ಕುಂಬಳೆಯ ವಿದ್ಯಾರ್ಥಿನಿಯ ಆತ್ಮಹತ್ಯೆಗೆ ಸಂಬಂಧಪಟ್ಟ ಮತ್ತೋರ್ವನ ಬಂಧನ

Monday, September 27th, 2021
Vishal Rathod

ಕಾಸರಗೋಡು : ಮಂಗಳೂರಿನ ಖಾಸಗಿ ಕಾಲೇಜು ವಿದ್ಯಾರ್ಥಿನಿಯೋರ್ವಳ ಆತ್ಮಹತ್ಯೆಗೆ ಸಂಬಂಧಪಟ್ಟಂತೆ ಕುಂಬಳೆ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಬಂಧಿತನನ್ನು ಬಿಜಾಪುರದ ಮೂಲದ ವಿಶಾಲ್ ರಾಥೋಡ್ (22) ಎಂದು ಗುರುತಿಸಲಾಗಿದೆ. ಕುಂಬಳೆಯ ಸ್ನೇಹಾ ಎಂಬ ವಿದ್ಯಾರ್ಥಿನಿಯ ಆತ್ಮಹತ್ಯೆಗೆ ಸಂಬಂಧಪಟ್ಟಂತೆ ವಿಶಾಲ್ ನನ್ನು ಬಂಧಿಸಲಾಗಿದೆ. ಸೆ. 17ರಂದು ಸಂಜೆ ಕಾಲೇಜಿನಿಂದ ಮನೆಗೆ ಬಂದಿದ್ದ ಸ್ನೇಹಾ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಮನೆಯಿಂದ ಲಭಿಸಿದ್ದ ಪತ್ರದಲ್ಲಿ ಇಬ್ಬರ ಮೊಬೈಲ್ ನಂಬ್ರ ಹಾಗೂ ಹೆಸರು ಬರೆದಿಡಲಾಗಿತ್ತು. ಇದನ್ನು ಕೇಂದ್ರೀಕರಿಸಿ ತನಿಖೆ ನಡೆಸಿದ ಕುಂಬಳೆ ಠಾಣಾ ಪೊಲೀಸರು […]

ಕುಂಬಳೆ ತಲೆ ಬೇರ್ಪಡಿಸಿ ಕೊಲೆ ; 6 ಆರೋಪಿಗಳ ಬಂಧನ

Friday, May 5th, 2017
Kumble Murder

ಕಾಸರಗೋಡು : ಎ.30ರಂದು ಮೊಗ್ರಾಲ್ ಬಳಿಯ ಪೇರಾಲ್ ನ ಅಬ್ದುಲ್ ಸಲಾಂ (22)ರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 6 ಆರೋಪಿಗಳನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬದ್ರಿಯಾ ನಗರದ ಮಾಂಙಮುಡಿ ಸಿದ್ದಿಕ್ (39), ಪೇರಾಲ್ ನ ಉಮ್ಮರ್ ಫಾರೂಕ್ ಕೆ.ಎಸ್ (29), ಪೆರುವಾಡ್ ನ ಸಹೀರ್ (32), ಪೇರಾಲ್‌ನ ನಿಯಾಝ್ (31), ಬಂಬ್ರಾಣ ಆರಿಕ್ಕಾಡಿಯ ಹಾರಿಸ್ (29) ಹಾಗೂ ಮಾಳಿಯಂಗರ ಕೋಟದ ಲತೀಫ್ (36) ಎಂದು ಗುರುತಿಸಲಾಗಿದೆ. ಈ ಪೈಕಿ ಮಾಂಙಮುಡಿ ಸಿದ್ದೀಕ್ ಬಿ.ಎಂ.ಎಸ್. ಕಾರ್ಯಕರ್ತ, ಆಟೋ […]

ಕುಂಬಳೆ ಪೊಲೀಸರಿಂದ ಗಾಂಜಾ ಸಹಿತ ವ್ಯಕ್ತಿಯ ಬಂಧನ

Tuesday, February 9th, 2016
Sharath Kumar

ಕುಂಬಳೆ: 470 ಗ್ರಾಂ ಗಾಂಜಾ ಸಹಿತ ಸುಳ್ಯ ಕಾಂತಮಂಗಿಲದ ದೇವರಾಯ ಎಂಬವರ ಪುತ್ರ ಶರತ್ ಕುಮಾರ್(54)ನನ್ನು ಶಿರಿಯಾ ಪರಿಸರದಿಂದ ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಭಾನುವಾರ ಸಂಜೆ ಕುಂಬಳೆ ಸಿ.ಐ ಅನೂಪ್ ಕುಮಾರ್ ಗಸ್ತು ತಿರುಗುತ್ತಿದ್ದಾಗ ಸಂಶಯಾಸ್ಪದವಾಗಿ ಶರತ್ ಕುಮಾರನನ್ನು ವಶಕ್ಕೆ ತೆಗೆಯಲಾಯಿತು.ಬಳಿಕ ನಡೆಸಿದ ತಪಾಸಣೆಯಲ್ಲಿ 470 ಗ್ರಾಂ ಗಾಂಜಾ,700 ರೂ.ನಗದು ಪತ್ತೆಹಚ್ಚಲಾಗಿದೆ.ಈ ಹಿನ್ನೆಲೆಯಲ್ಲಿ ಬಂಧಿಸಿ ದೂರು ದಾಖಲಿಸಲಾಗಿದ್ದು ಶರತ್ ಕುಮಾರ್ ನ ವಿರುದ್ದ ಸುಳ್ಯ ಠಾಣೆಯಲ್ಲಿ 2011 ರಲ್ಲಿ ಗಾಂಜಾ ಸಾಗಾಟ ಆರೋಪದ ದೂರು ದಾಖಲಿಸಲಾಗಿತ್ತೆಂದು ತಿಳಿದುಬಂದಿದೆ.

ಪಂಜಿಮೊಗರುವಿನ ತಾಯಿ-ಮಗಳ ಜೋಡಿ ಕೊಲೆ ಓರ್ವ ಆರೋಪಿಯ ಬಂಧನ

Saturday, October 1st, 2011
Double Murder

ಮಂಗಳೂರು : ಮಂಗಳೂರಿನ ಪಂಜಿಮೊಗರುವಿನಲ್ಲಿ ನಡೆದಿದ್ದ ತಾಯಿ-ಮಗಳ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕುಂಬಳೆ ಪೊಲೀಸರು ಓರ್ವನನ್ನು ರೈಲ್ವೇ ನಿಲ್ದಾಣದ ಹೊಟೇಲೊಂದರಿಂದ   ಗುರುವಾರ ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದ ಮೊದಲ ಆರೋಪಿ ಮೂರು ತಿಂಗಳ ನಂತರ ಸೆರೆ ಸಿಕ್ಕಂತಾಗಿದೆ. ಸಕಲೇಶ ಪುರದ ಹಮೀದ್ (35)ಎಂಬಾತನನ್ನು ಕುಂಬಳೆ ಪೊಲೀಸರು ಪ್ರಕರಣಕ್ಕೆ ಸಂಬಂದಿಸಿದಂತೆ ವಶಕ್ಕೆ ಪಡೆದು ಕೊಂಡಿದ್ದಾರೆ. ಬಂಧನ ಮಾಹಿತಿ ಲಭಿಸಿದ ತಕ್ಷಣ ಮಂಗಳೂರು ಫೊಲೀಸರು ಕುಂಬಳೆ ಠಾಣೆಗೆ ತೆರಳಿ ಅಲ್ಲಿಂದ ಹಮೀದ್‌ನನ್ನು ಮಂಗಳೂರಿಗೆ ಕರೆತಂದಿದ್ದಾರೆ. ಈತ ಒಂದು ತಿಂಗಳ ಹಿಂದೆ […]