ಮಂಗಳೂರು : ನಗರದ ಓಶಿಯನ್ ಪರ್ಲ್ ಹೊಟೇಲ್‌ನಲ್ಲಿ ಮಾರ್ಚ್ 20 ರಿಂದ ಎಪ್ರಿಲ್ 5ರವರೆಗೆ ಉತ್ತರ ಭಾರತದ ಸ್ಟ್ರೀಟ್ ಫುಡ್‌ಗಳನ್ನು ಪರಿಚಯಿಸುವ ಆಹಾರೋತ್ಸವ ‘ಖಾವ್ ಗಲಿ’ ಆರಂಭಗೊಂಡಿದ್ದು ಪ್ರೀಮಿಯಂ ರೆಸ್ಟೋರೆಂಟ್ ‘ಸಾಗರ್‌ರತ್ನ’ ಸಮೂಹದ ಹೊಟೇಲ್ ಸಂಸ್ಥೆಯ ಪರಿಣತ ಶೆಫ್‌ಗಳ ಮೇಲ್ವಿಚಾರಣೆಯಲ್ಲಿ ಖಾದ್ಯಗಳು ತಯಾರಿಸಲ್ಪಡುತ್ತವೆ ಎಂದು ಓಶಿಯನ್ ಪರ್ಲ್ ಹೊಟೇಲ್‌ನ ಜನರಲ್ ಮ್ಯಾನೇಜರ್ ಬಿ.ಎನ್.ಗಿರೀಶ್ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು.
ಉತ್ತರ ಭಾರತದ ಖಾದ್ಯ ಗಳಾದ ಮಸಾಲ ಪುರಿ, ಬೇಲ್ ಪುರಿ, ಸೇವ್‌ಪುರಿ, ದಹಿಪುರಿ, ದಹಿ ಪಾಪ್ಡಿ ಚಾಟ್, ದಿಲ್ಲಿ ಯುನಿವರ್ಸಿಟಿ ಕಿ ಬ್ರೆಡ್ ಪಕೋಡೆ, ಆಲೂ ಟಕ್ಕಿ ಚೋಲೆ, ಸಮೋಸ ಚೋಲೆ, ರಾಜ್ ಕಚೋರಿ, ಪಾನ್ ಪತ್ತಾ ಚಾಟ್ ಮೊದಲಾದ ತಿಂಡಿಗಳನ್ನು ಹೊಟೇಲ್ ಆವರಣದಲ್ಲಿ ನಿರ್ಮಿಸಲಾದ ಕೃತಕ ಖಾವ್ ಗಲಿಯಲ್ಲಿ ತಯಾರಿಸಿ ಗ್ರಾಹಕರಿಗೆ ಒದಗಿಸಲಾಗುವುದು. ಮಂಗಳೂರು ಹಾಗೂ ಹೊರಗಿನಿಂದ ಬಂದ ಗ್ರಾಹಕರಿಂದ ಈ ಆಹಾರೋತ್ಸವಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಗಿರೀಶ್ ತಿಳಿಸಿದರು.
ಟ್ರಾವೆಲ್ ವೆಬ್‌ಸೈಟ್ ‘ಟ್ರಿಪ್ ಅಡ್ವೈಸರ್’ ನಡೆಸಿದ ಸಮೀಕ್ಷಾ ವರದಿ 2013ರ ಪ್ರಕಾರ ಮಂಗಳೂರಿನ 30 ಹೊಟೇಲ್‌ಗಳ ಪೈಕಿ ಅತ್ಯುತ್ತಮ ಹೊಟೇಲ್ ಎಂಬ ಖ್ಯಾತಿ ಗಳಿಸಿದ ಮತ್ತು ಗ್ರಾಹಕರು ಹಾಗು ವಿದೇಶಿಗರಿಂದ ಉತ್ತಮ ಪ್ರಶಂಸೆ ಗೆ ಒಳಗಾಗಿರುವ ಓಶಿಯನ್ ಪರ್ಲ್ ಹೋಟೆಲ್ ಇನ್ನು ಕೆಲವೇ ತಿಂಗಳ ಒಳಗೆ ಫೈವ್ ಸ್ಟಾರ್ ಹೊಟೇಲ್ ಆಗಿ ಪರಿವರ್ತನೆಯಾಗಲಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಚೆಫ್ ಆಸಿಫ್ ಹಾಗೂ ಕಚೇರಿ ವ್ಯವಸ್ಥಾಪಕ ಮಿಲನ್ ಸ್ಯಾಮುವೆಲ್ ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English