ಮಂಗಳೂರು : ರವೀಂದ್ರ ಕಲಾಭವನದಲ್ಲಿ 9ನೇ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ

5:21 PM, Saturday, March 9th, 2013
Share
1 Star2 Stars3 Stars4 Stars5 Stars
(No Ratings Yet)
Loading...

Vidyarhi sahitya sammelanaಮಂಗಳೂರು : ಮಂಗಳೂರು ವಿಶ್ವ ವಿದ್ಯಾನಿಲಯ ಸ್ನಾತಕೋತ್ತರ ಹಳೆ ವಿದ್ಯಾರ್ಥಿ ಸಂಘ ಹಾಗೂ ವಿಶ್ವ ವಿದ್ಯಾನಿಲಯ ಕಾಲೇಜಿನ ಕನ್ನಡ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ವಿಶ್ವವಿದ್ಯಾನಿಲಯ ಮಟ್ಟದ 9ನೇ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನವು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಮಾರ್ಚ್ 9 -ಶನಿವಾರ ನಡೆಯಿತು.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಖ್ಯಾತ ಸಾಹಿತಿ ಬೊಳುವಾರು ಮಹಮ್ಮದ್ ಕುಂಞ ಅವರು ಸಾಹಿತ್ಯ ಸಮ್ಮೇಳನ ವನ್ನು ಉದ್ಘಾಟಿಸಿದರು.  ತಮ್ಮ ಮಕ್ಕಳಿಗೆ ಎಳವೆಯಲ್ಲಿಯೇ ಜಾತಿ ಧರ್ಮದ ಬಗೆಗೆ ತಪ್ಪು ಸಂದೇಶವನ್ನು ಕೊಡಬಾರಾದು. ಅದರಿಂದ  ಮಕ್ಕಳು  ಕೂಡ ಅದೇ ಮಾರ್ಗದಲ್ಲಿ ನಡೆದು  ಇತರ ಧರ್ಮಗಳನ್ನು ದ್ವೇಶಿಸುವ ಪ್ರವೃತ್ತಿಯನ್ನು ಬೆಳೆಸುತ್ತಾರೆ ಎಂದು  ಹೇಳಿದರು.

ಜಾತಿ ಧರ್ಮದ ಬೀಜ ಬಿತ್ತುವ ಕೆಲಸವನ್ನು ಮೊದಲು ಹೆತ್ತವರು ಮಾಡಿದರೆ ಮಕ್ಕಳು ತಮಗೆ ಗೊತ್ತಿಲ್ಲದಂತೆಯೇ ಇತರ ಧರ್ಮದ ಬಗೆಗೆ ದ್ವೇಷದ ನಿಲುವನ್ನು ತಾಳುತ್ತಾರೆ ಇದು ಸಮಾಜದಲ್ಲಿ ಅಶಾಂತಿಗೆ ಪ್ರಮುಖ ಕಾರಣವಾಗುತ್ತದೆ ಎಂದು ಹೇಳಿದರು.

ಸಾಹಿತ್ಯ ಬರೆಯುವುದು ಅಷ್ಟು ಕಷ್ಟದ ಕೆಲಸವಲ್ಲ ಮೊದಲಿಗೆ ಉತ್ತಮ ಪುಸ್ತಕಗಳನ್ನು ಓದಬೇಕು. ಆ ನಂತರ ನಮ್ಮ ಆಲೋಚನೆಗಳನ್ನು ಬರೆಯಲು ಪ್ರಯತ್ನಿಸಬೇಕು ಪ್ರಾರಂಭದಲ್ಲಿ ಒಂದು ಗೆರೆ ಬರೆದರೆ, ಆ ನಂತರ ವಾಕ್ಯವನ್ನು ಕುತೂಹಲಭರಿತವಾಗಿ ಬರೆಯಲು ಪ್ರಾರಂಭಿಸಬೇಕು ಹೀಗೆ ಮಾಡಿದಾಗ ಓದುವವನು ನಮ್ಮನ್ನು ಹಿಂಬಾಲಿಸುತ್ತಾನೆ,. ನಾವು ಇನ್ನೊಬ್ಬರಿಗಾಗಿ ಬರೆಯಬಾರದು ನಮ್ಮ ಸ್ವಂತ ಖುಷಿಗಾಗಿ ಬರೆಯಬೇಕು ಎಂದು ಹೇಳಿದರು.

ಹಿಂದಿನ ಕಾಲದಲ್ಲಿ ಮುಸ್ಲಿಂ ಮಹಿಳೆಯರಿಗೆ ಶಿಕ್ಷಣ ಪಡೆಯುವ ಅಧಿಕಾರವಿರಲಿಲ್ಲ ಆದರೆ ಈಗೀಗ ಅವರು ಶಿಕ್ಷಣ ಪಡೆಯುತ್ತಿದ್ದಾರೆ ಅವರಿಗೆ ಇತರ ಧರ್ಮದವರು ಪ್ರೋತ್ಸಾಹಿಸಿದಾಗ ಇನ್ನಷ್ಟು ಉತ್ತೇಜನ ಸಿಗುತ್ತದೆ. ನಾನು ಹಿಜಬ್ ಧರಿಸುವುದರ ಪರವಾಗಿರದಿದ್ದರೂ ಮುಸ್ಲಿಂ ಹುಡುಗಿಯರು ಹಿಜಾಬ್ ಧರಿಸಿದರೆ ಅವರನ್ನು ವಿರೋಧಿಸಿ ಶಿಕ್ಷಣದಿಂದ ವಂಚಿತರಾಗುವಂತೆ ಮಾಡಬೇಡಿ ಎಂದು ವಿನಂತಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಕುಲಸಚಿವ ಕೆ.ಚಿನ್ನಪ್ಪಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಡಾ.ಹೆಚ್.ಆರ್. ಲಕ್ಷ್ಮಿನಾರಾಯಣ ಭಟ್, ನಾಗಪ್ಪ ಗೌಡ, ರಾಜೇಶ್ ಪದ್ಮಾರ್, ಶಿಬಂತಿ ಪದ್ಮನಾಭ ಹಾಗೂ ಇತರರು ಉಪಸ್ಥಿತರಿದ್ದರು.

ಡಾ. ಚಂದ್ರಶೇಖರ್ ದಾಮ್ಲೆ ಶಿಕ್ಷಣ ಚಿಂತಕರು ಸುಳ್ಯ ಇವರಿಂದ ಪ್ರಬಂಧ ಗೋಷ್ಟಿ,  ಡಾ, ಪಾರ್ವತಿ ಜಿ. ಐತಾಳ್ ರವರಿಂದ ಕಥಾಗೋಷ್ಟಿ, ಡಾ, ಗೀತಾ ವಸಂತ ರವರಿಂದ ಕವಿಗೋಷ್ಟಿ ನಡೆಯಿತು.

Vidyarhi sahitya sammelana

Vidyarhi sahitya sammelana

Vidyarhi sahitya sammelana

Vidyarhi sahitya sammelana

Vidyarthi Sahitya Sammelana

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English