್ತೂಮ್ಮೆ ಗೆಲ್ಲಿಸುವಂತೆ ಮತದಾರರನ್ನು ವಿನಂತಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English