ಉಡುಪಿ : ಅಜ್ಜರಕಾಡು ಪುರಭವನದಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಉಡುಪಿಯ ಡಾ|ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ನಿರ್ದೇಶಕ ಡಾ|ಪಿ.ವಿ.ಭಂಡಾರಿಯವರಿಗೆ ‘ಸಂಯಮ 2013’ ಪ್ರಶಸ್ತಿಯನ್ನು ಶುಕ್ರವಾರ ಡಾ|ಹೆಗ್ಗಡೆಯವರು ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ|ಪಿ.ವಿ.ಭಂಡಾರಿಯವರು ಪ್ರಶಸ್ತಿ ಜೊತೆಗೆ ಬಂದ 1 ಲ.ರೂ. ಮೊತ್ತವನ್ನು ತಾನು ಕೆಲಸ ಮಾಡುತ್ತಿರುವ ಎ.ವಿ.ಬಾಳಿಗಾ ಚಾರಿಟೀಸ್‌ಗೆ ನೀಡುವುದಾಗಿ ಘೋಷಿಸಿದರು ಮತ್ತು ಪ್ರಶಸ್ತಿಯು ಇನ್ನಷ್ಟು ಕೆಲಸ ಮಾಡಲು ಪ್ರೇರಣೆ ನೀಡಿದೆ ಎಂದರು.
ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ಡಾ|ಡಿ.ವೀರೇಂದ್ರ ಹೆಗ್ಗಡೆ ಯವರು ಮದ್ಯ ಮಾರಾಟದ ಆದಾಯಕ್ಕಿಂತ ಹಾನಿ ಹೆಚ್ಚು ಎಂದು ಗೊತ್ತಿದ್ದರೂ ಅದು ಸಂಪೂರ್ಣ ನಿಷೇಧವಾಗಿಲ್ಲ, ಸಂಯಮ ಮತ್ತು ಮನೋನಿಗ್ರಹದ ಮೂಲಕ ಈ ಚಟದಿಂದ ವಿಮುಕ್ತಿ ಹೊಂದಬಹುದಾಗಿದೆ ಎಂದವರು ಹೇಳಿದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ, 3ನೆಯ ಹಣಕಾಸು ಆಯೋಗ ಅನುಷ್ಠಾ ಕಾರ್ಯಪಡೆ ಅಧ್ಯಕ್ಷ ಎ.ಜಿ.ಕೊಡ್ಗಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ತೆಂಗಿನ ನಾರು ಮಂಡಳಿ ಅಧ್ಯಕ್ಷೆ ಶೀಲಾ ಶೆಟ್ಟಿ, ಜಿ.ಪಂ. ಸಿಇಒ ಎಸ್.ಎ.ಪ್ರಭಾಕರ ಶರ್ಮಾ, ಅ.ಕ. ಜನಜಾಗೃತಿ ವೇದಿಕೆ ಅಧ್ಯಕ್ಷ ದೇವದಾಸ ಹೆಬ್ಟಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ದುಗ್ಗೆ ಗೌಡ, ತಾ.ಪಂ. ಅಧ್ಯಕ್ಷೆ ಗೌರಿ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English