ಬೆಂಗಳೂರು : ಆಸ್ತಿ ವಿವಾದಕ್ಕೆ ಸಂಬಂಧಿಸಿ ಕೊಲೆಯಾದ ವಾಸುದೇವ ಅಡಿಗ ಕೊಲೆ ಗೆ ಸಂಬಂಧಿಸಿ ಬಂಧನಕ್ಕೊಳಗಾದ ಆರೋಪಿ ಜೋತಿಷಿ ಸುಬ್ರಹ್ಮಣ್ಯ ಉಡುಪ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ.ಶ್ರೀಧರ್ ರಾವ್ ಅವರು, ಬುಧವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ವಾಸುದೇವ ಅಡಿಗ ಕೊಲೆಗೆ ಸಂಬಂಧಿಸಿ ಪ್ರಮುಖ ಆರೋಪಿ ರಮೇಶ ಬಾಯಾರಿ ಸೇರಿದಂತೆ ಸುಬ್ರಹ್ಮಣ್ಯ ಉಡುಪಮತ್ತು ಬೆಂಗಳೂರು ಮೂಲದ ಐವರು ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ ಜೋತಿಷಿ ಸುಬ್ರಹ್ಮಣ್ಯ ಉಡುಪ ರವರು ಅಡಿಗ ಕೊಲೆ ಪ್ರಕರಣ ಸಂಬಂಧ ದಾಖಲಿಸಿದ ಎಫ್ಐಆರ್‌ನಲ್ಲಿ ತಮ್ಮ ಹೆಸರಿಲ್ಲ. ಪ್ರಕರಣದಲ್ಲಿ ತಮ್ಮ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳು ಲಭ್ಯವಿಲ್ಲ. ಆರೋಪಿ ಕೃಷ್ಣಮೂರ್ತಿ ಅವರು ತನ್ನ ಸಂಬಂಧಿಯಾಗಿದ್ದಾರೆ. ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ ಎಂಬ ಕಾರಣಕ್ಕೆ ಪೊಲೀಸರು ತಮ್ಮನ್ನು ಬಂಧಿಸಿದ್ದಾರೆ. ಸಂಬಂಧಿಯಾಗಿದ್ದ ಕಾರಣ ಕೃಷ್ಣಮೂರ್ತಿ ಅವರೊಂದಿಗೆ ಮಾತನಾಡಿದ್ದೇನೆ ಹೊರತು ಕೊಲೆ ಪ್ರಕರಣದಲ್ಲಿ ತಾವು ಭಾಗಿಯಾಗಿಲ್ಲ. ಹೀಗಾಗಿ, ಜಾಮೀನು ಮಂಜೂರು ಮಾಡಬೇಕು ಎಂದು ನ್ಯಾಯಾಲಯವನ್ನು ಕೋರಿದ್ದರು.
Click this button or press Ctrl+G to toggle between Kannada and English