ಟಾಪ್‌ಮೋಸ್ಟ್ ತಾರೆಗಳಿದ್ದ ರಾವಣನ್ ಮತ್ತು ಗೌತಮ್ ಕಾರ್ತಿಕ್ ಮತ್ತು ತುಳಸಿ ನಟಿಸಿದ ಕಡಲ್ ಚಿತ್ರ ಫ್ಲಾಪ್ ಆದ ನಂತರ ತನ್ನ ಜಾದೂ ಕಳೆದುಹೋಗಿದೆ ಎಂಬ ಅಪವಾದವನ್ನು ಹೋಗಲಾಡಿಸಲು ಮಣಿ ರತ್ನಂ ರವರು ತಮ್ಮ ಹೊಸ ಹೊಸ ಪ್ರಾಜೆಕ್ಟ್ ವೊಂದನ್ನು ಕೈಗೆತ್ತಿಕೊಂಡಿದ್ದು ಇದರಲ್ಲಿ ಬಾಲಿವುಡ್ ನಟ ಅಮೀರ್ ಹಾಗು ನಟಿ ಕರೀನಾಳನ್ನು ಆಯ್ಕೆ ಮಾಡಿದ್ದಾರೆ ಎಂಬ ಸುದ್ದಿ ಇದೆ. ಜೊತೆಗೆ ಹಿಂದಿ ಮತ್ತು ತಮಿಳಿನಲ್ಲಿಯೂ ಈ ಚಿತ್ರ ನಿರ್ಮಾಣವಾಗಲಿದ್ದು ಚಿತ್ರ ಇಂಡಿಯಾ-ಪಾಕಿಸ್ತಾನದ ವಿಭಜನೆಯ ಕಥೆಯನ್ನು ಹೊಂದಿದೆಯಂತೆ. ಬಾಂಬೆ, ರೋಜಾದಂಥ ಮತ್ತೊಂದು ಸಿನಿಮಾ ಇಲ್ಲಿ ಹುಟ್ಟಬಹುದೇ ಎಂಬ ನಿರೀಕ್ಷೆ ಇದೆ.
ಕಡಲ್ ಸಿನಿಮಾ ಸೋಲಲು ಮುಖ್ಯ ಕಾರಣ ಸೂಕ್ತವಾದ ಕಥೆಯೇ ಇಲ್ಲದಿರುವುದು ಎಂಬ ಆರೋಪಗಳಿದ್ದವು. ಮತ್ತು ಎಳೆಯರ ಪ್ರೇಮವನ್ನು ಚಿತ್ರಿಸುವಲ್ಲಿ ಮಣಿ ಸೋತಿದ್ದಾರೆ ಎನ್ನುವುದು. ಹಾಗಾಗಿ, ಈ ಬಾರಿ ಮಣಿ ಕಥೆ ಬರೆಯುತ್ತಿಲ್ಲ. ರಂಗ್ ದೇ ಬಸಂತಿಯನ್ನು ಅದ್ಭುತ ಚಿತ್ರಕ್ಕೆ ಕಥೆ ಕೊಟ್ಟ ರೆನ್ಸಿಲ್ ಡಿಸಿಲ್ವಾ ಇಲ್ಲಿ ಕಥೆಗಾರ.
ಮಣಿರತ್ನಂ ಕಡಲ್ ಬಳಿಕ ಐಶ್ವರ್ಯ ರೈಯನ್ನು ನಾಯಕಿಯಾಗಿಸಿ ಸಿನಿಮಾ ಮಾಡಲು ಮುಂದಾಗಿದ್ದರೂ ಮಾಜಿ ಲೋಕ ಸುಂದರಿ ಅದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಇದೀಗ ಮೊದಲ ಬಾರಿಯ ಮಣಿ ಕರೆಯನ್ನು ಅಮೀರ್ ಒಪ್ಪಿಕೊಂಡಿದ್ದಾರೆ. ಯುವ ಚಿತ್ರದ ಬಳಿಕ ಮತ್ತೊಮ್ಮೆ ಕರೀನಾಗೆ ಮಣಿ ಸ್ಪರ್ಶ ಸಿಗಲಿದೆ. ಇತ್ತ ಅಮೀರ್ ಖಾನ್ ಮತ್ತು ಕರೀನಾ ತ್ರೀ ಈಡಿಯೆಟ್ಸ್ ಹಾಗೂ ತಲಾಶ್ ಬಳಿಕ ಮೂರನೇ ಬಾರಿಗೆ ಜೊತೆಯಾಗಿ ನಟಿಸುತ್ತಿದ್ದಾರೆ.
ಅಂದ ಹಾಗೆ, ತಮಿಳಿನಲ್ಲಿಯೂ ಬರಲಿರುವ ಈ ಚಿತ್ರದಲ್ಲಿ ಅಮೀರ್ ಖಾನ್-ಕರೀನಾ ಜೋಡಿಯೇ ನಟಿಸುತ್ತಾ ಅನ್ನೋದರ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಶಾರುಖ್ ಖಾನ್‌ನಂಥ ಟಾಪ್ ಕ್ಲಾಸ್ ನಾಯಕನಿದ್ದರೂ ದಕ್ಷಿಣದಲ್ಲಿ ದಿಲ್ ಸೇ ಗೆದ್ದಿರಲಿಲ್ಲ. ಈ ನಿಟ್ಟಿನಲ್ಲಿ ದಕ್ಷಿಣದ ಒಬ್ಬ ಜನಪ್ರಿಯ ನಟ ತಮಿಳಿನಲ್ಲಿ ಕರೀನಾಗೆ ನಾಯಕಿಯಾಗುವ ಸಾಧ್ಯತೆಯೂ ಇದೆ. ಏನೇ ಆದರೂ ಅಮೀರ್-ಕರೀನಾ ಮತ್ತು ಮಣಿ ಜೋಡಿ ಬಗ್ಗೆ ಅಪಾರವಾದ ಕುತೂಹಲ ಇದ್ದೇ ಇದೆ.
Click this button or press Ctrl+G to toggle between Kannada and English