ಟಿಪ್ಪು ಜಯಂತಿಯನ್ನು‌ ಕದ್ದು ಮುಚ್ಚಿ ಆಚರಿಸುವ ಪರಿಸ್ಥಿತಿಯಲ್ಲಿ ನಾವಿದ್ದೇವೆ: ಹರೀಶ್ ಕುಮಾರ್

Saturday, November 10th, 2018
harish-kumar-2

ಮಂಗಳೂರು: ಟಿಪ್ಪು ಜಯಂತಿಯನ್ನು‌ ಕದ್ದು ಮುಚ್ಚಿ ಆಚರಿಸುವ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಇದು ಆಗಬಾರದು ಎಂದು ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ಹೇಳಿದ್ದಾರೆ. ದ.ಕ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ದಕ ಜಿಪಂನ ನೇತ್ರಾವತಿ ಸಭಾಂಗಣದಲ್ಲಿ ಇಂದು ಬೆಳಗ್ಗೆ ನಡೆದ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯಲ್ಲಿ ಅವರು ಮಾತನಾಡಿದರು. ಇದು ಸಾರ್ವಜನಿಕ ಜಯಂತಿ ಆಗಬೇಕಾದರೆ ಮುಂದಿನ ದಿನಗಳಲ್ಲಾದರೂ ಇದು ಪುರಭವನದಲ್ಲಿ ಆಚರಿಸುವಂತಾಗಬೇಕು. ಆಗ ಅರ್ಥಪೂರ್ಣ ಆಚರಣೆ ಆಗುತ್ತದೆ ಎಂದರು. ಈ ಸಂದರ್ಭ […]

ದೋಣಿ ದಟ್ಟಣೆ ನಿವಾರಣೆಗೆ ಪೂರಕ: ಸಚಿವ ಪ್ರಮೋದ್‌

Friday, March 23rd, 2018
bhaskar-moily

ಮಂಗಳೂರು: ಮಂಗಳೂರು ಮೀನುಗಾರಿಕೆ ಬಂದರಿನಲ್ಲಿ ದೋಣಿಗಳ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಸುಲ್ತಾನ್‌ ಬತ್ತೇರಿ ಬಳಿಯಲ್ಲಿ ನಿಲುಗಡೆ (ಐಡಲ್‌ಬರ್ತಿಂಗ್‌) ಜೆಟ್ಟಿಯನ್ನು ನಿರ್ಮಿಸಲಾಗಿದ್ದು, ಇದರಿಂದಾಗಿ ಮೀನುಗಾರರಿಗೆ ಅನುಕೂಲವಾಗಲಿದೆ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು. ಸುಲ್ತಾನ್‌ಬತ್ತೇರಿಯಲ್ಲಿ 5 ಕೋ. ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಸುಸಜ್ಜಿತ ನಿಲುಗಡೆ ಜೆಟ್ಟಿಯನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ಐದು ಕೋ. ರೂ. ವೆಚ್ಚದಲ್ಲಿ 102 ಮೀ. ಉದ್ದದ ಈ ಜಟ್ಟಿ ನಿರ್ಮಾಣಗೊಂಡಿದ್ದು, ಇದರಿಂದ ಈ ಪ್ರದೇಶದ ಮೀನುಗಾರರಿಗೆ ತಮ್ಮ ದೋಣಿ ನಿಲುಗಡೆಗೊಳಿಸಲು […]

ಕುಡುಪು ಕ್ಷೇತ್ರಕ್ಕೆ ಸಂಗೀತ ನಿರ್ದೇಶಕ ಗುರುಕಿರಣ್ ಭೇಟಿ

Tuesday, February 20th, 2018
gurukiran

ಮಂಗಳೂರು : ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು, ನಿನ್ನೆ ಶ್ರೀ ಕ್ಷೇತ್ರದಲ್ಲಿ ನಡೆದ ಕಲಶಾಭಿಷೇಕ, ತಂಬಿಲ ಹಾಗೂ ವಿಶೇಷ ಮಹಾಪೂಜೆಯಲ್ಲಿ ಖ್ಯಾತ ಚಲನಚಿತ್ರ ನಟ, ಸಂಗೀತ ನಿರ್ದೇಶಕ ಗುರುಕಿರಣ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಗುರುಕಿರಣ್ ಅವರಿಗೆ ಶ್ರೀ ಕ್ಷೇತ್ರದ ವತಿಯಿಂದ ಕ್ಷೇತ್ರದ ಕಾರ್ಯ ನಿರ್ವಹಣಾಧಿಕಾರಿ ಅರವಿಂದ ಎ. ಸುತಗುಂಡಿ ಅವರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಮುಕ್ತೇಸರ ಭಾಸ್ಕರ ಕೆ. ಪ್ರಧಾನ ಕಾರ್ಯದರ್ಶಿ ಕೆ. ಸುಜನ್‌ದಾಸ್ ಕುಡುಪು, ಅನುವಂಶಿಕ […]

ಹಬ್ಬಗಳ ಆಚರಣೆಗಳು ಸಾಮಾಜಿಕ ಆಚರಣೆಗಳಾಗಲಿ

Wednesday, December 20th, 2017
christmas

ಮಂಗಳೂರು: ಸಂತ ಕ್ರಿಸ್ತೋಪರ್ ಎಸೋಸಿಯೇಷನ್ ಮಂಗಳೂರು ಇವರ ವತಿಯಿಂದ ಕ್ರಿಸ್ಮಸ್ ಹಬ್ಬದ ಆಚರಣೆಯನ್ನು ಕುಡುಪು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾರೀಕು ೨೦.೧೨.೨೦೧೭ರಂದು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಸ್ಥಳೀಯ ಕೊರ್ಪೆರೇಟರ್ . ಯವರು ಕೇಕನ್ನು ಕತ್ತರಿಸಿ ಶಾಲೆಗೆ ಬೇಕಾದ ಅವಶ್ಯಕ ಉಪಕರಣಗಳನ್ನು ವಿತರಿಸಿ ಮಾತಾನಾಡುತ್ತಾ ಈ ಕ್ರಿಸ್ಮಸ್ ಆಚರಣೆಯೂ ನನ್ನ ಕ್ಷೇತ್ರದಲ್ಲಿ ಈ ಸರಕಾರಿ ಶಾಲೆಯಲ್ಲಿ ಆಚರಿಸುವುದು ನನಗೆ ಬಹಳಷ್ಟು ಸಂತೋಷವನ್ನು ತಂದಿದೆ. ಇದು ನಿಜವಾಗಿಯೂ ಆರ್ಥಪೂರ್ಣವಾಗಿದ್ದು ಕ್ರಿಸ್ಮಮಸ್ ಹಬ್ಬವು ಇಡೀ ಜಗತ್ತಿನಲ್ಲಿ ಆಚರಿಸುವ ಸೌಹಾರ್ದತೆಯ ಹಬ್ಬವಾಗಿದೆ […]