ಮಕ್ಕಳ ಶಿಕ್ಷಣ ಹಕ್ಕು ಕಾಯಿದೆ- 2009ರ ಸಮರ್ಪಕ ಜಾರಿಗೆ ಎಲ್ಲರ ಪ್ರಯತ್ನ ಅಗತ್ಯ : ಡಾ.ಉಮೇಶ್ ಆರಾಧ್ಯ

5:17 PM, Tuesday, March 12th, 2013
Share
1 Star2 Stars3 Stars4 Stars5 Stars
(No Ratings Yet)
Loading...

Children's Right to Education Actಮಂಗಳೂರು : ಇಂದು ನಗರದ ಎಸ್.ಡಿ.ಎಂ ಕಾಲೇಜಿನಲ್ಲಿ ಮಕ್ಕಳ ಶಿಕ್ಷಣ ಹಕ್ಕು ಕಾಯಿದೆ- 2009ರ ಕುರಿತು ಸಾರ್ವಜನಿಕ ಸಂವಾದ ಕಾರ್ಯಕ್ರಮವನ್ನು  ಏರ್ಪಡಿಸಲಾಗಿದ್ದು ಇದರ ಉದ್ಘಾಟನೆಯನ್ನು  ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಡಾ.ಉಮೇಶ್ ಆರಾಧ್ಯ ನೆರವೇರಿಸಿದರು. ಎಸ್.ಡಿ.ಎಂ ಲಾ ಕಾಲೇಜು ಮಂಗಳೂರು, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ದ.ಕ ಹಾಗೂ ವಿವಿಧ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಉದ್ಘಾಟನೆಯನ್ನು ನೆರವೇರಿಸಿದ  ಡಾ.ಉಮೇಶ್ ಆರಾಧ್ಯ  ಮಾತನಾಡಿ, ಹಿಂದಿನ ದಿನಗಳಲ್ಲಿ ಶಿಕ್ಷಣ ಪಡೆಯಲು ಬಹಳಷ್ಟು ಶ್ರಮ ಪಡಬೇಕಿತ್ತು ಆದರೆ ಇಂದು ಈ ಪರಿಸ್ಥಿತಿಯಿಲ್ಲ. 2009ರಲ್ಲಿ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯನ್ನು ಸರ್ಕಾರ ಜಾರಿಗೆ ತಂದರು ಇದರ ಬಗ್ಗೆ ಸರಿಯಾದ ಮಾಹಿತಿ ಜನಸಾಮಾನ್ಯರಿಗೆ ಲಭ್ಯವಾಗದೆ ಇದರ ಸದುಪಯೋಗವಾಗಲಿಲ್ಲ ಆದ್ದರಿಂದ ಈ ಕಾಯ್ದೆಯ ಸದುಪಯೋಗದತ್ತ ಎಲ್ಲರು ಪ್ರಯತ್ನಪಡುವ ಅಗತ್ಯತೆ ಇದೆ, ಈ ಕಾರ್ಯಕ್ರಮದ ಮೂಲಕ  ಶಿಕ್ಷಣದ ಬಗೆಗೆ ಜಿಲ್ಲೆಯಲ್ಲಿ ಇನ್ನಷ್ಟು ಜಾಗೃತಿ ಉಂಟಾಗಲಿ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪಡಿ ಸಂಸ್ಥೆಯ ರೆನ್ನಿ ಡಿಸೋಜ ಮಾತನಾಡಿ, ಭಾರತವು 1989 ರಲ್ಲಿ ಮಕ್ಕಳ ಹಕ್ಕುಗಳ ಬಗೆಗಿನ ಕಾಯ್ದೆಯನ್ನು ಇತರ ರಾಷ್ಟ್ರಗಳೊಂದಿಗೆ ಸೇರಿ ಜಾರಿಗೆ ತಂದರೂ ಮಕ್ಕಳ ಶಿಕ್ಷಣದ ಅಗತ್ಯತೆ ಯನ್ನು ಮನಗಂಡು 2009ರಲ್ಲಿ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿತು ಆದರೆ  ಇದರ ಅನುಷ್ಠಾನ ಸಮರ್ಪಕ ರೀತಿಯಲ್ಲಿ ಜಾರಿಗೊಳ್ಳದೆ ಮೂಲೆಗುಂಪಾಯಿತು. ಆದರಿಂದ  ಕಾಯ್ದೆಯ ಸಮರ್ಪಕ ಜಾರಿಗೆ ಪ್ರಾಮಾಣಿಕವಾದ ಪ್ರಯತ್ನ ಮಾಡೋಣ ಎಂದವರು ಹೇಳಿದರು.

ಸಮಾರಂಭದಲ್ಲಿ ಮಕ್ಕಳ ಹಕ್ಕುಗಳ ಹೋರಾಟಗಾರ ವಾಸುದೇವ ಶರ್ಮ, ಎಸ್ ಡಿ ಎಂ ಕಾನೂನು ವಿದ್ಯಾಲಯದ ಉಪನ್ಯಾಸಕ ಮಹೇಶ್ಚಂದ್ರ, ಮಕ್ಕಳ ಕಲ್ಯಾಣ ಸಮಿತಿ ದಕ್ಷಿಣ ಕನ್ನಡ ಜಿಲ್ಲೆಯ ಅಧ್ಯಕ್ಷೆ ಆಶಾ ನಾಯಕ್, ಬಾಲ ನ್ಯಾಯ ಮಂಡಳಿಯ ಸದಸ್ಯೆ ಡಾ.ರಮೀಳಾ ಶೇಖರ್, ಶಿಕ್ಷಣ ಚಿಂತಕ ಕೃಷ್ಣ ಶಾಸ್ತ್ರಿ ಬಾಳಿಲ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English