ಕನಿಲ ಶ್ರೀ ಭಗವತೀ ಕ್ಷೇತ್ರದಲ್ಲಿ ಭರಣಿ ಮಹೋತ್ಸವ

2:36 PM, Friday, March 22nd, 2013
Share
1 Star2 Stars3 Stars4 Stars5 Stars
(No Ratings Yet)
Loading...

Kanila Temple ಮಂಜೇಶ್ವರ : ಕನಿಲ ಶ್ರೀ ಭಗವತೀ  ಕ್ಷೇತ್ರ ಮಂಜೇಶ್ವರ ಕಾಸರಗೋಡು ಜಿಲ್ಲೆ. ಇಲ್ಲಿ ಭರಣಿ ಮಹೋತ್ಸವವು ಮಾರ್ಚ್ 21 ಗುರುವಾರ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜ್ರುಂಭಣೆಯಿಂದ ನಡೆಯಿತು.

Kanila Templeರಾತ್ರಿ ನಡೆದ ಧಾರ್ಮಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಮುಜರಾಯಿ ಮತ್ತು ದತ್ತಿ ಇಲಾಖೆ ಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ದೀಪ ಬೆಳಗಿಸಿ ಉದ್ಘಾಟಿಸಿದರು.

Kanila Templeಮಂಜೇಶ್ವವರದ ಗುಡ್ಡದ ಮೇಲಿರುವ ಈ ಸುಂದರ ಕ್ಷೇತ್ರ ಧಾರ್ಮಿಕ ಪಾವಿತ್ರ್ಯತೆ ಹಾಗೂ ಮನಸ್ಸಿನ ನಿಯಂತ್ರಣಕ್ಕೆ ಪ್ರಶಾಂತ ತಾಣ ಎಂದು ಹೇಳಿದರು. ಭಗವಂತನ ನಿತ್ಯ ಸ್ಮರಣೆಯಿಂದ ಮಾನವಾತ್ಮಕ ಚಿಂತನೆಗಳನ್ನು ಮೂಡಿಸಿಕೊಳ್ಳಲು ಸಾಧ್ಯ ಎಂದು ಉದ್ಘಾಟನೆಯ ಬಳಿಕ ಶ್ರೀನಿವಾಸ ಪೂಜಾರಿ ಹೇಳಿದರು.

ಈ ಸಂದರ್ಭದಲ್ಲಿ ವೇದಮೂರ್ತಿ ಬೋಳಂತ ಕೋಡಿ ಶ್ರೀ ರಾಮ್ ಭಟ್ ಇವರಿಂದ ಧಾರ್ಮಿಕ ಉಪನ್ಯಾಸ ನಡೆಯಿತು.

ಕನಿಲ ಶ್ರೀ ಭಗವತೀ ಕ್ಷೇತ್ರ ಭರಣ ಸಮಿತಿಯ ಗೌರವಾಧ್ಯಕ್ಷ ರೋಹಿದಾಸ ಎಸ್. ಬಂಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Kanila Templeಮುಖ್ಯ ಅತಿಥಿಗಳಾಗಿ ಜೈ ಆನಂದ ಆಸ್ಪತ್ರೆ ಮುಂಬಯಿ ಇದರ ಆಡಳಿತ ನಿರ್ದೇಶಕ ಡಾ. ದಯಾನಂದ್ ಕೆ.ಕುಂಬ್ಳೆ , ಕನಿಲ ಶ್ರೀ ಭಗವತೀ ಕ್ಷೇತ್ರ ಭಂಡಾರ ನಿಲಯ ಪುನರ್ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಬಾಬು ಟಿ. ಬಂಗೇರ, ಕನಿಲ ಭಗವತೀ ಸೇವಾ ಸಂಘ ಮುಂಬಯಿ ಇದರ ಅಧ್ಯಕ್ಷ ರವಿ ಎಸ್. ಮಂಜೇಶ್ವರ, ತೀಯಾ ಸಮಾಜ ಮುಂಬಯಿ ಇದರ ಮಾಜಿ ಅಧ್ಯಕ್ಷ ಕೆ.ಪಿ.ಅರವಿಂದ, ಎನ್.ಎಮ್.ಜಿ.ಬ್ಯಾಂಕ್  ಕಾಸರಗೋಡು ಇದರ ರೀಜಿನಲ್ ಮ್ಯಾನೇಜರ್ ಡಿ. ದಾಮೋದರನ್ ಉಪಸ್ಥಿತರಿದ್ದರು.

ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಕನಿಲ ಭಗವತೀ ಕ್ಷೇತ್ರ ಭರಣ ಸಮಿತಿ ಅಧ್ಯಕ್ಷ ವಿಶ್ವನಾಥ ಕುದುರು ವಹಿಸಿದ್ದರು.

ಈ ಸಂದರ್ಭ ಕ್ಷೇತ್ರ ಭರಣ ಸಮಿತಿಯ ಸುವರ್ಣ ಮಹೋತ್ಸವದ ಅಂಗವಾಗಿ ಸ್ಥಾಪಕ ಸದಸ್ಯರಾದ ಯು.ತನಿಯಪ್ಪ ಸುವರ್ಣ, ಮುಂಬಯಿ, ವಿ.ಮಹಾಲಿಂಗ ವರ್ಕಾಡಿ ಇವರನ್ನು ಸನ್ಮಾನಿಸಲಾಯಿತು.

ಸ್ವಾಗತ ಹಾಗೂ ಕಾರ್ಯಕ್ರಮ ನಿರ್ವಹಣೆಯನ್ನು ಕ್ಷೇತ್ರ ಭರಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ನಾರಾಯಣ ನಿರ್ವಹಿಸಿದರು.

ಭಗವತಿ ಸೇವಾ ಸಂಘ ವಾಮಂಜೂರು ವತಿಯಿಂದ ಕ್ಷೇತ್ರದ ಹಿರಿಯ ಬಾಬು ಗುರಿಕಾರ ಹಾಗೂ ಚಲನಚಿತ್ರ ಹಾಸ್ಯ ನಟ ಅರವಿಂದ ಬೋಳಾರ್ ಅವರನ್ನು ಸನ್ಮಾನಿಸಲಾಯಿತು.

ರಾತ್ರಿ 10 ರಿಂದ ಬಲಿ ಉತ್ಸವ, ಬಿಂಬ ದರ್ಶನ, ವಡಸ್ತಾನ, ಸರ್ಪಕಳ, ಮೂಡನಡೆ, ಅಮೃತ ಕಲಶ, ತಾಲಪ್ಪೊಲಿ, ಕಂಚಿಲ್ ಸೇವೆಗಳು ನಡೆದವು.

Kanila Temple

Kanila Temple

Kanila Temple

Kanila Temple

Kanila Temple

Kanila Temple

Kanila Temple

Kanila Temple

Kanila Temple

Kanila Temple

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English