ಶ್ರೀ ಭೂತನಾಥೇಶ್ವರ ದೇವಸ್ಥಾನ ಇದರ ಆಶ್ರಯದಲ್ಲಿ ಮಾರ್ಚ್ 24ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ

3:37 PM, Wednesday, March 20th, 2013
Share
1 Star2 Stars3 Stars4 Stars5 Stars
(No Ratings Yet)
Loading...

Free health check up campಮಂಗಳೂರು : ನಗರದ ಎ.ಜೆ. ಇನಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸಸ್ ಆಸ್ಪತ್ರೆಯಲ್ಲಿ ಮಾರ್ಚ್ 24ರಂದು  ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಶ್ರೀ ಭೂತನಾಥೇಶ್ವರ ದೇವಸ್ಥಾನ, ಬಡಗ ಎಡಪದವು, ಮಿಜಾರು, ಮಂಗಳೂರು ಇದರ ನೇತೃತ್ವದಲ್ಲಿ ಆಯೋಜಿಸಲಾಗಿದ್ದು ಈ ಶಿಬಿರದ ಹೆಚ್ಚಿನ  ಪ್ರಯೋಜನವನ್ನು ಜನರು ಪಡೆದುಕೊಳ್ಳಬೇಕೆಂದು ಶ್ರೀ ಭೂತನಾಥೇಶ್ವರ ದೇವಸ್ಥಾನದ ಮುಖ್ಯ ಸಂಘಟಕ ವಿಜಯನಾಥ ವಿಠಲ ಶೆಟ್ಟಿ ತಿಳಿಸಿದರು.

ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಮಾರ್ಚ್ 24ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಈ ಶಿಬಿರ ನಡೆಯಲಿದ್ದು  ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ, ಮಹಿಳೆಯರ ಆರೋಗ್ಯ ತಪಾಸಣೆ, ಮಕ್ಕಳ ಆರೋಗ್ಯ ತಪಾಸಣೆ ಮತ್ತು ಚರ್ಮ ತಪಾಸಣೆಯನ್ನು ತಜ್ಙ ವೈದ್ಯರ ತಂಡವು ನಡೆಸಲಿದೆ. ಆಸ್ಪತ್ರೆಯ ವಿವಿಧ ವಿಭಾಗಗಳ ಸಿಬ್ಬಂದಿ ಈ ಶಿಬಿರದಲ್ಲಿ ಸಹಕರಿಸಲಿದ್ದು ನುರಿತ ವೈದ್ಯರ ತಂಡ ಕಾರ್ಯನಿರ್ವಹಿಸಲಿದೆ ಎಂದರು.

ಶಿಬಿರಾರ್ಥಿಗಳ ಸಾಮಾನ್ಯ ಆರೋಗ್ಯ ತಪಾಸಣೆಯ ಅಡಿಯಲ್ಲಿ ಉಚಿತ ಕನ್ಸಲ್ಟೇಶನ್, ಚಿಕಿತ್ಸೆ ಮತ್ತು ಔಷಧಿ ಒದಗಿಸಲಾಗುವುದಲ್ಲದೆ, ಉಚಿತ ಇಸಿಜಿ ಪರೀಕ್ಷೆ, ರಕ್ತ ಪರೀಕ್ಷೆ ಮತ್ತು ಅಲ್ಟ್ರಾ ಸೌಂಡ್ ಸ್ಕ್ಯಾನ್  ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಹಿಳೆಯರ ಆರೋಗ್ಯ ತಪಾಸಣೆಯನ್ನು ನುರಿತ ಮಹಿಳಾ ವೈದ್ಯರೇ ನಡೆಸುವರು ಮತ್ತು ಗರ್ಭಧಾರಣೆ ಸಂಬಂಧಿತ ಮತ್ತು ಇತರ ಮಹಿಳಾ ಸ್ವಾಸ್ಥ್ಯ ಸಂಬಂಧಿತ ಸಮಸ್ಯೆಗಳಿಗೆ ಇಲ್ಲಿ ಪರಿಹಾರವನ್ನು ಕಂಡುಕೊಳ್ಳಬಹುದು ಎಂದರು.

ಗುಂಪು ವಿಮಾ ಯೋಜನೆ : ಜನಶ್ರೀ ಗುಂಪು ವಿಮಾ ಯೋಜನೆಯನ್ನು ಭಾರತೀಯ ಜೀವವಿಮಾ ನಿಗಮದ ಸಹಯೋಗದೊಂದಿಗೆ ಸಾದರಪಡಿಸಲಾಗುವುದು ಎಂದು ತಿಳಿಸಿದ ಅವರು ಈ ವಿಮಾ ಯೋಜನೆಯಲ್ಲಿ  ಜನರು ರೂ 100 ಪ್ರೀಮಿಯಮ್ ಪಾವತಿಸಿದಲ್ಲಿ ಒಂದು ವರ್ಷದ ಅವಧಿಯಲ್ಲಿ ರೂ 30,000ರ ವಿಮಾ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿ ತಿಳಿಸಿದರು.

ಶ್ರೀ ಭೂತನಾಥೇಶ್ವರ ದೇವಸ್ಥಾನದಲ್ಲಿ ಎಪ್ರಿಲ್ 20, 2013 ರಿಂದ ಜೂನ್ 2, 2013 ರವರೆಗೆ ಬಲೆ ತೆಲಿಪಾಲೆ ಎಂಬ ಹಾಸ್ಯ ಸ್ಪರ್ಧೆಯನ್ನು ಆಯೋಜಿಸಸಲಾಗಿದ್ದು, ಸ್ಪರ್ಧೆ, ಪ್ರತಿ ಶನಿವಾರ (ಸಂಜೆ 7ರಿಂದ 9ರವರೆಗೆ) ಮತ್ತು ಭಾನುವಾರ (4ರಿಂದ 9ಗಂಟೆಯವರೆಗೆ) ನಡೆಸಲಾಗುವುದು. ಸ್ಪರ್ಧೆಗಳು ಐದು ನಿಮಿಷದಲ್ಲಿ ತಮ್ಮ ಹಾಸ್ಯ ಪ್ರತಿಭೆಯನ್ನು ಸಾದರ ಪಡಿಸತಕ್ಕದ್ದು. ಅವರ ಪ್ರದರ್ಶನವನ್ನು ಖ್ಯಾತ ತೀರ್ಪುಗಾರರು ವೀಕ್ಷಿಸಿ ಅಂಕಗಳನ್ನು ನೀಡಲಿದ್ದು ಸ್ಪರ್ದೆಯ ವಿಜೇತರಿಗೆ ಆಕರ್ಷಕ ಬಹುಮಾನ ಗಳನ್ನು ಒಳಗೊಂಡಿದ್ದು , ಪ್ರದರ್ಶನದ ತುಣುಕುಗಳನ್ನು ನಮ್ಮ ಟಿವಿಯಲ್ಲಿ ವಾರದ ಎಲ್ಲಾ ದಿನಗಳಲ್ಲಿ ಪ್ರಸಾರಿಸಲಾಗುವುದು ಎಂದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English