ಹಿಂದೂ ವಿರೋಧಿ ನ್ಯಾಯಾಲಯದ ಆದೇಶವನ್ನು ವಿರೋಧಿಸಿ ಪ್ರತಿಭಟನೆ.

5:45 PM, Monday, October 18th, 2010
Share
1 Star2 Stars3 Stars4 Stars5 Stars
(No Ratings Yet)
Loading...

 ಹಿಂದೂ ಜನಜಾಗೃತಿ ಸಮಿತಿಮಂಗಳೂರು: ಹಿಂದೂ ಧಾರ್ಮಿಕ ಸ್ಥಳಗಳನ್ನು ಅನಧಿಕೃತವೆಂದು ತೆರವುಗೊಳಿಸುವುದು ಮತ್ತು ದೇವಸ್ಥಾನಗಳ ಸರಕಾರೀಕರಣವನ್ನು ಮಾಡಿ ಹಿಂದೂಗಳ ಧಾರ್ಮಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದನ್ನು ವಿರೋಧಿಸಿ ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಕಛೇರಿಯ ಎದುರು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಪ್ರತಿಭಟನೆ ನಡೆಯಿತು.
ದೇವಸ್ಥಾನಗಳು, ದೈವಸ್ಥಾನಗಳು ಧರ್ಮದ ಬೆನ್ನೆಲುಬು, ಧರ್ಮ ಇದ್ದಲ್ಲಿ ದೇಶ ಇರಬಹುದು. ದೇಶ ಉತ್ತಮ ಸ್ಥಿತಿಯಲ್ಲಿರಬೇಕಾದರೆ ಧರ್ಮಾಚರಣೆಯನ್ನು ಗೌರವಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತ ಲಕ್ಷ್ಮೀಶ ಕಬಲಡ್ಕ ಪ್ರತಿಭಟನಾ ಭಾಷಣದಲ್ಲಿ ಹೇಳಿದರು.

 ಹಿಂದೂ ಜನಜಾಗೃತಿ ಸಮಿತಿ
ಸಾವಿರಾರು ವರ್ಷಗಳಿಂದ ಆರಾಧಿಸಿಕೊಂಡು ಬರುತ್ತಿರುವ ದೈವ, ದೇವಸ್ಥಾನಗಳಿಗೆ ಪುರಾವೆಗಳಿಲ್ಲವೆಂದು ಉಚ್ಚ ನ್ಯಾಯಾಲಯ ಆದೇಶ ಹೊರಡಿಸಿರುವುದರಿಂದ ಹಿಂದೂ ಸಮಾಜಕ್ಕೆ ದೊಡ್ಡ ಅಘಾತವಾಗಿದೆ. ರಸ್ತೆ ಅಗಲೀಕರಣ, ನಗರಾಭಿವೃದ್ಧಿಯ ಹೆಸರಲ್ಲಿ ಸರಕಾರ ಮಾಡುವ ಹಿಂದೂ ವಿರೋಧಿ ಧೋರಣೆಗಳನ್ನು ಕೂಡಲೇ ಕೈಬಿಡಬೇಕೆಂದು ಹೇಳಿ ಪ್ರೊ. ಐ,ವಿ.ರಾವ್ ಆಡಳಿತ ಮೊಕ್ತೇಸರರು, ಸೋಮನಾಥ ದೇವಸ್ಥಾನ ಇನೋಳಿ ಇವರು ಹೇಳಿದರು.

 ಹಿಂದೂ ಜನಜಾಗೃತಿ ಸಮಿತಿ
ದ.ಕ ಜಿಲ್ಲೆಯ ಸಾರ್ವಜನಿಕ ಸ್ಥಳಗಳಲ್ಲಿ ಹಿಂದೂಗಳು ಅನಧಿಕೃತವಾಗಿ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸಿದ್ದಾರೆಂದು, ಈ ಧಾರ್ಮಿಕ ಸ್ಥಳಗಳನ್ನು  ತೆರವುಗೊಳಿಸಲು ಜಿಲ್ಲಾಡಳಿತ ನೋಟಿಸು ಜಾರಿಗೊಳಿಸಿದೆ. ಈ ವಿಲೇವಾರಿ ಪಟ್ಟಿಯಲ್ಲಿ ಜಿಲ್ಲೆಯ ಅನೇಕ ದೇವಸ್ಥಾನ, ದೈವಸ್ಥಾನ, ಭಜನಾ ಮಂದಿರ, ನಾಗಬನ, ಗರೋಡಿ, ಮಹಾಧ್ವಾರ ಮುಂತಾದ ಧಾರ್ಮಿಕ ಸ್ಥಳಗಳಿವೆ. ಅದರಲ್ಲಿ ಹೆಚ್ಚಿನ ಧಾರ್ಮಿಕ ಸ್ಥಳಗಳು ಸಾವಿರಾರು ವರ್ಷಗಳ ಇತಿಹಾಸವಿರುವ, ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದ ಸ್ಥಳಗಳಲ್ಲಿದೆ. ಇದು ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ಭಾವನೆಗೆ ನೋವಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಮೋಹನ ಗೌಡ ಹೇಳಿದರು.

 ಹಿಂದೂ ಜನಜಾಗೃತಿ ಸಮಿತಿ
ಇಂದು ಒಂದು ಕಡೆ ಸರಕಾರವು ಹಿಂದೂ ದೇವಸ್ಥಾನಗಳನ್ನು ಸರಕಾರೀಕರಣ ಮಾಡಿ, ಹಿಂದೂಗಳ ಧಾಮರ್ಿಕ ವಿಷಯದಲ್ಲಿ ಹಸ್ತಕ್ಷೇಪವನ್ನು ಮಾಡುತ್ತಿದೆ. ಸರಕಾರೀಕರಣದ ನಂತರ ನಮ್ಮ ದೇವಸ್ಥಾನಗಳ ಸ್ಥಿತಿ ಹಾಳಾಗಿದೆ. ಅನೇಕ ದೇವಸ್ಥಾನಗಳಲ್ಲಿ ಸರಕಾರಿ ಅಧಿಕಾರಿಗಳು ಕೋಟ್ಯಾಂತರ ರೂಪಾಯಿಗಳ ಅವ್ಯವಹಾರವನ್ನು ಮಾಡುತ್ತಿದ್ದಾರೆ ಮತ್ತು ಅನೇಕ ದೇವಸ್ಥಾನಗಳು ಪ್ರವಾಸೋಧ್ಯಮಕೇಂದ್ರವನ್ನಾಗಿ ಮಾಡುವ ಪ್ರಯತ್ನ ನಡೆಯುತ್ತಿದೆ. ಹಿಂದೂ ದೇವಸ್ಥಾನಗಳಿಂದ ಸಂಗ್ರಹವಾದ ಹಣವನ್ನು ಅನ್ಯಧರ್ಮಿಯರಿಗೆ ನೀಡಲಾಗುತ್ತಿದೆ ಎಂದು ಗೌಡ ಅಪಾದಿಸಿದರು.
ಸರಕಾರವು ತನ್ನ ಅಕಾರ್ಯಕ್ಷಮತೆ ಮತ್ತು ಭ್ರಷ್ಠಾಚಾರದಿಂದ ಎಲ್ಲಾ ಉದ್ಯಮಗಳನ್ನು ಇಂದು ಖಾಸಗೀಕರಣ ಮಾಡುತ್ತಿದೆ, ಆದರೆ ಹಿಂದೂ ದೇವಸ್ಥಾನಗಳನ್ನು ಮಾತ್ರ ಸರಕಾರೀಕರಣ ಮಾಡಲಾಗುತ್ತಿರುವುದು ವಿಪರ್ಯಾಸವಾಗಿದೆ. ಸ್ವತಃ ಜಾತ್ಯಾತೀತ ಸರಕಾರವು ಹಿಂದೂಗಳ ಧಾರ್ಮಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದನ್ನು ವಿರೋಧಿಸುತ್ತೇವೆ ಎಂದು ಅವರು ಹೇಳಿದರು.

 ಹಿಂದೂ ಜನಜಾಗೃತಿ ಸಮಿತಿ
ಹಿಂದೂ ದೇವಾಲಯಗಳೆಂದರೆ ಕೇವಲ ಪ್ರಾರ್ಥನಾ ಸ್ಥಳಗಳಲ್ಲ, ಅವು ಹಿಂದೂಗಳ ಪೂಜನೀಯ ಕೇಂದ್ರಗಳಾಗಿವೆ. ಅಲ್ಲಿ ಪ್ರತಿನಿತ್ಯ ನಡೆಯುವ ಪೂಜೆಯಿಂದ ದೇವಸ್ಥಾನಗಳು ದೈವೀ ಚೈತನ್ಯದ ತಾಣವಾಗಿದೆ. ಇಂತಹ ದೇವಸ್ಥಾನಗಳನ್ನು ನಾಶ ಮಾಡುವುದೆಂದರೆ ನಮ್ಮ ಈ ದೈವೀ ಚೈತನ್ಯವನ್ನು ನಾಶ ಮಾಡುವುದಾಗಿದೆ. ಈ ದೇವಸ್ಥಾನಗಳು ದೇಶದ ಪ್ರಾಚ್ಯ ಸಂಪತ್ತೆಂದು ಸಂರಕ್ಷಣೆ ಮಾಡಬೇಕು ಎಂದು ಹಿಂದೂ ಜನ ಜಾಗೃತಿ ಸಮಿತಿಯ ದ.ಕ. ಜಿಲ್ಲಾ ವಕ್ತಾರ ರಮೇಶ್ ಕುಕ್ಕುಂದೂರು ಹೇಳಿದರು.

 ಹಿಂದೂ ಜನಜಾಗೃತಿ ಸಮಿತಿ
ಸರಕಾರವು ಅನಧಿಕೃತವೆಂದು ಘೋಷಿಸಿದ ದೇವಸ್ಥಾನ, ದೈವಸ್ಥಾನ, ಭಜನಾಮಂದಿರ, ನಾಗಬನ, ಗರೋಡಿ ಮತ್ತು ಮಹಾಧ್ವಾರದಂತಹ ಎಲ್ಲಾ ಹಿಂದೂ ಧಾರ್ಮಿಕ ಸ್ಥಳಗಳನ್ನು ಅಧಿಕೃತಗೊಳಿಸಲು ಸೂಕ್ತ ವ್ಯವಸ್ಥೆ ಮಾಡುವ ಮೂಲಕ ಹಿಂದೂ ದೇವಸ್ಥಾನಗಳ ಸಂರಕ್ಷಣೆ ಮಾಡಬೇಕೆಂದು ಅವರು ಅಗ್ರಹಿಸಿದರು.
ಪ್ರತಿಭಟನೆಯಲ್ಲಿ ವಿ.ಎಲ್ ನಾಯಕ್, ಅನೇಕ ದೈವಸ್ಥಾನ ಮತ್ತು ದೇವಸ್ಥಾನಗಳ ಆಡಳಿತ ಮೊಕ್ತೇಸರರು ಭಾಗವಹಿಸಿದ್ದರು. ಬಳಿಕ ಮನವಿಯೊದನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಯಿತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English