ಹಬ್ಬಗಳ ಆಚರಣೆಗಳು ಸಾಮಾಜಿಕ ಆಚರಣೆಗಳಾಗಲಿ

6:22 PM, Wednesday, December 20th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

christmasಮಂಗಳೂರು: ಸಂತ ಕ್ರಿಸ್ತೋಪರ್ ಎಸೋಸಿಯೇಷನ್ ಮಂಗಳೂರು ಇವರ ವತಿಯಿಂದ ಕ್ರಿಸ್ಮಸ್ ಹಬ್ಬದ ಆಚರಣೆಯನ್ನು ಕುಡುಪು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾರೀಕು ೨೦.೧೨.೨೦೧೭ರಂದು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಸ್ಥಳೀಯ ಕೊರ್ಪೆರೇಟರ್ . ಯವರು ಕೇಕನ್ನು ಕತ್ತರಿಸಿ ಶಾಲೆಗೆ ಬೇಕಾದ ಅವಶ್ಯಕ ಉಪಕರಣಗಳನ್ನು ವಿತರಿಸಿ ಮಾತಾನಾಡುತ್ತಾ ಈ ಕ್ರಿಸ್ಮಸ್ ಆಚರಣೆಯೂ ನನ್ನ ಕ್ಷೇತ್ರದಲ್ಲಿ ಈ ಸರಕಾರಿ ಶಾಲೆಯಲ್ಲಿ ಆಚರಿಸುವುದು ನನಗೆ ಬಹಳಷ್ಟು ಸಂತೋಷವನ್ನು ತಂದಿದೆ. ಇದು ನಿಜವಾಗಿಯೂ ಆರ್ಥಪೂರ್ಣವಾಗಿದ್ದು ಕ್ರಿಸ್ಮಮಸ್ ಹಬ್ಬವು ಇಡೀ ಜಗತ್ತಿನಲ್ಲಿ ಆಚರಿಸುವ ಸೌಹಾರ್ದತೆಯ ಹಬ್ಬವಾಗಿದೆ ಎಂದು ಹೇಳಿದರು.

ಆಧ್ಯಕ್ಷತೆಯನ್ನು ವಹಿಸಿದ ಎಸೋಷಿಯೇಷನಿನ ಗೌರವ ಆದ್ಯಕ್ಷರಾದ ಶ್ರೀ ಸುಶೀಲ್ ನೊರೊನ್ಹಾರವರು ಮಾತನಾಡಿ ಹಬ್ಬಗಳ ಆಚರಣೆಯು ಧಾರ್ಮಿಕವಾಗಿ ಅವರವರ ಧರ್ಮಗಳ ಸಂಪ್ರದಾಯ ಪ್ರಕಾರ ಭಕ್ತಿ ಶ್ರದ್ದೆಯಿಂದ ಅವರ ಧಾರ್ಮಿಕ ಕೇಂದ್ರಗಳಲ್ಲಿ ಆಚರಿಸಿ ಹಬ್ಬದ ಸಂಭ್ರಮವು ಸಾಮಾಜಿಕವಾಗಿ ಎಲ್ಲ ಧರ್ಮದವರು ಒಟ್ಟಿಗೆ ಆಚರಿಸುವಂತಹ ಆಚರಣೆ ಆಗಬೇಕು. ನಮ್ಮ ಪರಿಸರದಲ್ಲಿ ಎಲ್ಲಾ ಧಾರ್ಮಿಕ ಹಬ್ಬಗಳು ಅನ್ಯೋನತೆಯಿಂದ ಒಟ್ಟಿಗೆ ಆಚರಿಸುವಂತಗಬೇಕು.

christmas-2ಕ್ರಿಸ್ಮಸ್ ಹಬ್ಬವು ಜಗತ್ತಿನ ಹೆಚ್ಚಿನ ರಾಷ್ರ್ಟಗಳಲ್ಲಿ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬವು ಯೇಸು ಕ್ರಿಸ್ತರ ಸಂದೇಶದಂತೆ ಬಡವರ ದೀನ ದಲಿತರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಹಾಗೂ ಅವರ ಕಣ್ಣೊರೆಸುವ ಹಬ್ಬವಾಗಿ ಆಚರಿಸುವುದು ಕ್ರಿಸ್ತ ಸಮುದಾಯದ ಮೂಲ ಉದ್ದೇಶವಾಗಿದೆ ಎಂದು ಹೇಳಿದರು. ಶಾಲಾ ಮುಖ್ಯೋಪಾದ್ಯಾಯನಿ ಶ್ರೀಮತಿ ಫ್ಲಾವಿಯಾ ತಾವ್ರೊ ಸ್ವಾಗತಿಸಿ ಶಿಕ್ಷಕಿ ಅನಿತಾರವರು ಧನ್ಯವಾದ ಗೈದರು. ಶಿಕ್ಷಕಿ ಶ್ರೀಮತಿ ಗ್ರೆಟ್ಟಾ ಲೋಬೊರವರು ಕಾರ‍್ಯಕ್ರಮ ನಿರೂಪಿಸಿದರು.

ಕು. ಸ್ಟೇಫಿ ಪಿರೇರಾರವರು ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಎರ್ಪಡಿಸಿದರು. ವೇದಿಕೆಯಲ್ಲಿ ಎಸೋಷಿಯೇಷನ್ ಅಧ್ಯಕ್ಷರಾದ ಫ್ರಾನ್ಸಿಸ್ ಡಿ‘ಸೋಜ ಕಾರ‍್ಯದರ್ಶಿ ನೈಜಿಲ್ ಪಿರೇರಾ, ಸಹ ಕಾರ‍್ಯದರ್ಶಿ ಲೀನಾ ಡಿಸೋಜ ಉಪಸ್ಥಿತರಿದ್ದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ‍್ಯಕ್ರಮಗಳನ್ನು ಎರ್ಪಡಿಸಲಾಗಿತ್ತು. ಎಲ್ಲರಿಗೂ ಕುಸ್ವಾರ್ ತಿಂಡಿ ವಿತರಿಸಲಾಯಿತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English