ಮಂಗಳೂರು: ನಗರದ ಅತ್ತಾವರದ ಎನ್.ಜಿ ರಸ್ತೆಯಲ್ಲಿರುವ ಅಂಧರ ಚಲನ ವಲನ ತರಬೇತಿ ಕೇಂದ್ರದ ದಶಮಾನೋತ್ಸವದ ಅಂಗವಾಗಿ ನಡೆದ ಅಂಧರ ಮರು ಸಾಮರ್ಥ್ಯ ಪರೀಕ್ಷೆಯ ತರಬೇತಿ ಪತ್ರಗಳನ್ನು ಇಂದು ಬೆಳಿಗ್ಗೆ ವಿತರಿಸಲಾಯಿತು.
ಸಮಾರಂಭದ ಉದ್ಘಾಟನೆಯನ್ನು ಮಂಗಳೂರು ಮಹಾನಗರಪಾಲಿಕೆಯ ಆಯುಕ್ತ ಕೆ.ಎನ್ ವಿಜಯ ಪ್ರಕಾಶ್ ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು,
ಪರಿಶುದ್ಧ ಮನಸ್ಸು ಹಾಗೂ ನಿರ್ಮಲ ಹೃದಯಿಗಳು ಯಾವತ್ತೂ ಅಂಧರಲ್ಲ. ಅವರ ಬಲಹೀನ ಸಾಮರ್ಥ್ಯವನ್ನು ಹೆಚ್ಚಿಸಬೇಕಾದರೆ ಶಕ್ತರು ಉತ್ತಮ ಮನಸ್ಸಿನವರಾಗಿರಬೇಕು, ಅಂಗಹೀನರನ್ನು ತಾತ್ಸಾರದಿಂದ ನೋಡದೆ ಎಲ್ಲರಂತೆ ನೋಡಿಕೊಳ್ಳಬೇಕು ಎಂದು ಉದ್ಘಾಟನೆ ಬಳಿಕ ವಿಜಯ ಪ್ರಕಾಶ್ ಹೇಳಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಎಚ್. ಆರ್. ವಿ ರೆಡ್ಡಿ, ಮುಖ್ಯಸ್ಥರು ಫಿಶರೀಸ್ ಕಾಲೇಜು ಮಂಗಳೂರು ಉಪಸ್ಥಿತರಿದ್ದರು. ತರಬೇತಿ ಕೇಂದ್ರದ ಸೂರ್ಯ ಪ್ರಕಾಶ್ ಭಟ್ ವೇದಿಕೆಯಲ್ಲಿದ್ದರು.
Click this button or press Ctrl+G to toggle between Kannada and English