ಮಂಗಳೂರು : ಶ್ರೀರಾಮ ಜನ್ಮ ಭೂಮಿಯಾದ ಅಯೋಧ್ಯೆ ಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಕ್ಕೆ ಸಂಬಂಧಪಟ್ಟಂತೆ ಜನರಲ್ಲಿ ಜಾಗೃತಿ ಮೂಡಿಸಲು ದೇಶಾದ್ಯಂತ ಎಪ್ರಿಲ್ 11ರಿಂದ ಮೇ 13ರ ತನಕ ಒಟ್ಟು 33 ದಿನಗಳ ವಿಜಯ ಮಹಾಮಂತ್ರ ಜಪಾನುಷ್ಠಾನ ಹಮ್ಮಿಕೊಳ್ಳಲಾಗಿದ್ದು, ಕಳೆದ ಫೆಬ್ರವರಿ 6 ಮತ್ತು 7ರಂದು ಪ್ರಯಾಗದಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಭಾಗವಹಿಸಿದ ದೇಶದ ವಿವಿಧ ಹಿಂದೂ ಸಂಘಟನೆಗಳ ಸಂತರ ಸಮ್ಮೇಳನದಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂಬುದಾಗಿ ವಿಶ್ವ ಹಿಂದೂ ಪರಿಷತ್‌ನ ಕರ್ನಾಟಕ ಪ್ರಾಂತ ಕಾರ್ಯದರ್ಶಿ ಟಿ.ಎ.ಪಿ. ಶೆಣೈ ತಿಳಿಸಿದರು.
ಅವರು ಗುರುವಾರ ನಗರದಲ್ಲಿ ನಡೆದ ಪತ್ರಿಕಾ ಘೋಷ್ಟಿಯಲ್ಲಿ ಮಾತನಾಡುತ್ತಾ, ಯುಗಾದಿಯಿಂದ ಅಕ್ಷಯತದಿಗೆ ವರೆಗೆ ಈ ಅಭಿಯಾನ ನಡೆಯಲಿದ್ದು, ಶ್ರೀರಾಮ ಜಯ ರಾಮ ಜಯ ಜಯ ರಾಮ’ ಎಂಬ ವಿಜಯ ಮಹಾಮಂತ್ರ ವನ್ನು
ಪ್ರತಿ ದಿನ 13 ಮಾಲೆಗಳಷ್ಟು ಬಾರಿ ಜಪಿಸಬೇಕು. ಈ ಅಭಿಯಾನದಲ್ಲಿ ಪ್ರತಿಯೊಂದು ಹಿಂದೂ ಕುಟುಂಬಗಳು ಭಾಗವಹಿಸಬೇಕು ಎಂದು ಅವರು ಕರೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಭಾರತ ಸಂಘಟನಾ ಕಾರ್ಯದರ್ಶಿ ಸುಧಾಂಶು ಪಟ್ನಾಯಕ್, ವಿಶ್ವ ಹಿಂದೂ ಪರಿಷತ್‌ನ ಮಂಗಳೂರು ವಿಭಾಗ ಕಾರ್ಯದರ್ಶಿ ಕೃಷ್ಣ ಮೂರ್ತಿ, ಬಾಯಾಡಿ ವೆಂಕಟರಮಣ ಭಟ್, ಬಜರಂಗದಳದ ವಿಭಾಗ ಸಂಚಾಲಕ ಶರಣ್ ಪಂಪ್‌ವೆಲ್ ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English