ಮಂಗಳೂರು : ನಗರದ ಜಪ್ಪು ಬಳಿ ಮಂಗಳೂರು ಮಹಾನಗರಪಾಲಿಕೆಯ ಸಿಬ್ಬಂದಿಗಳು ಒಡೆದ ನೀರಿನ ಪೈಪ್ ಲೈನ್ ರಿಪೇರಿ ಮಾಡುತ್ತಿದ್ದ ವೇಳೆ ಸಂತ ಆ್ಯಂಟನಿ ಆಶ್ರಮದ ಆವರಣ ಗೋಡೆ ಕುಸಿದು ಬಿದ್ದ ಘಟನೆ ಇಂದು ನಡೆದಿದೆ.
ಒಡೆದ ಪೈಪ್ ನಿಂದಾಗಿ ನೀರು ಸೋರಿಕೆಯಾಗುತ್ತಿದ್ದರಿಂದ ಅದನ್ನು ಸರಿ ಪಡಿಸುವ ಸಲುವಾಗಿ ಸಂತ ಆ್ಯಂಟನಿ ಆಶ್ರಮದ ಆವರಣ ಗೋಡೆ ಬಳಿಯ ಮಣ್ಣನ್ನು ತೆಗೆಯಲಾಗುತ್ತಿತ್ತು ಇದರ ಪರಿಣಾಮವಾಗಿ ಆಶ್ರಮದ ಗೋಡೆ ಕುಸಿದು ಬಿದ್ದಿದ್ದು ಆಶ್ರಮವು ಸುಮಾರು 115 ವರ್ಷಗಳಷ್ಟು ಹಳೆಯದಾಗಿದ್ದು ನಿರಾಶ್ರಿತರು ಸೇರಿದಂತೆ ಸುಮಾರು 400 ಮಂದಿ ಈ ಆಶ್ರಮದಲ್ಲಿ ಆಶ್ರಯ ಪಡೆದಿದ್ದಾರೆ.
ಪಾಲಿಕೆ ಸದಸ್ಯೆ ಜೆಸಿಂತ ಅಲ್ಫ್ರೆಡ್ ರವರು ಪಾಲಿಕೆಯ ವತಿಯಿಂದ ಆಶ್ರಮದ ಗೋಡೆ ದುರಸ್ಥಿಗೊಳಿಸಿ ಕೊಡುವುದಾಗಿ ತಿಳಿಸಿದ್ದಾರೆ.
Click this button or press Ctrl+G to toggle between Kannada and English