ಮಂಗಳೂರು : ಖಾನ್ ಬಹಾದೂರ್ ಹಾಜಿ ಅಬ್ದುಲ್ಲಾ ಹಾಜಿ ಕಾಸಿಂ ಸಾಹೇಬ್ ಬಹಾದೂರ್ ರವರಿಂದ 1906ರ ಮಾರ್ಚ್ 12ರಂದು ಉಡುಪಿಯಲ್ಲಿ ಸ್ಥಾಪನೆಗೊಂಡ ಕಾರ್ಪೊರೇಶನ್ ಬ್ಯಾಂಕ್ ನ 108ನೇ ಸಂಸ್ಥಾಪನಾ ದಿನಾಚರಣೆ ಯನ್ನು ನಗರದ ಡಾ| ಟಿ.ಎಂ.ಎ ಪೈ ಇಂಟರ್ ನ್ಯಾಷನಲ್ ಕನ್ವೆನ್ಶನ್ ಸೆಂಟರ್ ನಲ್ಲಿ ಮಂಗಳವಾರ ಆಚರಿಸಲಾಯಿತು. ಸಮಾರಂಭವನ್ನು ಬ್ಯಾಂಕಿನ ಅಧ್ಯಕ್ಷ, ಆಡಳಿತ ನಿರ್ದೇಶಕ ಅಜಯ್ ಕುಮಾರ್ ಉದ್ಘಾಟಿಸಿದರು.
38 ರೂಪಾಯಿ, 13 ಆಣೆ ಹಾಗೂ 2 ಪೈಸೆಯ ಪ್ರಥಮ ದಿನದ ವ್ಯವಹಾರದೊಂದಿಗೆ ಕಾರ್ಯಾರಂಭಿಸಿದ ಕಾರ್ಪೊರೇಶನ್ ಬ್ಯಾಂಕ್ ಇಂದು 107 ವರ್ಷಗಳ ಸಾರ್ಥಕ ಸೇವೆಯನ್ನು ಪೂರೈಸಿ 108ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. 108ನೇ ಸಂಸ್ಥಾಧಿಪನಾ ದಿನಾಧಿಚರಣೆಯ ಸಂದರ್ಭದಲ್ಲಿ ಬ್ಯಾಂಕ್ 2,60,000 ಕೋಟಿ ರೂಪಾಯಿ ವ್ಯವಹಾರಕ್ಕೆ ತಲುಪಿ ಮುಂಚೂಣಿಯ ಬ್ಯಾಂಕ್‌ಗಳಲ್ಲೊಂದಾಗಿ ಗುರುತಿಸಿಕೊಂಡು ಈ ಮೂಲಕ ಗ್ರಾಹಕರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿದೆ ಹಾಗು ಕಾರ್ಪೊರೇಟ್ ಸೋಶಿಯಲ್ ಹೊಣೆಗಾರಿಕೆಯಲ್ಲಿ ಸದಾ ಮುಂಚೂಣಿಧಿಯಲ್ಲಿರುವ ಬ್ಯಾಂಕ್ ಸಂಸ್ಥಾಧಿಪನಾ ದಿನಾಚರಣೆ ಅಂಗವಾಗಿ ಹಲವಾರು ಸಮಾಜಸೇವಾ ಕಾರ್ಯಧಿಕ್ರಮಧಿಧಿಗಳನ್ನು ಕೈಗೊಂಡಿದೆ ಎಂದು ಬ್ಯಾಂಕಿನ ಅಧ್ಯಕ್ಷ, ಆಡಳಿತ ನಿರ್ದೇಶಕ ಅಜಯ್ ಕುಮಾರ್ ಹೇಳಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಸಂಸ್ಥಾಪಕ ಖಾನ್ ಬಹಾದೂರ್ ಹಾಜಿ ಅಬ್ದುಲ್ಲಾ ಹಾಜಿ ಕಾಸಿಂ ಸಾಹೇಬ್ ಬಹಾದೂರ್ ಅವರ ಭಾವಚಿತ್ರಕ್ಕೆ ಬ್ಯಾಂಕಿನ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಅಜಯ್ ಕುಮಾರ್ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರುಗಳಾದ ಅಮರ್‌ಲಾಲ್ ದೌಲ್ತಾನಿ ಹಾಗೂ ಬಿ.ಕೆ.ಶ್ರೀವಾಸ್ತವ ಅವರು ನಮನ ಸಲ್ಲಿಸಿದರು.
108ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಭಗವಾನ್ ಮಹಾವೀರ ವಿಕಲಾಂಗ ಸಹಾಯತ ಸಮಿತಿಯ ಸ್ಥಾಪಕ ಪದ್ಮಭೂಷಣ ದೇವೆಂದ್ರ ರಾಜ್ ಮೆಹ್ತಾ, ಗ್ರಾಮೀಣ ಪ್ರದೇಶ ಅಭಿವೃದ್ಧಿಗೆ ಮೈರಾಡದ ಮೂಲಕ ವಿಶೇಷ ಕೊಡುಗೆ ನೀಡಿದ ಪದ್ಮಶ್ರೀ ಅಲೋಶಿಯಸ್ ಪ್ರಕಾಶ್ ಫೆರ್ನಾಂಡಿಸ್, ಬಡವರ್ಗದ ಮಕ್ಕಳ ಉನ್ನತ ಶಿಕ್ಷಣಕ್ಕೆ ಶ್ರಮಿಸುತ್ತಿರುವ ಆನಂದ್ ಕುಮಾರ್ ಹಾಗೂ ಖ್ಯಾತ ಗಾಯಕ ಪದ್ಮಶ್ರೀ ಎ. ಹರಿಹರನ್ ಅವರಿಗೆ ಜೀವಮಾನ ಸಾಧನಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಭಾ ಕಾರ್ಯಕ್ರಮದ ಬಳಿಕ ಖ್ಯಾತ ಗಾಯಕ ಹರಿಹರನ್ ರವರಿಂದ ಸಂಗೀತ ಕಾರ್ಯಕ್ರಮ ಜರಗಿತು.
Click this button or press Ctrl+G to toggle between Kannada and English