ವ್ಯವಸ್ಥಿತ ಅಗ್ನಿಶಾಮಕದಳದಿಂದ ನಿರ್ಭೀತಿ : ಪಾಲೆಮಾರ್

6:13 PM, Friday, April 1st, 2011
Share
1 Star2 Stars3 Stars4 Stars5 Stars
(No Ratings Yet)
Loading...

ಪಾಂಡೇಶ್ವರ ಅಗ್ನಿಶಾಮಕ ಠಾಣೆಮಂಗಳೂರು : ನಾಗರೀಕ ಸಮಾಜದಲ್ಲಿ ನೆಮ್ಮದಿಯ ನಿರ್ಭಯ ವಾತಾವರಣ ಮೂಡಬೇಕಾದರೆ ವ್ಯವಸ್ಥಿತ, ಸುಸ್ಸಜ್ಜಿತ ಪೊಲೀಸ್ ಮತ್ತು ಅಗ್ನಿಶಾಮಕದಳಗಳಿರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜೀವಿಶಾಸ್ತ್ರ, ಬಂದರು ಮತ್ತು ಒಳನಾಡು ಜಲಸಾರಿಗೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಶ್ರೀ ಜೆ. ಕೃಷ್ಣ ಪಾಲೆಮಾರ್ ಅವರು ಹೇಳಿದರು. ಅವರಿಂದು ಮಂಗಳೂರು ನಗರದ ಪಾಂಡೇಶ್ವರ ಅಗ್ನಿಶಾಮಕ ಠಾಣೆಯ ನೂತನ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಪಾಂಡೇಶ್ವರ ಅಗ್ನಿಶಾಮಕ ಠಾಣೆಮಂಗಳೂರು ನಗರ ದಿನೇ ದಿನೇ ಬೆಳವಣಿಗೆಯನ್ನು ಕಾಣುತ್ತಿದ್ದು, ಬಹು ಅಂತಸ್ತುಗಳ ಕಟ್ಟಡಗಳು ವ್ಯಾಪಕವಾಗಿದೆ; ಅಗ್ನಿಶಾಮಕ ಘಟಕಗಳು ನಗರದಲ್ಲಿ ಬಹು ಅಗತ್ಯವಾಗಿದ್ದು, ಇಲಾಖೆಯ ಅಗತ್ಯವನ್ನು ಪೂರೈಸಲು ಸರಕಾರ ಬದ್ಧವಾಗಿದೆ ಎಂದರು. ರಾಜ್ಯ ಪೊಲೀಸ್ ಹೌಸಿಂಗ್ ಕೊರ್ಪೋರೇಷನ್ ಸುಮಾರು 2.52ಕೋಟಿವೆಚ್ಚದ ಅಗ್ನಿಶಾಮಕ ಠಾಣಾಕಟ್ಟಡವನ್ನು 14ತಿಂಗಳೊಳಗೆ ಉತ್ತಮ ರೀತಿಯಲ್ಲಿ ನಿರ್ಮಿಸಿಕೊಡುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಡಾ ಡಿ ವಿ ಗುರುಪ್ರಸಾದ್ ಪೊಲೀಸ್ ಮಹಾನಿರ್ದೇಶಕರು ಹಾಗೂ ಮಹಾನಿರ್ದೇಶಕರು ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಬೆಂಗಳೂರು ಇವರು ಮಾತನಾಡಿ, ರಾಜ್ಯದಲ್ಲಿ ಅಗ್ನಿಶಾಮಕ ಠಾಣೆಗಳನ್ನು ಆಧುನಿಕಗೊಳಿಸಲು ಸಾಕಷ್ಟು ಹಣ ಕಾಸನ್ನು ಒದಗಿಸಿದೆ. ಬಹುಮಹಡಿ ಕಟ್ಟಡ ನಿರ್ಮಾಣಗಾರರು ಕಟ್ಟಡ ನಿರ್ಮಾಣ ಶೈಲಿಯ ಬಗ್ಗೆ ಎಚ್ಚರಿಕೆ ವಹಿಸಬೇಕೆಂದರು. ಪ್ರತಿ ತಾಲೂಕಿಗೊಂದರಂತೆ ಅಗ್ನಿಶಾಮಕ ಠಾಣೆಗಳನ್ನು ಆರಂಭಿಸಲಾಗುವುದು. ಎಲ್ಲರ ನಗರ, ಪಟ್ಟಣಗಳಿಗೆ ನಾಗರೀಕ ರಕ್ಷಣಾ ಘಟಕಗಳನ್ನು ಆರಂಭಿಸಲು ಇಲಾಖೆ ಯೋಚಿಸುತ್ತಿದೆ ಎಂದೂ ಡಾ ಗುರುಪ್ರಸಾದ್ ತಿಳಿಸಿದರು.
ಸಮಾರಂಭದಲ್ಲಿ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್, ಜಿ.ಪಂ. ಅಧ್ಯಕ್ಷರಾದ ಶ್ರೀಮತಿ ಶೈಲಜಾ ಭಟ್, ಮೇಯರ್ ಪ್ರವೀಣ್ ಕುಮಾರ್, ಉಪಮೇಯರ್ ಶ್ರೀಮತಿ ಗೀತಾ, ಪಶ್ಚಿಮ ವಲಯ ಐಜಿಪಿ ಶ್ರೀ ಅಲೋಕ್ ಮೋಹನ್, ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಜಿಲ್ಲಾ ಪೊಲೀಸ್ ಅಧೀಕ್ಷಕ ಲಾಬೂರಾಮ್ ಉಪಸ್ಥಿತರಿದದರು. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಶ್ರೀ ವರದರಾಜ್ ಸ್ವಾಗತಿಸಿದರು. ಶ್ರೀ ಬಸವಣ್ಣ ವಂದಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English