ಮೂಡುಬಿದಿರೆ: ಡಾ.ಜಿ.ಎಸ್.ಅಮೂರ, ಡಾ.ಎಂ.ವೀರಪ್ಪ ಮೊಯಿಲಿ ಸೇರಿದಂತೆ ಹತ್ತುಮಂದಿ ಗಣ್ಯರನ್ನು 7ನೇ ವರ್ಷದ ಆಳ್ವಾಸ್ ನುಡಿಸಿರಿ ಪ್ರಶಸ್ತಿಗೆ ಆಯ್ಕೆಗೊಳಿಸಲಾಗಿದೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ ಕನ್ನಡ ನಾಡುನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ 2010 ಅಕ್ಟೋಬರ ತಿಂಗಳ 29,30 ಮತ್ತು 31ರಂದು ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ನಡೆಯಲಿದ್ದು ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಇಂದು ಪತ್ರಿಕಾಭವನದಲ್ಲಿ ಡಾ| ಮೋಹನ್ ಆಳ್ವಾ ಪತ್ರಕರ್ತರಿಗೆ ತಿಳಿಸಿದರು.
ಡಾ.ಜಿ.ಎಸ್ ಅಮೂರ (ಸಾಹಿತ್ಯ), ಡಾ.ಎಂ.ವೀರಪ್ಪ ಮೊಯಿಲಿ (ಸಾಮಾಜಿಕ), ಡಾ.ಎಂ.ಎಂ.ಕಲಬುರ್ಗಿ (ಸಂಶೋಧನೆ), ಸಂತೋಷ ಕುಮಾರ್ ಗುಲ್ವಾಡಿ (ಮಾಧ್ಯಮ), ಡಾ.ಶಿವಮೊಗ್ಗ ಸುಬ್ಬಣ್ಣ (ಸುಗಮ ಸಂಗೀತ), ಡಾ.ಬಲಿಪ ನಾರಾಯಣ ಭಾಗವತರು (ಯಕ್ಷಗಾನ), ಡಾ.ಎಂ.ಲೀಲಾವತಿ (ಚಲನಚಿತ್ರ), ಪ್ರೊ.ಬಿ.ಜಯಪ್ರಕಾಶ ಗೌಡ (ಸಂಘಟನೆ), ಡಾ.ಬ್ರ.ಕು.ಬಸವರಾಜ ರಾಜಋಷಿ(ಆಧ್ಯಾತ್ಮ), ಡಾ.ಕೆ.ಪಿ.ಪುತ್ತೂರಾಯ(ಸಾಹಿತ್ಯ) ಈ ಬಾರಿಯ ನುಡಿಸಿರಿ ಪ್ರಶಸ್ತಿ ಪುರಸ್ಕೃತರು. ಪ್ರಶಸ್ತಿಯು 10ಸಾವಿರ ನಗದು, ಮಾನಪತ್ರ, ಸ್ಮರಣಿಕೆ, ಶಾಲು, ಫಲಪುಷ್ಪ ಗೌರವಗಳನ್ನೊಳಗೊಂಡಿದೆ.
ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರ ಮೆರವಣಿಗೆ ನಡೆಯಲಿದ್ದು ನಂತರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ನುಡಿಸಿರಿ ಸಮ್ಮೇಳನವು ಮೂಡಬಿದಿರೆಯ ವಿದ್ಯಾಗಿರಿಯಲ್ಲಿರುವ ರತ್ನಾಕರ ವರ್ಣಿ ವೇದಿಕೆಯಲ್ಲಿ , ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ ಸಭಾಂಗಣದಲ್ಲಿ ಮೂರು ದಿನಗಳ ಕಾಲ ನಡೆಯಲಿದೆ. ” ಕನ್ನಡ ಮನಸ್ಸು : ಜೀವನಮೌಲ್ಯಗಳು ” ಎಂಬ ಮುಖ್ಯ ಪರಿಕಲ್ಪನೆಯಡಿ ಹೆಸರಾಂತ ಲೇಖಕಿ ವೈದೇಹಿಯವರ ಸವರ್ಾಧ್ಯಕ್ಷತೆಯಲ್ಲಿ ಸಮ್ಮೇಳನ ಮೂಡಿಬರಲಿದೆ.
ಅಕ್ಟೋಬರ 29ರಂದು ಬೆಳಗ್ಗೆ 9ಕ್ಕೆ ಸರಿಯಾಗಿ ಸಾಂಸ್ಕೃತಿಕ ಮೆರವಣಿಗೆಯಲ್ಲಿ ಸಮ್ಮೇಳನಾಧ್ಯಕ್ಷರನ್ನು ಕರೆತರಲಾಗುವುದು. ಖ್ಯಾತ ಕವಿ ಡಾ.ಎಚ್.ಎಸ್ ವೆಂಕಟೇಶಮೂರ್ತಿ ಸಮ್ಮೇಳನವನ್ನು ಬೆಳಗ್ಗೆ 9.30ಕ್ಕೆ ಉದ್ಘಾಟಿಸಲಿದ್ದಾರೆ. ಬಳಿಕ ಸಮ್ಮೇಳನಾಧ್ಯಕ್ಷರಾದ ವೈದೇಹಿಯವರು ಆಶಯ ಭಾಷಣ ಮಾಡಲಿದ್ದಾರೆ. ಸಮಾರಂಭದಲ್ಲಿ ಆಳ್ವಾಸ್ ನುಡಿಸಿರಿ 2009ರ ನೆನಪಿನ ಸಂಪುಟ `ಕನ್ನಡ ಮನಸ್ಸು : ಸಮನ್ವಯದೆಡೆಗೆ’ ಎಂಬ ಕೃತಿಯನ್ನು ವೈದೇಹಿ ಬಿಡುಗಡೆಗೊಳಿಸುವರು.
ಸಮ್ಮೇಳನದಲ್ಲಿ ನಾಲ್ಕು ವಿಚಾರಗೋಷ್ಠಿಗಳು ನಡೆಯಲಿದ್ದು ಅಕ್ಟೋಬರ್ 29ರಂದು ಅಪರಾಹ್ನ 2.20ರಿಂದ ಧರ್ಮ ಮತ್ತು ಜೀವನ ಮೌಲ್ಯಗಳು ಎಂಬ ಉಪಶೀರ್ಷಿಕೆಯಡಿ ನಡೆವ ಮೊದಲಗೋಷ್ಠಿಯಲ್ಲಿ ಡಾ. ಬಸವರಾಜ ಕಲ್ಗುಡಿ ಮತ್ತು ಡಾ.ಬಸವರಾಜ ಮಲಶೆಟ್ಟಿ ಮಾತನಾಡಲಿದ್ದಾರೆ.
ಸಮ್ಮೇಳನದ ಎರಡನೇ ದಿನ ಅಕ್ಟೋಬರ್. 30ರಂದು ಬೆಳಗ್ಗೆ ನಡೆವ ಗೋಷ್ಠಿ ಎರಡರಲ್ಲಿ ಪ್ರಭುತ್ವ ಮತ್ತು ಜೀವನಮೌಲ್ಯಗಳು ಎಂಬ ಗೋಷ್ಠಿಯಲ್ಲಿ ಡಾ.ಕೃಷ್ಣಮೂರ್ತಿ ಹನೂರ ಮತ್ತು ಡಾ.ಪಿ.ಕೆ ರಾಜಶೇಖರ ಭಾಗವಹಿಸಲಿದ್ದಾರೆ. ಅಂದು ಅಪರಾಹ್ನ ನಡೆಯುವ ಗೋಷ್ಠಿ ಮೂರರಲ್ಲಿ ಡಾ.ರಾಜೇಂದ್ರ ಚೆನ್ನಿ ಮತ್ತು ಡಾ.ಎಂ.ವಿ. ವಸು ಅವರು ಸಮಾಜ ಮತ್ತು ಜೀವನ ಮೌಲ್ಯಗಳು ಎಂಬ ವಿಚಾರದಲ್ಲಿ ಪ್ರಬಂಧ ಮಂಡನೆ ಮಾಡಲಿದ್ದಾರೆ.
ಅಕ್ಟೋಬರ 31ರಂದು ಬೆಳಗ್ಗೆ ನಡೆಯುವ ವರ್ತಮಾನ ಮತ್ತು ಜೀವನ ಮೌಲ್ಯಗಳು ಎಂಬ ಗೋಷ್ಠಿಯಲ್ಲಿ ಎಸ್.ಆರ್ ವಿಜಯಶಂಕರ್ ಮತ್ತು ಟಿ.ಎನ್.ಸೀತಾರಾಂ ಭಾಗವಹಿಸಲಿದ್ದಾರೆ ಮೋಹನ್ ಅಳ್ವಾ ತಿಳಿಸಿದ್ದಾರೆ.
ವಿಶೇಷೋಪನ್ಯಾಸ :
ಈ ಬಾರಿಯ ನುಡಿಸಿರಿಯಲ್ಲಿ ವಿಶೇಷವಾಗಿ ಪ್ರತಿದಿನ ನಾಡಿನ ಹೆಸರಾಂತ ವಾಗ್ಮಿಗಳಿಂದ ವಿಶೇಷೋಪನ್ಯಾಸವನ್ನು ಹಮ್ಮಿಕೊಳ್ಳಲಾಗಿದೆ. ಅ.29ರಂದು ಸಂಜೆ 5ರಿಂದ ಶತಾವಧಾನಿ ಡಾ.ಆರ್. ಗಣೇಶ್ ಮೌಲ್ಯಗಳ ಪರಿಕಲ್ಪನೆ ಎಂಬ ವಿಷಯದಲ್ಲಿ ಮಾತನಾಡಲಿದ್ದಾರೆ. 30ರಂದು ಸಂಜೆ ಜೀವನ ಸಾಫಲ್ಯ ಎಂಬ ವಿಷಯದಲ್ಲಿ ಕುಮಾರ ನಿಜಗುಣ ಮತ್ತು ನಾಲಗೆನುಲಿ ಎಂಬ ವಿಷಯದಲ್ಲಿ ಜೋತೀಶ್ವರ ಬೆಂಗಳೂರು ಮಾತನಾಡಲಿದ್ದಾರೆ. 31ರಂದು ಮದ್ಯಾಹ್ನ 2ರಿಂದ ಕನ್ನಡ ಮನಸ್ಸು ಮತ್ತು ಪರಿಸರ ಎಂಬ ವಿಷಯದಲ್ಲಿ ನಾಗೇಶ್ ಹೆಗಡೆ ಮಾತನಾಡಲಿದ್ದಾರೆ.
ಕವಿಸಮಯ ಕವಿನಮನ :
ಸಮ್ಮೇಳನದ ನಡು ನಡುವೆ ನಡೆವ ಕವಿಸಮಯ ಕವಿನಮನ ಕಾರ್ಯಕ್ರಮದಲ್ಲಿ ನಾಡಿನ ಪ್ರಸಿದ್ಧ ಕವಿಗಳಾದ ಹೊರೆಯಾಲ ದೊರೆಸ್ವಾಮಿ, ಸತೀಶ್ ಕುಲಕರ್ಣಿ, ಡಾ.ಎಲ್.ಸಿ.ಸುಮಿತ್ರಾ, ಲೋಕೇಶ್ ಅಗಸನ ಕಟ್ಟೆ, ಅರುಂಧತಿ ರಮೇಶ್, ಸರಜೂ ಕಾಟ್ಕರ್, ಜ್ಯೋತಿ ಗುರುಪ್ರಸಾದ್, ಆರಿಫ್ ರಾಜ ಇವರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕವಿಗಳು ತಮ್ಮ ಕಾವ್ಯಸ್ಫೂರ್ತಿಯ ಧ್ಯೇಯ ಧೋರಣೆ, ನಿಲುವುಗಳ ಕುರಿತ ಮಾತುಗಳನ್ನಾಡಿ ತಮ್ಮ ಕವಿತೆಯನ್ನು ವಾಚಿಸುತ್ತಾರೆ. ಬಳಿಕ ಎಂ.ಎಸ್ ಗಿರಿಧರ್ ನಿರ್ದೇಶನದಲ್ಲಿ ಆ ಕವಿತೆಗೆ ರಾಗ ಸಂಯೋಜಿಸಿ ಗಾಯಕರು ಹಾಡಲಿದ್ದಾರೆ.
ಕಥಾಸಮಯ :
ಕಥಾಸಮಯದಲ್ಲಿ ಹೆಸರಾಂತ ಕತೆಗಾರರಾದ ಡಾ.ಮೊಗಳ್ಳಿ ಗಣೇಶ್, ಫಕೀರ್ ಮಹಮ್ಮದ್ ಕಟ್ಪಾಡಿ, ವಸುಮತಿ ಉಡುಪ ಮತ್ತು ವಿವೇಕ್ ಶಾನುಭಾಗ್ ಭಾಗವಹಿಸಲಿದ್ದಾರೆ. ಇದರಲ್ಲಿ ಕತೆಗಾರರು ತಮ್ಮ ಬರವಣಿಗೆ ಕುರಿತ ವಿಚಾರಗಳನ್ನು ಮಂಡಿಸುತ್ತಾ ಆಯ್ದ ಕತೆಯೊಂದನ್ನು ವಾಚಿಸಲಿದ್ದಾರೆ.
ಹಾಸ್ಯಗೋಷ್ಠಿ :
ಈ ಗೋಷ್ಠಿಯನ್ನು ಮಾತಿನ ಮಂಟಪ ಎಂಬ ಶೀರ್ಷಿಕೆಯಡಿಯಲ್ಲಿ ವಿಶಿಷ್ಠವಾಗಿ ನಡೆಸಲಾಗುತ್ತಿದ್ದು ಈ ಬಾರಿ ವಿಭಿನ್ನವಾಗಿ ಅಗಲಿದ ಖ್ಯಾತ ಹಾಸ್ಯ ಹಾಗೂ ಲಲಿತ ಸಾಹಿತಿಗಳಾದ ಬೀ.ಚಿ., ನಾ.ಕಸ್ತೂರಿ, ಹಾಗೂ ಟಿ.ಪಿ.ಕೈಲಾಸಂ ಇವರುಗಳ ಸಾಹಿತ್ಯದಲ್ಲಿ ಒಡಮೂಡಿದ ಹಾಸ್ಯದ ಕುರಿತು ಪ್ರಸಿದ್ಧ ಹಾಸ್ಯಪಟುಗಳೂ ಕನ್ನಡ ವಿದ್ವಾಂಸರುಗಳೂ ಆಗಿರುವ ಪ್ರಾಣೇಶ್, ಪ್ರೊ.ಕೃಷ್ಣೇಗೌಡ ಹಾಗೂ ಬಿ.ಎಸ್.ಕೇಶವ ರಾವ್ ಇವರು ವಿಶೇಷ ಹಾಸ್ಯೋಪಾನ್ಯಾಸಗಳನ್ನು ನಡೆಸಿಕೊಡಲಿದ್ದಾರೆ.
ಸಂಸ್ಮರಣೆ :
ಕನ್ನಡದ ಕೈಂಕರ್ಯಕ್ಕಾಗಿ ಬದುಕು ಬರೆಹವನ್ನು ಮೀಸಲಿಟ್ಟ ಅಗಲಿದ ಹಿರಿಯ ಚೇತನಗಳನ್ನು ಸಂಸ್ಮರಿಸುವ ವಿಶಿಷ್ಠ ಕಾರ್ಯಕ್ರಮದಲ್ಲಿ ಈ ಬಾರಿ ಕನ್ನಡದ ಜಂಗಮ ಚಿಂತಿಕ ಎಂದೇ ಖ್ಯಾತರಾದ ಕಿ.ರಂ.ನಾಗರಾಜ್, ಕನ್ನಡ ಸುಗಮ ಸಂಗೀತ ಕ್ಷೇತ್ರಕ್ಕೆ ಅಶ್ವತ್ಥದ ಮುದ್ರೆಯೊತ್ತಿದ ಸಿ.ಅಶ್ವತ್ಥ್ , ನಿಡುಗಾಲ ಬೆಳ್ಳಿತೆರೆಯಲ್ಲಿ ಕನ್ನಡವನ್ನು ಮಿನುಗಿಸಿದ ಸಾಹಸಸಿಂಹ ವಿಷ್ಣುವರ್ಧನ್ , ಲೋಕೋಪಕಾರದ ಕಾಯಕವನ್ನು ಅಸದೃಶವಾಗಿ ನಡೆಸಿಕೊಟ್ಟು ನಮ್ಮನ್ನಗಲಿದ ಗಾನಯೋಗಿ ಪಂಡಿತ ಪುಟ್ಟರಾಜ್ ಗವಾಯಿ ಇವರುಗಳನ್ನು ಅನುಕ್ರಮವಾಗಿ ಡಾ.ಎಸ್.ಜಿ ಸಿದ್ಧರಾಮಯ್ಯ, ಎಂ.ಎನ್ ವ್ಯಾಸರಾವ್, ಎಂ.ನರಸಿಂಹ ಮೂರ್ತಿ, ಶ್ಯಾಮಸುಂದರ ಬಿದರಕುಂದಿ ಇವರುಗಳು ಸಂಸ್ಮರಣೋಪಾನ್ಯಾಸಗೈಯಲಿದ್ದಾರೆ.
ಉದಯ ರಾಗ ವೈಭವ :
ನುಡಿಸಿರಿ ಸಮ್ಮೇಳನದ ಅಂಗವಾಗಿ ಅ.30 ಮತ್ತು 31ರಂದು ಮುಂಜಾನೆ 5ರಿಂದ 7ರ ತನಕ ಉದಯರಾಗ ವೈಭವ ನಡೆಯಲಿದೆ. ವಿದುಷಿ ವಾಣಿ ಸತೀಶ್ ಹಾಗೂ ಬಳಗದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಕೊನೆಯ ದಿನ ಕುಮಾರ್ ಮರ್ಡೂರು ಪುಣೆ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ನಡೆಯಲಿದೆ.
ಸಾಂಸ್ಕೃತಿಕ ವೈವಿಧ್ಯ :
ಸಮ್ಮೇಳನದ ಮೂರೂ ದಿನಗಳಲ್ಲೂ ಸಾಯಂಕಾಲ 7ರಿಂದ ಸುಮಾರು 11ಗಂಟೆಯ ವರೆಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ರತ್ನಾಕರ ವರ್ಣಿ ವೇದಿಕೆ, ಕು.ಶಿ.ಹರಿದಾಸ ಭಟ್ಟ ವೇದಿಕೆ, ಕಾರ್ಕಳ ಪಾಂಡುರಂಗ ಪ್ರಭು ವೇದಿಕೆ , ಕೆ.ವಿ.ಸುಬ್ಬಣ್ಣ ಬಯಲು ರಂಗ ಮಂದಿರ ಈ ನಾಲ್ಕು ವೇದಿಕೆಗಳಲ್ಲಿ ವೈಶಿಷ್ಠ್ಯಪೂರ್ಣವಾಗಿ ನಡೆಯಲಿವೆ.
ಆಳ್ವಾಸ್ ಚಿತ್ರಸಿರಿ :
ನುಡಿಸಿರಿಯ ಅಂಗವಾಗಿ ಅ.24,25 ಮತ್ತು 26ರಂದು ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ಪ್ರಸಿದ್ಧ ಚಿತ್ರಕಲಾವಿದರಿಂದ ಆಳ್ವಾಸ್ ಚಿತ್ರಸಿರಿ ಕಾರ್ಯಕ್ರಮ ನಡೆಯಲಿದೆ.ರಾಜ್ಯದ ವಿವಿದೆಡೆಗಳಿಂದ 20 ಮಂದಿ ಹಿರಿ ಕಿರಿಯ ಕಲಾವಿದರು ಪಾಲ್ಗೊಳ್ಳಲಿದ್ದಾರೆ.
26ರಂದು ನಾಡಿನ ಹಿರಿಯ ಚಿತ್ರಕಲಾವಿದರಾದ ಬಿ.ಕೆ.ಎಸ್ ವಮರ್ಾ ಅವರಿಗೆ “ಆಳ್ವಾಸ್ ಚಿತ್ರಸಿರಿ ಪ್ರಶಸ್ತಿ” ನೀಡಿ ಗೌರವಿಸಲಾಗುತ್ತದೆ.
ಚಿತ್ರಸಿರಿಯನ್ನು ಹಿರಿಯ ಕಲಾವಿದ ಪಿ.ಪಿ.ಕಾರಂತ್ ಅ.24ರ ಬೆಳಗ್ಗೆ 11ಕ್ಕೆ ಉದ್ಘಾಟಿಸಲಿದ್ದಾರೆ.
ವಿದ್ಯಾರ್ಥಿ ಪ್ರತಿನಿಧಿಗಳು :
ನುಡಿಸಿರಿ ಸಮ್ಮೇಳನದಲ್ಲಿ ಭಾಗವಹಿಸುವ ಸಾಹಿತ್ಯಾಸಕ್ತ ವಿದ್ಯಾಥರ್ಿಗಳಿಗೆ ಮೂರು ದಿನಗಳ ಕಾಲವೂ ಉಚಿತ ವಸತಿ ಮತ್ತು ಊಟೋಪಚಾರದ ವ್ಯವಸ್ಥೆಯನ್ನು ಮಾಡಲಾಗುವುದು. ಸಮ್ಮೇಳನದಲ್ಲಿ ಭಾಗವಹಿಸುವ ವಿದ್ಯಾಥರ್ಿಗಳು ಸಮ್ಮೇಳನ ಕುರಿತ ವಿಶ್ಲೇಷಣಾತ್ಮಕ ಪ್ರಬಂಧ ಸ್ಪಧರ್ೆಗೆ ತಮ್ಮ ಬರಹವನ್ನು ಕಳುಹಿಸಿಕೊಡಬಹುದು .ಹಾಗೂ ವಿಜೇತರುಗಳಿಗೆ ಸೂಕ್ತ ಬಹುಮಾನವಿದೆ.
ಸಾಹಿತ್ಯಾಸಕ್ತ ಪ್ರತಿನಿಧಿಗಳು :
ಸಮ್ಮೇಳನದಲ್ಲಿ ಸಾಹಿತ್ಯ ಸಂಸ್ಕೃತಿ ಪ್ರೀತಿಯ ಕನ್ನಡಿಗರು ಪ್ರತಿನಿಧಿಗಳಾಗಿ ಪಾಲ್ಗೊಳ್ಳಬಹುದಾಗಿದೆ. ಪ್ರತಿನಿಧಿ ಶುಲ್ಕ ರೂ.100. ಪ್ರತಿನಿಧಿಗಳಿಗೆ ಉಚಿತ ಊಟ, ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ.
ಪ್ರದರ್ಶನ ಮಾರಾಟ :
ಸಮ್ಮೇಳನದಲ್ಲಿ ವಿಶ್ವವಿದ್ಯಾಲಯಗಳ ಪ್ರಸಾರಾಂಗ ಪ್ರಕಟಣೆಗಳು , ಪರಿಷತ್ತು – ಅಕಾಡೆಮಿ ಪ್ರಕಟಣೆಗಳು, ನಾಡಿನ ಹೆಸರಾಂತ ಪ್ರಕಾಶನಗಳ ಪುಸ್ತಕ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಗಳು ಇರುತ್ತವೆ.
Click this button or press Ctrl+G to toggle between Kannada and English
December 16th, 2011 at 10:43:36
MMg7gN gldhkftmohvx, [url=http://lfrfhdvdszej.com/]lfrfhdvdszej[/url], [link=http://trfzusljcexu.com/]trfzusljcexu[/link], http://iyjytwbqfgkg.com/