ಮಂಗಳೂರು : ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ ಸಂಜೆಯ ವೇಳೆಗೆ ಚುರುಕುಗೊಂಡಿದ್ದು ಸಂಜೆ 3 ಗಂಟೆಗೆಯವರೆಗೆ ದ.ಕ ಜಿಲ್ಲೆಯಲ್ಲಿ 61.46 % ಮತ್ತು ಉಡುಪಿ ಜಿಲ್ಲೆಯಲ್ಲಿ 63.42% ಮತದಾನವಾಗಿದೆ.
ಮಂಗಳೂರು ನಗರ 51% ಉಳ್ಳಾಳ ಪುರಸಭೆ 54.8%, ಮೂಡಬಿದ್ರೆ ಪುರಸಭೆ 63.3%, ಬಂಟ್ವಾಳ ಪುರಸಭೆ 65.6% ,ಪುತ್ತೂರು ಪುರಸಭೆ 60.4%, ಬೆಳ್ತಂಗಡಿ ಪಟ್ಟಣ ಪಂಚಾಯತ್ 63.6%, ಸುಲ್ಯ ಪಟ್ಟಣ ಪಂಚಾಯತ್ 71.7% ಮತದಾನವಾಗಿದೆ.
ಉಡುಪಿ ಜಿಲ್ಲೆಯಲ್ಲಿ ಉಡುಪಿ ನಗರ ಸಭೆ 60.35%, ಸಾಲಿಗ್ರಾಮ 67.14%, ಕುಂದಾಪುರ 61.90%, ಕಾರ್ಕಳ 64.20% ಮತದಾನವಾಗಿದೆ. ಉಭಯ ಜಿಲ್ಲೆಗಳಲ್ಲಿ ಬಹುತೇಕ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ. ಉಡುಪಿಯಲ್ಲಿ ಮತದಾನ ಮಾಡುವುದಿಲ್ಲ ಎಂದಿದ್ದ ಪೇಜಾವರ ಶ್ರಿಗಳು ಮಧ್ಯಾಹ್ನ ತೆಂಕ ಪೇಟೆಯ ಉತ್ತರ ಶಾಲೆಯಲ್ಲಿ ಮತ ಚಲಾಯಿಸಿದರು.
ಬಳಿಕ ಮಾತನಾಡಿದ ಅವರು ಮತದಾನ ಮಾಡದಿದ್ದರೆ ಚರ್ಚೆಗೆ ಕಾರಣವಾಗುತ್ತದೆ ಎಂಬ ಕಾರಣಕ್ಕೆ ಕೊನೆಗೆ ನಿರ್ಧಾರ ಬದಲಾಯಿಸಿ ಮತ ಚಲಾಯಿಸಿದೆ ಎಂದರು.
ಮಂಗಳೂರಿನ ಶಿವಭಾಗ್ ನಲ್ಲಿ ಮತದಾನ ಕೇಂದ್ರದ ಸಮೀಪ ಹಾಕಿದ ಬೂತನ್ನು ತೆರವುಗೊಳಿಸಲಾಯಿತು.
Click this button or press Ctrl+G to toggle between Kannada and English