ಮಂಗಳೂರು : ದಿವಂಗತ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ಹುಟ್ಟು ಹಬ್ಬ ಆಚರಣೆ ಶುಕ್ರವಾರ ಮಂಗಳೂರಿನ ಕಾಂಗ್ರೆಸ್ ಕಛೇರಿಯಲ್ಲಿ ನಡೆಯಿತು.
ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ರಮಾನಾಥ ರೈ 21ನೇ ಶತಮಾನದಲ್ಲಿ ಭಾರತವನ್ನು ಅಭಿವೃದ್ದಿಯ ಪಥಕ್ಕೆ ಕೊಂಡುಹೋಗಬೇಕೆಂದು ಕನಸು ಕಂಡವರು ರಾಜಿವ್ ಗಾಂಧಿ , ಇವರು ಆಕಸ್ಮಿಕ ಸನ್ನಿವೇಷದಿಂದ ರಾಜಕೀಯಕ್ಕೆ ಪ್ರವೇಶ ಮಾಡಿದರು, ಸಾಕ್ಷಾರತಾ ಆಂದೋಲನಕ್ಕೆ ಕಾರಣ ರಾಜೀವ್ ಗಾಂಧಿಯವರಾಗಿದ್ದಾರೆ. ಮೀಸಲಾತಿಯ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಯನ್ನು ತಂದವರು ರಾಜೀವ್ ಗಾಂಧಿಯವರಾಗಿದ್ದು ಅವರ ಮುಖದಲ್ಲೇ ನಾಯಕತ್ವದ ಗುಣ ಎದ್ದು ಕಾಣುವುದನ್ನು ನಾವೆಲ್ಲರೂ ಗಮನಿಸಬಹುದು ಎಂದು ಅವರು ತಿಳಿಸಿದರು.
ಸಾಮಾಜಿಕ ನ್ಯಾಯದಿಂದ ವಂಚಿತರಾದ, ದುರ್ಬಲರಾದವರಿಗೆ ನ್ಯಾಯ ದೊರಕಿಸಿ ಕೊಡಲು ಶ್ರಮಿಸಿದ ವ್ಯಕ್ತಿ ಈ ದೇವರಾಜ ಅರಸು ಅಡಿಗ ಹಾಗೂ ಭೂಮಸೂದೆ ಕಾಯಿದೆಯನ್ನು ತಂದವರು ಅರಸು. ಬಡವರಿಗೆ ಒಂದು ಸೂರು ಕಟ್ಟಿ ಕೊಡಬೇಕು ಎಂಬ ನಿಟ್ಟಿನಲ್ಲಿ ಅವರು ಈ ಕಾಯ್ದೆಯನ್ನು ಜಾರಿಗೆ ತಂದರು. ಎಂದು ಬಿ.ರಮಾನಾಥ ರೈ ತಿಳಿಸಿದರು.
ಉಪಾಧ್ಯಕ್ಞರಾದ ಐವನ್ ಡಿ ಸೋಜಾ, ತಾರಾನಾಥ ಶೆಟ್ಟಿ ಪ್ರದಾನ ಕಾರ್ಯದರ್ಶಿ ಸದಾಶಿವ ಉಳ್ಳಾಲ ಅಲ್ಪ ಸಂಖ್ಯಾತರ ಅಧ್ಯಕ್ಷ ಮೊಯಿದ್ದೀನ್ ಭಾವ. ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ಶೆಟ್ಟಿ, ಸುರೇಶ್ ಉಳ್ಳಾಲ್, ಟಿ.ಕೆ. ಸುದೀರ್, ಪ್ರಕಾಶ್ ಶೆಟ್ಟಿ ಮತ್ತು ಮಮತ ಗಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English