ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕಬ್ಬಡಿ ಪಂದ್ಯಾಟ ಉದ್ಘಾಟನೆ.

3:56 PM, Friday, October 15th, 2010
Share
1 Star2 Stars3 Stars4 Stars5 Stars
(No Ratings Yet)
Loading...

ರಾಜ್ಯಮಟ್ಟದ ಕಬ್ಬಡಿ ಪಂದ್ಯಾಟ ಮಂಗಳೂರು: ಪದವಿಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ದ.ಕ. ಜಿಲ್ಲೆ ಹಾಗೂ ಗಣಪತಿ ಸಂಯುಕ್ತ ಅನುದಾನಿತ ಪ.ಪೂ ಕಾಲೇಜು ಇವುಗಳ ಜಂಟಿ ಆಶ್ರಯದಲ್ಲಿ ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕ ಹಾಗೂ ಬಾಲಿಕಿಯರ ಕಬ್ಬಡಿ ಪಂದ್ಯಾವಳಿಯನ್ನು ಇಂದು ಬೆಳಿಗ್ಗೆ 9 ಗಂಟೆಗೆ ನೆಹರೂ ಮೈದಾನದಲ್ಲಿ ಅಮೆಚೂರ್ ಕಬ್ಬಡಿ ಫೆಡರೇಶನ್ ಆಫ್ ಇಂಡಿಯಾದ ಬಿ. ರತ್ನಾಕರ ಪುತ್ರನ್ ಉದ್ಘಾಟಿಸಿದರು.

ರಾಜ್ಯಮಟ್ಟದ ಕಬ್ಬಡಿ ಪಂದ್ಯಾಟ
ಉದ್ಘಾಟನಾ ಬಳಿಕ ಮಾತನಾಡಿದ ರತ್ನಾಕರ ಪುತ್ರನ್ ಕ್ರೀಡೆಗಳು ಯುವಶಕ್ತಿಯನ್ನು ಒಂದು ಗೂಡಿಸುವ ಒಂದು ಸಮರ್ಥ ವೇದಿಕೆ, ಕ್ರೀಡೆಯಿಂದ ವೈಯಕ್ತಿಕ ಬೆಳವಣಿಗೆಯೊಂದಿಗೆ ರಾಷ್ಟ್ರದ ಅಭಿವೃದ್ಧಿಯೂ ಸಾಧ್ಯ ಎಂದು ಅವರು ಹೇಳಿದರು.

ರಾಜ್ಯಮಟ್ಟದ ಕಬ್ಬಡಿ ಪಂದ್ಯಾಟ
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ. ಸಂತೋಷ್ ಕುಮಾರ್ ಭಂಡಾರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುಷ್ಪರಾಜ್ ಶೆಟ್ಟಿ ಜುಗಲ್ ಸ್ಪೋರ್ಟ್ಸ್, ಹರೀಶ್ ಕುಮಾರ್ ಎನ್.ಎಂ.ಪಿ.ಟಿ, ವಿಜಯ ಸುವರ್ಣ ಎನ್.ಎಂ.ಪಿ.ಟಿ, ದಿಲೀಪ್ ಎಸ್. ಕಂಬದಕೋಣೆ, ಸಾರಸ್ವತ ವಿದ್ಯಾಸಂಸ್ಥೆ ಮಂಗಳೂರು, ಶ್ರೀ ಎಸ್. ಎಸ್. ಹಿರೇಮಠ್ ಅಧ್ಯಕ್ಷರು, ರಾಜ್ಯ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘ ಹಾಗೂ ಪ್ರೇಮನಾಥ ಶೆಟ್ಟಿ, ಉಪಾಧ್ಯಕ್ಷರು, ರಾಜ್ಯ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘ, ನಾಗೇಂದ್ರಪ್ಪ ಉಪನಿರ್ದೇಶಕರು ಪ.ಪೂ ಶಿಕ್ಷಣ ಇಲಾಖೆ, ಶ್ರೀಮತಿ ಚಂದ್ರಕಲಾ ನಂದಾವರ ಪ್ರಾಂಶುಪಾಲರು, ಗಣಪತಿ ಪ.ಪೂ ಕಾಲೇಜು, ಮಂಗಳೂರು, ಶ್ರೀ ಶಶಿಧರ ಮಾಣಿ, ದೈಹಿಕ ಶಿಕ್ಷಣ ಉಪನ್ಯಾಸಕರು ಮೊದಲಾದವರು ಉಪಸ್ಥಿತರಿದ್ದರು.

ರಾಜ್ಯಮಟ್ಟದ ಕಬ್ಬಡಿ ಪಂದ್ಯಾಟ
ಪಂದ್ಯಾಟದಲ್ಲಿ ಒಟ್ಟು 37 ಹುಡುಗರು ಹಾಗೂ 37 ಹುಡುಗಿಯರ ತಂಡಗಳು ಭಾಗವಹಿಸಿದ್ದು ಒಟ್ಟು 744 ಕ್ರೀಡಾಕೂಟಗಳು ಭಾಗವಹಿಸಲಿದ್ದಾರೆ, ಸಮಾರೋಪ ಸಮಾರಂಭವು ಅ. 16 ರಂದು ಸಂಜೆ 5 ಗಂಟೆಗೆ ನೆಹರೂ ಮೈದಾನದಲ್ಲಿ ನಡೆಯಲಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English