ಮಂಗಳೂರು : ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷವು ಉತ್ತಮ ಸಾಧನೆ ತೋರಿದ್ದು ಮುಂಬರು ವಿಧಾನ ಸಭಾ ಚುನಾವಣೆಯಲ್ಲಿ ಎಲ್ಲ ಪಕ್ಷದ ಕ್ಷೇತ್ರಗಳಲ್ಲೂ ಸ್ಪರ್ಧಿಸಲ್ಲಿದ್ದೇವೆ ಎಂದು ಕೆಜೆಪಿಯ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ವಿ. ಧನಂಜಯ ಕುಮಾರ್ ಹೇಳಿದರು.
ಅವರು ಮಂಗಳೂರಿನ ನಂತೂರಿನಲ್ಲಿರುವ ಕೋಕನೆಟ್ ಗಾರ್ಡನ್ ಕಟ್ಟಡದಲ್ಲಿ ಕೆಜೆಪಿಯ ದ.ಕ. ಜಿಲ್ಲಾ ಕಚೇರಿಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ಸಚಿವರಾದ ಮುರುಗೇಶ್ ನಿರಾಣಿ ಮತ್ತು ರೇಣುಕಾಚಾರ್ಯ ಅವರು ಶೀಘ್ರದಲ್ಲೆ ಕೆಜೆಪಿಗೆ ಸೇರ್ಪಡೆಗೊಳ್ಳಲಿದ್ದು, ಬಿಜೆಪಿ ಸರಕಾರದಲ್ಲಿರುವ ಇನ್ನೂ ಕೆಲವು ಸಚಿವರು ಕೆಜೆಪಿಗೆ ಸೇರಲಿದ್ದಾರೆ ಜೊತೆಗೆ ಜೆಡಿಎಸ್ ನ ಡಾ| ನಾಡಗೌಡ, ರೈತ ಮುಖಂಡ ಕೆ.ಎಸ್. ಪುಟ್ಟಣ್ಣಯ್ಯ, ಪ್ರಜಾಪ್ರಗತಿರಂಗದ ಕೋಡಿಹಳ್ಳಿ ಚಂದ್ರಶೇಖರ್, ವೆಂಕಟಸ್ವಾಮಿ ಮತ್ತು ಯೋಗಾ ರಮೇಶ್ ಮೊದಲಾದವರಿಗೆ ಕೆಜೆಪಿ ಬೆಂಬಲ ನೀಡಲಿದೆ ಅಂದು ಅವರು ಹೇಳಿದರು.
ವಸತಿ ಸಚಿವ ಸೋಮಣ್ಣ ಯಡಿಯೂರಪ್ಪರನ್ನು ಮತ್ತೆ ಬಿಜೆಪಿಗೆ ಕರೆತರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು ಸೋಮಣ್ಣ ಅವರು ರಾಜ್ಯದ ಹೆಚ್ಚಿನ ಎಲ್ಲಾ ಪಕ್ಷಗಳಿಗೆ ವಲಸೆ ಹೋಗಿದ್ದು ಅವರ ಮಾತಿಗೆ ಬೆಲೆ ಕೊಡುವ ಅಗತ್ಯವಿಲ್ಲ ಅವರೊಬ್ಬ ವಲಸೆ ನಾಯಕರಿದ್ದಂತೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ದ.ಕ. ಜಿಲ್ಲಾಧ್ಯಕ್ಷ ರವೀಂದ್ರ ಶೆಟ್ಟಿ ಹರೇಕಳ, ರಾಜ್ಯ ಕಾರ್ಯದರ್ಶಿ ದಿನಕರ್ ಹಾಗೂ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಮರಿಯಮ್ಮ ಥೋಮಸ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English