ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಬಡವರಿಗೆ ಕೆ.ಜಿ.ಗೆ 1 ರೂ.ಗೆ ಅಕ್ಕಿ : ಜನಾರ್ದನ ಪೂಜಾರಿ

1:27 PM, Friday, March 15th, 2013
Share
1 Star2 Stars3 Stars4 Stars5 Stars
(No Ratings Yet)
Loading...

Bantwal Congress victory processionಬಂಟ್ವಾಳ : ಪುರಸಭಾ-ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ದಾಖಲಿಸಿರುವ ಹಿನ್ನಲೆಯಲ್ಲಿ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾರ್ಚ್ ೧೪  ಗುರುವಾರ ಸಂಜೆ ಬಿ.ಸಿ. ರೋಡಿನ ಪೂಂಜಾ ಮೈದಾನದಲ್ಲಿ ನೂತನ ಕಾಂಗ್ರೆಸ್ ಸದಸ್ಯರ ಅಭಿನಂದನೆ ಮತ್ತು ಮತದಾರರಿಗೆ ಕೃತಜ್ಞತಾ ಸಭೆಯನ್ನು ಆಯೋಗಿಸಲಾಗಿತ್ತು.

ಸಮಾರಂಭಕ್ಕೂ ಮೊದಲು ನೂತನ ಸದಸ್ಯರನ್ನು ಬಿ.ಸಿ.ರೋಡಿನ ಮುಖ್ಯ ವೃತ್ತದ ಬಳಿಯಿಂದ ಮೈದಾನದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಕರೆತರಲಾಯಿತು.

ಸಭೆಯನ್ನು  ಕೇಂದ್ರದ ಮಾಜಿ ವಿತ್ತ ಸಚಿವ ಬಿ.ಜನಾರ್ದನ ಪೂಜಾರಿ ಉದ್ಘಾಟಿಸಿದರು. ಸ್ಥಳೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಗೆ ಇದು ಕೇವಲ ಸೆಮಿಫೈನಲ್ ಗೆದ್ದಂತೆ,  ಆದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ  ಗೆಲುವು ದಾಖಲಿಸುವುದರ ಕಡೆ ಕಾರ್ಯಕರ್ತರು ಗಮನ ಹರಿಸುವುದು ಮುಖ್ಯ ಎಂದವರು ಹೇಳಿದರು.

ಈ ಸಮಾರಂಭವು ಕಾಂಗ್ರೆಸ್ ಗೆಲುವಿನ ವಿಜಯೋತ್ಸವವಲ್ಲ ಬದಲಿಗೆ ವಿಧಾನಸಭಾ ಚುನಾವಣೆಯ ಮೊದಲ ಪ್ರಚಾರ ಸಭೆ ಎಂದು ಹೇಳಿದ ಅವರು ಮುಂಬರುವ ಕರ್ನಾಟಕ ವಿಧಾನಸಭಾ ಚುನಾ ವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಬಡವರಿಗೆ ಕೆ.ಜಿ.ಗೆ 1 ರೂ.ಗೆ ಅಕ್ಕಿ ನೀಡಲು ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸಿಕೊಳ್ಳ ಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ಸಲಹೆ ನೀಡುವುದಾಗಿ ಘೋಷಿಸಿದ ಅವರು ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ, ಸಭಾಧ್ಯಕ್ಷತೆ ವಹಿಸಿದ್ದ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ರಮಾನಾಥ ರೈ ರವರು ಪಕ್ಷದ ಮೇಲೆ ಮತದಾರರು ಇರಿಸಿರುವ ನಂಬಿಕೆಯನ್ನು ಉಳಿಸಿಕೊಳ್ಳುವುದರೊಂದಿಗೆ  ಜಿಲ್ಲೆಯಲ್ಲಿ ಮತ್ತೆ ಭಯಮುಕ್ತ ವಾತಾವರಣವನ್ನು ನಿರ್ಮಿಸಲು ಪಕ್ಷ ಬದ್ಧವಾಗಿದೆ ಎಂದು ಹೇಳಿದರು.

ಪಕ್ಷದ ಪ್ರಮುಖರಾದ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಕೋಡಿಜಾಲ್ ಇಬ್ರಾಹೀಂ, ಬಿ.ಎಚ್.ಖಾದರ್, ಮಮತಾ ಗಟ್ಟಿ, ಎಂ.ಎಸ್.ಮುಹಮ್ಮದ್, ಚಂದ್ರ ಪ್ರಕಾಶ್ ಶೆಟ್ಟಿ, ಹರಿಕೃಷ್ಣ ಬಂಟ್ವಾಳ್, ಎ.ಸಿ.ಭಂಡಾರಿ, ಪದ್ಮನಾಭ ನರಿಂಗಾನ, ಶಾಹುಲ್ ಹಮೀದ್, ಪದ್ಮಶೇಖರ್ ಜೈನ್, ವಿಶ್ವನಾಥ ಗೌಡ ಮಣಿ, ಎಸ್.ಅಬ್ಬಾಸ್, ಸಂಜೀವ ಪೂಜಾರಿ, ಬಿ.ಕೆ.ಇದಿನಬ್ಬ, ಐಡಾ ಸುರೇಶ್, ಮಾಧವ ಮಾವೆ, ಮನಪಾ ಸದಸ್ಯರಾದ ಶಶಿಧರ ಹೆಗ್ಡೆ, ಭಾಸ್ಕರ ಮೊಯ್ಲಿ ಹಾಗೂ ವಿವಿಧ ಘಟಕದ ಪದಾಧಿಕಾರಿಗಳು, ನೂತನ ಪುರಸಭಾ ಸದಸ್ಯರು ವೇದಿಕೆಯಲ್ಲಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English