ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಪೊಲೀಸ್‌ ಮತ್ತು ಸೆಕ್ಟರ್‌ ಅಧಿಕಾರಿಗಳ ವಿಶೇಷ ಪೂರ್ವಭಾವಿ ಸಭೆ

12:06 PM, Wednesday, March 6th, 2013
Share
1 Star2 Stars3 Stars4 Stars5 Stars
(No Ratings Yet)
Loading...

AK Monappaಮಂಗಳೂರು : ಮಾರ್ಚ್  7ರಂದು ನಡೆಯಲಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಬಿಗು ಪೊಲೀಸ್‌ ಬಂದೋಬಸ್ತ್    ಏರ್ಪಡಿಸಲಾಗಿದ್ದು,  ಪೊಲೀಸ್‌ ಇಲಾಖೆ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಲು ಚುನಾವಣಾ ವೀಕ್ಷಕರಾದ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಮಂಗಳೂರು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಪೊಲೀಸ್‌ ಮತ್ತು ಸೆಕ್ಟರ್‌ ಅಧಿಕಾರಿಗಳ ವಿಶೇಷ ಪೂರ್ವಭಾವಿ ಸಭೆ ನಡೆಯಿತು.

ಎಲ್ಲ ಸೆಕ್ಟರ್‌ನ ಪೊಲೀಸ್‌ ಅಧಿಕಾರಿಗಳೊಂದಿಗೆ ಅವರ ವ್ಯಾಪ್ತಿಯಲ್ಲಿರುವ ಕಾನೂನು ಸುವ್ಯವಸ್ಥೆ ಪಾಲನೆ ಸಂಬಂಧ ಮಾಹಿತಿ ಪಡೆದುಕೊಂಡು ವಿಶೇಷ ನಿಗಾ ಇರಿಸಲು ಅವರು  ಸೂಚಿಸಿದರು. ಚುನಾವಣಾ ಕರ್ತವ್ಯ ನಿರ್ಲಕ್ಷಿಸಿದರೆ ಕೆಲಸ   ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು, ಪೊಲೀಸ್‌ ಗುಪ್ತಚರ ವಿಭಾಗ  ಹೆಚ್ಚು ಜಾಗೃತವಾಗಿರಬೇಕು ಮತ್ತು  ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಮತ್ತು ನಿರ್ಭೀತ ವಾತಾವರಣ ನಿರ್ಮಾಣಕ್ಕೆ ಒತ್ತು ನೀಡಿ ಸಮರ್ಪಕ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು, ಚುನಾವಣೆಯನ್ನು ಗೊಂದಲಗಳಿಲ್ಲದೆ ಸುಸೂತ್ರವಾಗಿ ನಡೆಸಲು ಚುನಾವಣಾ ಕರ್ತವ್ಯದಲ್ಲಿ ಪಾಲ್ಗೊಳ್ಳುವ ಅಧಿಕಾರಿ, ಸಿಬ್ಬಂದಿಗಳ ನಡುವೆ ಸಮನ್ವಯತೆ ಹಾಗೂ ಸಂವಹನ ಸ್ಪಷ್ಟವಾಗಿರಬೇಕು ಎಂದರು.

ಎಲ್ಲ ಮತದಾನ ಕೇಂದ್ರಗಳ ಸುರಕ್ಷೆ ಹೊಣೆ ಖಚಿತಪಡಿಸಿಕೊಳ್ಳಲು ನಿರ್ದೇಶನ ನೀಡಿದ ಚುನಾವಣಾ ವೀಕ್ಷಕರು, ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆದರು. ರಾಜ್ಯ ಚುನಾವಣಾ ಆಯೋಗ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಸಮಾನ ಮಹತ್ವ ನೀಡಿದ್ದು, ಈ ಚುನಾವಣೆಯನ್ನು ಯಶಸ್ವಿಯಾಗಿ ಮುಗಿಸಿದರೆ ಮುಂಬರುವ ವಿಧಾನಸಭಾ ಚುನಾವಣೆಯೂ ಸುಲಲಿತವಾಗಲಿದೆ ಎಂದರು. ಮಂಗಳವಾರ ರಾತ್ರಿಯಿಂದಲೇ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಎನ್‌. ಪ್ರಕಾಶ್‌ ಅವರು ಪೊಲೀಸ್‌ ಕಮಿಷನರ್‌ ಜತೆಯಾಗಿ ಮತದಾನದ ಪೂರ್ವ ತಯಾರಿ ವೀಕ್ಷಣೆ ನಡೆಸಲಿರುವರು ಎಂದರು.

ಜಿಲ್ಲಾಧಿಕಾರಿ ಎನ್‌. ಪ್ರಕಾಶ್‌, ಪೊಲೀಸ್‌ ಕಮಿಷನರ್‌ ಮನೀಷ್‌ ಕರ್ಬೀಕರ್‌, ಅಪರ ಜಿಲ್ಲಾಧಿಕಾರಿ ಕೆ.ಎ. ದಯಾನಂದ್‌, ಮ.ನ.ಪಾ. ಆಯುಕ್ತ ಡಾ| ಹರೀಶ್‌ ಕುಮಾರ್‌ ಮೊದಲಾದವರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English