ಪಂಜಿಮೊಗರುವಿನ ತಾಯಿ-ಮಗಳ ಜೋಡಿ ಕೊಲೆ ಓರ್ವ ಆರೋಪಿಯ ಬಂಧನ

11:54 AM, Saturday, October 1st, 2011
Share
1 Star2 Stars3 Stars4 Stars5 Stars
(0 rating, 4 votes)
Loading...

Double Murder

ಮಂಗಳೂರು : ಮಂಗಳೂರಿನ ಪಂಜಿಮೊಗರುವಿನಲ್ಲಿ ನಡೆದಿದ್ದ ತಾಯಿ-ಮಗಳ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕುಂಬಳೆ ಪೊಲೀಸರು ಓರ್ವನನ್ನು ರೈಲ್ವೇ ನಿಲ್ದಾಣದ ಹೊಟೇಲೊಂದರಿಂದ   ಗುರುವಾರ ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದ ಮೊದಲ ಆರೋಪಿ ಮೂರು ತಿಂಗಳ ನಂತರ ಸೆರೆ ಸಿಕ್ಕಂತಾಗಿದೆ.

ಸಕಲೇಶ ಪುರದ ಹಮೀದ್ (35)ಎಂಬಾತನನ್ನು ಕುಂಬಳೆ ಪೊಲೀಸರು ಪ್ರಕರಣಕ್ಕೆ ಸಂಬಂದಿಸಿದಂತೆ ವಶಕ್ಕೆ ಪಡೆದು ಕೊಂಡಿದ್ದಾರೆ. ಬಂಧನ ಮಾಹಿತಿ ಲಭಿಸಿದ ತಕ್ಷಣ ಮಂಗಳೂರು ಫೊಲೀಸರು ಕುಂಬಳೆ ಠಾಣೆಗೆ ತೆರಳಿ ಅಲ್ಲಿಂದ ಹಮೀದ್‌ನನ್ನು ಮಂಗಳೂರಿಗೆ ಕರೆತಂದಿದ್ದಾರೆ.

ಈತ ಒಂದು ತಿಂಗಳ ಹಿಂದೆ ಕುಂಬಳೆಯ ರೈಲ್ವೇ ನಿಲ್ದಾಣದ ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು. ಖಚಿತ ಸುಳಿವಿನ ಮೇರೆಗೆ ಕುಂಬಳೆ ಪೊಲೀಸರು ಹಮೀದ್‌ನನ್ನು ಬಂಧಿಸಿದ್ದಾರೆ.

ಈ ಪ್ರಕರಣ ಪೊಲೀಸ್ ಇಲಾಖೆಗೆ ಸವಾಲಾಗಿದ್ದ ಕಾರಣ ಅರೋಪಿಗಳ ಪತ್ತೆಗಾಗಿ ನಾಲ್ಕು ತಂಡಗಳನ್ನು ರಚಿಸಲಾಗಿತ್ತು. ಪಂಜಿಮೊಗರುವಿನ ಮನೆಯಿಂದ ಹಮೀದ್ ಕಳ್ಳತನಕ್ಕೆ ಯತ್ನಿಸುತ್ತಿದ್ದ ವೇಳೆ ತಾಯಿ ಮಗಳಿಬ್ಬರು ಈತನನ್ನು ಕಂಡು ಬೊಬ್ಬಿಡಲು ಪ್ರಾರಂಭಿಸಿದ ಕಾರಣಕ್ಕಾಗಿ ಇವರಿಬ್ಬರನ್ನೂ ಹತ್ಯೆ ಮಾಡಿರುವುದಾಗಿ ಕುಂಬಳೆ ಪೊಲೀಸರಲ್ಲಿ ಈತ ಒಪ್ಪಿಕೊಂಡಿದ್ದಾನೆ ಹಾಗೂ ಕೊಲೆ ಕೃತ್ಯ ನಡೆಸಿದ ಬಳಿಕ ಮಂಗಳೂರು ಹಾಗೂ ಅಸುಪಾಸಿನಲ್ಲಿ ಸುತ್ತಾಡು ತ್ತಿದ್ದುದಾಗಿ ಈತ ವಿಚಾರಣೆಯ ವೇಳೆ ತಿಳಿಸಿದ್ದಾನೆ.

ಮಂಗಳೂರು ಪೊಲೀಸರು ತನಿಖೆ ವೇಳೆ ಸ್ಥಳೀಯರ ಮಾಹಿತಿಯಾಧಾರದಲ್ಲಿ ಹಿಂದೆಯೂ ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಹಮೀದನ ಬಗ್ಗೆ ಮಾಹಿತಿ ಕಲೆ ಹಾಕಿ ಅತನ ಭಾವಚಿತ್ರವನ್ನು ಕುಂಬಳೆ,ಕಾಸರಗೋಡು ಪೊಲೀಸರಿಗೆ ನೀಡಿದ್ದರು.ಅದರಂತೆ ತಿಂಗಳ ಹಿಂದೆ ಕನ್ನಡಿಗನೋರ್ವ ರೈಲ್ವೆ ಹೊಟೇಲಿಗೆ ಬಂದಿರುವ ಮಾಹಿತಿಯಾಧಾರದಂತೆ ಈತನನ್ನು ಹೊಟೇಲಿನಿಂದ ಬಂಧಿಸಿ ಮಂಗಳೂರು ಪೊಲೀಸರಿಗೆ ಒಪ್ಪಿಸಲಾಗಿದೆ.

ಈ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಹಲವರನ್ನು ವಿಚಾರಣೆಗೆ ತೆಗೆದುಕೊಂಡು ದೌರ್ಜನ್ಯವೆಸಗಿದ್ದರು ಎಂದು ಅರೋಪಿಸಲಾಗಿತ್ತು. ಇವರಲ್ಲಿ ಯಾರಾದರೂ ಹಮೀದನ ಪರಿಚಯಸ್ಥರಾಗಿದ್ದರೋ,ಈ ಕಾರಣಕ್ಕಾಗಿ ಪೊಲೀಸರು ಇವರನ್ನು ಬೆಂಡೆತ್ತಿದ್ದರೋ ಎಂಬುವುದು ತನಿಖೆಯಿಂದ ತಿಳಿದು ಬರಬೇಕಿದೆ.

ಜೂನ್ 28ರ ಮಧ್ಯಾಹ್ನ ಕಾವೂರು ಠಾಣಾ ವ್ಯಾಪ್ತಿಯ ಪಂಜಿಮೊಗರು ಜಂಕ್ಷನ್ ಸಮೀಪದ ಮನೆಯೊಂದಕ್ಕೆ ನುಗ್ಗಿ ಗುಜರಿ ವ್ಯಾಪಾರಿ ಹಮೀದ್ ಎಂಬವರ ಪತ್ನಿ ರಝೀಯಾ ಮತ್ತು ಮಗಳು ಫಾತಿಮಾ ಝವಾಳನ್ನು ಹಾಡುಹಗಲೇ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.

ಈ ಕೊಲೆ ಪ್ರಕರಣದ ಅರೋಪಿಗಳನ್ನು ಅತೀ ಶೀಘ್ರ ಬಂಧಿಸುವಂತೆ ಒತ್ತಾಯಿಸಿ ಸ್ಥಳೀಯ ಸಂಘಟನೆಗಳ ಅಶ್ರಯದಲ್ಲಿ ಹಾಗೂ ಡಿವೈಎಫ್‌ಐ ನೇತ್ರತ್ವದಲ್ಲಿ ಹಲವು ಬಾರಿ ಪ್ರತಿಭಟನೆಗಳನ್ನು ನಡೆಸಲಾಗಿತ್ತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English