ಮಂಗಳೂರು : ಭಾರತದಲ್ಲಿ ಶೇಕಡಾ 70 ಜನರು ಹಳ್ಳಿ ಪ್ರದೇಶದಲ್ಲಿ ವಾಸವಿದ್ದು, ಅವರಲ್ಲಿ ಶೇಕಡಾ 20 ಮಂದಿಗೆ ಮಾತ್ರ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯ ದೊರಕುತ್ತಿದೆ, ಜಗತ್ತಿನ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಉನ್ನತ ಶಿಕ್ಷಣಕ್ಕೆ ಸೇರುವವರ ಪ್ರಮಾಣ ಬಹಳಳಷ್ಟು ಕಡಿಮೆ ಇದ್ದು, ಪ್ರಸ್ತುತ ಕೇವಲ ಶೇಕಡಾ 14 ಮಂದಿ ಮಾತ್ರ ಉನ್ನತ ಶಿಕ್ಷಣ ಪಡೆಯುತ್ತಿದ್ದು, ಈ ಪ್ರಮಾಣ 2030ರಲ್ಲಿ ಶೇಕಡಾ 30 ಕ್ಕೇರಬೇಕು ಈ ಪ್ರಮಾಣವನ್ನು ಹೆಚ್ಚಿಸುವ ಗುರುಯನ್ನು ಸರ್ಕಾರ ಹಾಕಿಕೊಂಡಿದ್ದು ಇದಕ್ಕೆ ಖಾಸಗಿಯವರ ಸಹಕಾರವು ಅಗತ್ಯವಾಗಿದೆ ಎಂದು ಮಣಿಪಾಲ ವಿಶ್ವವಿದ್ಯಾನಿಲಯದ ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಹೇಳಿದರು.
ಅವರು ಬುಧವಾರ ಕಂಕನಾಡಿ ಫಾ. ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಶನ್ಸ್ ಘಟಿಕೋತ್ಸವದಲ್ಲಿ ಪದವಿ ಪ್ರದಾನ ನೆರವೇರಿಸಿ ಮಾತನಾಡಿದರು.
ಕಲಿಕೆ ನಿರಂತರ ಪ್ರಕ್ರಿಯೆಯಾಗಿದ್ದು, ಉನ್ನತ ಶಿಕ್ಷಣ ಪಡೆಯುವ ಅವಕಾಶವನ್ನು ಹೆಚ್ಚಿನ ಮಂದಿಗೆ ಕಲ್ಪಿಸಲು ಸುಮಾರು 1,500ರಿಂದ 1,600 ವಿವಿಗಳ ಅಗತ್ಯವಿದೆ ಆದರೆ ದೇಶದಲ್ಲಿ ಪ್ರಸ್ತುತ ಇರುವ ವಿವಿಗಳ ಸಂಖ್ಯೆ 600 ಮಾತ್ರ. ನಿರಂತರ ಶ್ರಮದಿಂದ ನಾವು ಜೀವನದಲ್ಲಿ ಉನ್ನತವಾದುದನ್ನು ಸಾಧಿಸಲು ಸಾಧ್ಯವಿದೆ ಎಂದವರು ಹೇಳಿದರು.
ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ರೆ.ಡಾ. ಅಲೋಶಿಯಸ್ ಪೌಲ್ ಡಿಸೋಜ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾಧಿಕಾರಿ ಎನ್. ಪ್ರಕಾಶ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.
ಆಡಳಿತಾಧಿಕಾರಿ ರೆ.ಫಾ. ರಿಚರ್ಡ್ ಕುವೆಲ್ಲೊ, ರೆ.ಫಾ. ರುಡಾಲ್ ರವಿ ಡೆಸಾ, ಡೀನ್ ಡಾ.ಜೆ.ಪಿ. ಆಳ್ವ, ಪ್ರಿನ್ಸಿಪಾಲ್ ಡಾ. ಶ್ರೀನಾಥ್ ರಾವ್, ಸಿ.ವಿನ್ನಿಫ್ರೆಡ್ ಡಿಸೋಜ, ಅಖಿಲೇಶ್ ಪಿ.ಎಂ. ಉಪಸ್ಥಿತರಿದ್ದರು.
Click this button or press Ctrl+G to toggle between Kannada and English