ಏರ್ ಇಂಡಿಯಾ ಹಾಗು ಜೆಟ್ ಏರ್ ವೇಸ್ ನ ಮಂಗಳೂರು – ದುಬೈ ವಿಮಾನ ಯಾನದಲ್ಲಿ ಬದಲಾವಣೆ

5:38 PM, Thursday, March 21st, 2013
Share
1 Star2 Stars3 Stars4 Stars5 Stars
(No Ratings Yet)
Loading...

Jet Air flightsಮಂಗಳೂರು : ಭಾರತದ ಪ್ರಮುಖ ವಿಮಾನ ಯಾನ ಸಂಸ್ಥೆಗಳಾದ  ಏರ್ ಇಂಡಿಯಾ ಹಾಗು ಜೆಟ್ ಏರ್ ವೇಸ್ ಸಂಸ್ಥೆಗಳು ಮಂಗಳೂರು – ದುಬಾಯಿಗೆ ಪ್ರಾರಂಭಿಸಿದ್ದ ತಮ್ಮ ವಿಮಾನ ಯಾನದ ಸಮಯವನ್ನು ಬದಲಿಸಿದ್ದು ಇದು ಮಾರ್ಚ್ ೩೧ ರಿಂದ ಜಾರಿಗೆ ಬರಲಿದೆ.

ಏರ್ ಇಂಡಿಯಾ ಎಕ್ಸ್ ಪ್ರೆಸ್ ನ ಎರಡು ವಿಮಾನಗಳಲ್ಲಿ ಮೊದಲ ವಿಮಾನವು ದುಬಾಯಿಯಿಂದ ಮುಂಜಾನೆ ಬೆಳಿಗ್ಗೆ 4.25 ಕ್ಕೆ ಹೊರಟು ಬೆಳಿಗ್ಗೆ 9.30 ಕ್ಕೆ ಮಂಗಳೂರು ತಲುಪಲಿದೆ. ಎರಡನೇ ವಿಮಾನದ ಸಮಯವನ್ನು ಬದಲಿಸದೇ ಇದ್ದು, ಈ ವಿಮಾನವು ದುಬಾಯಿಯಿಂದ ಮದ್ಯಾಹ್ನ 12.10 ಕ್ಕೆ ಹೊರಟು ಮಂಗಳೂರಿನಲ್ಲಿ ಸಂಜೆ 5.25 ಕ್ಕೆ ತಲುಪಲಿದೆ.

ಜೆಟ್ ಏರ್ ವೇಸ್ ನ ವಿಮಾನಗಳು  ದುಬಾಯಿಯಿಂದ ಮುಂಜಾನೆ 2.20ಕ್ಕೆ ಹೊರಟು ಬೆಳಿಗ್ಗೆ 7.35ಕ್ಕೆ ಮಂಗಳೂರಿಗೆ ತಲುಪಲಿದೆ. ಮಂಗಳೂರಿನಿಂದ ರಾತ್ರಿ 11.05 ಕ್ಕೆ ಹೊರಡುವ ವಿಮಾನವು ರಾತ್ರಿ 1.20ಕ್ಕೆ ತಲುಪಲಿದೆ ಎಂದು ಕಂಪನಿಯ ಪ್ರಕಟನೆಗಳು ತಿಳಿಸಿವೆ.

Dharmasthala-Deepothsava  

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English