ಬೆಳ್ತಂಗಡಿ : ಶಾಲಾ ಬಾಲಕಿ ಮೇಲೆ ಅತ್ಯಾಚಾರ ಯತ್ನ ನಾಲ್ವರ ಬಂಧನ

1:32 PM, Wednesday, March 13th, 2013
Share
1 Star2 Stars3 Stars4 Stars5 Stars
(No Ratings Yet)
Loading...

Belthangady ಬೆಳ್ತಂಗಡಿ :14 ವರ್ಷದ ಬಾಲಕಿ ಮೇಲೆ ಬಲಾತ್ಕಾರಕ್ಕೆ ಯತ್ನಿಸಿ ಕೊಲೆ ಬೆದರಿಕೆ ಹಾಕಿದ ಆರೋಪ ಮೇಲೆ ನಾಲ್ವರನ್ನು ಬೆಳ್ತಂಗಡಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಮಿತ್ತಬಾಗಿಲು ಗ್ರಾಮದ ಫಯಾಜ್‌ (19), ನಾಸಿರ್‌ (18), ನೌಶಾದ್‌ (19), ಭಂಡಾರಿಕೋಡಿ ಮನೆ ಶಾಕೀರ್‌ (19)  ಬಂಧಿತ ಆರೋಪಿಗಳು.

ಮಾರ್ಚ್ 9ರಂದು ಮನೆಗೆ ಒಂಟಿಯಾಗಿ ಬರುತ್ತಿದ್ದ ಬಂಡಾರಿಕೋಡಿ ಸರಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿನಿಯೊಬ್ಬಳನ್ನು ಪಾದೆಗುತ್ತು ಎಂಬಲ್ಲಿ ಈ ನಾಲ್ವರು ಯುವಕರು ನೇತ್ರಾವತಿ ನದಿ ತಟದಲ್ಲಿ ಅಡ್ಡಗಟ್ಟಿ ತಮ್ಮ ಜತೆ ಬರುವಂತೆ ಒತ್ತಾಯಿಸಿದ್ದು ಇದಕ್ಕೆ ಬಾಲಕಿ ವಿರೋಧ ವ್ಯಕ್ತಪಡಿಸಿದಾಗ ಆರೋಪಿಗಳು ಆಕೆಯನ್ನು ಹೊತ್ತುಕೊಂಡು ಹೋಗುವುದಾಗಿ ಹೇಳಿದ್ದಾರೆ ಇದರಿಂದ ಹೆದರಿದ  ಬಾಲಕಿ ಬೊಬ್ಬೆ ಹೊಡೆದಿದ್ದು ಬೊಬ್ಬೆ ಕೇಳಿ ಅಲ್ಲೇ ಸಮೀಪದಲ್ಲಿ ಹಸು ಮೇಯಿಸುತ್ತಿದ್ದ ಮಹಿಳೆಯೊಬ್ಬರು ಬರುವುದನ್ನು ಕಂಡ ಆರೋಪಿಗಳು ವಿಷಯ ಬಹಿರಂಗ ಪಡಿಸಿದರೆ ಕೊಲ್ಲುವುದಾಗಿ ಹೆದರಿಸಿ ಪರಾರಿಯಾಗಿದ್ದಾರೆ.

ಘಟನೆ ಬಳಿಕ  ವಿದ್ಯಾರ್ಥಿನಿ ಶಾಲೆಗೆ ಹೋಗಲು ಹಿಂಜರಿದ ಸಂದರ್ಭ ವಿಷಯ ಬೆಳಕಿಗೆ ಬಂದಿದ್ದು, ಮನೆಯವರು  ಸ್ಥಳೀಯ ಹಿಂದೂ ಸಂಘಟನೆಯ ನೆರವಿನೊಂದಿಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ದೂರು ದಾಖಲಿಸಿಕೊಂಡ ಬೆಳ್ತಂಗಡಿ ಎಸ್‌ಐ ಯೋಗೀಶ್‌ ಕುಮಾರ್‌ ತತ್‌ಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English