ತೊಕೊಟ್ಟು ಗುಜರಿ ಅಂಗಡಿಗೆ ಬೆಂಕಿ, ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕದಳ

Saturday, March 20th, 2021
Kallapu-fire

ಮಂಗಳೂರು : ತೊಕೊಟ್ಟು ಸಮೀಪದ ಕಲ್ಲಾಪುವಿನಲ್ಲಿ ಗುಜರಿ ಅಂಗಡಿ ಬೆಂಕಿ ಅನಾಹುತದಿಂದ ಹೊತ್ತಿ ಉರಿದ ಘಟನೆ ಶನಿವಾರ ಸಂಜೆ ನಡೆದಿದೆ. ಬೆಂಕಿಯ ಕೆನ್ನಾಲಿಗೆಗೆ ಲಕ್ಷಾಂತರ ರೂಪಾಯಿ ಗುಜರಿ ಸಾಮಾನುಗಳು ಭಸ್ಮಗೊಂಡಿದೆ ಎನ್ನಲಾಗಿದ್ದು. ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಅಗ್ನಿ ಶಾಮಕದಳದಿಂದ ಕಾರ್ಯಚರಣೆ ನಡೆಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಉಂಟಾಗಿದೆ ಎನ್ನಲಾಗಿದ್ದು,  ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರಿಂಜ : ಸ್ನಾನಕ್ಕೆ ಇಳಿದಿದ್ದ ಯುವಕ ಕೆರೆಯಲ್ಲಿ ಮುಳುಗಿ ಮೃತ್ಯು

Monday, February 10th, 2020
karinja

ಬಂಟ್ವಾಳ : ಸ್ನಾನಕ್ಕೆ ಇಳಿದಿದ್ದ ಯುವಕನೋರ್ವ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಕಾರಿಂಜದಲ್ಲಿ ನಡೆದಿದೆ. ಕಡ್ತಲಬೆಟ್ಟು ನಿವಾಸಿ ಸುಕೇಶ್ (25) ಮೃತ ಯುವಕ. ಮಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸುಕೇಶ್ ಅವರು ತನ್ನಿಬ್ಬರು ಸ್ನೇಹಿತರೊಂದಿಗೆ ರಜಾದ ಹಿನ್ನೆಲೆಯಲ್ಲಿ ಕಾರಿಂಜ ಕ್ಷೇತ್ರಕ್ಕೆ ಭಾನುವಾರ ಸಂಜೆ ಆಗಮಿಸಿದ್ದರು. ಈ ಸಂದರ್ಭ ಸ್ನಾನಕ್ಕಿಳಿದ ವೇಳೆ ಕೆರೆಯ ಆಳ ತಿಳಿಯದೆ ಮುಳುಗಿದ್ದಾರೆ. ಸ್ನೇಹಿತರು ಮತ್ತು ಸ್ಥಳೀಯರು ಕೂಡಲೇ ಅಗ್ನಿ ಶಾಮಕದಳಕ್ಕೆ ಮತ್ತು ಪೊಲೀಸರಿಗೆ ಕರೆ ಮಾಡಿದ್ದರು. […]

ಅಲೆಗಳ ಸೆಳೆತಕ್ಕೆ ಸಿಲುಕಿ ಸಮುದ್ರ ಪಾಲಾಗಿದ್ದ ಬಾಲಕನ ಮೃತದೇಹ

Tuesday, October 8th, 2019
shahil

ಮಂಗಳೂರು : ಗೆಳೆಯರೊಂದಿಗೆ ಸಮುದ್ರದಲ್ಲಿ ಆಟವಾಡುತ್ತಿದ್ದಾಗ ಅಲೆಗಳ ಸೆಳೆತಕ್ಕೆ ಸಿಲುಕಿ ಸಮುದ್ರ ಪಾಲಾಗಿದ್ದ ಬಾಲಕನ ಮೃತದೇಹ ಇಂದು ಮಂಗಳೂರಿನ ಬೆಂಗರೆಯಲ್ಲಿ ಪತ್ತೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬೆಂಗರೆ ನಿವಾಸಿ ಅಲ್ತಾಫ್ ಎಂಬವರ ಪುತ್ರ ಶಾಹಿಲ್ ( 16) ನಿನ್ನೆ ಸಮುದ್ರದಲ್ಲಿ ಗೆಳೆಯರೊಂದಿಗೆ ಆಟವಾಡುತ್ತಿದ್ದ ವೇಳೆ ಅಲೆಗಳ ಸೆಳೆತಕ್ಕೆ ಸಿಲುಕಿ ಸಮುದ್ರ ಪಾಲಾಗಿದ್ದರು. ಮೃತ ಬಾಲಕ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದ. ಹಬ್ಬದ ಪ್ರಯುಕ್ತ ಶಾಲೆಗೆ ರಜೆ ಇದ್ದ ಕಾರಣ ತನ್ನ ಸ್ನೇಹಿತರೊಂದಿಗೆ ಸಮುದ್ರಕ್ಕೆ ಇಳಿದಾಗ ಈ ದುರ್ಘಟನೆ […]

ವ್ಯವಸ್ಥಿತ ಅಗ್ನಿಶಾಮಕದಳದಿಂದ ನಿರ್ಭೀತಿ : ಪಾಲೆಮಾರ್

Friday, April 1st, 2011
ಪಾಂಡೇಶ್ವರ ಅಗ್ನಿಶಾಮಕ ಠಾಣೆ

ಮಂಗಳೂರು : ನಾಗರೀಕ ಸಮಾಜದಲ್ಲಿ ನೆಮ್ಮದಿಯ ನಿರ್ಭಯ ವಾತಾವರಣ ಮೂಡಬೇಕಾದರೆ ವ್ಯವಸ್ಥಿತ, ಸುಸ್ಸಜ್ಜಿತ ಪೊಲೀಸ್ ಮತ್ತು ಅಗ್ನಿಶಾಮಕದಳಗಳಿರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜೀವಿಶಾಸ್ತ್ರ, ಬಂದರು ಮತ್ತು ಒಳನಾಡು ಜಲಸಾರಿಗೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಶ್ರೀ ಜೆ. ಕೃಷ್ಣ ಪಾಲೆಮಾರ್ ಅವರು ಹೇಳಿದರು. ಅವರಿಂದು ಮಂಗಳೂರು ನಗರದ ಪಾಂಡೇಶ್ವರ ಅಗ್ನಿಶಾಮಕ ಠಾಣೆಯ ನೂತನ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಮಂಗಳೂರು ನಗರ ದಿನೇ ದಿನೇ ಬೆಳವಣಿಗೆಯನ್ನು ಕಾಣುತ್ತಿದ್ದು, ಬಹು ಅಂತಸ್ತುಗಳ ಕಟ್ಟಡಗಳು ವ್ಯಾಪಕವಾಗಿದೆ; ಅಗ್ನಿಶಾಮಕ […]