ಪದವಿ ತರಗತಿಗಳಲ್ಲಿ ತುಳುವನ್ನು ಒಂದು ಭಾಷೆಯಾಗಿ ಆಯ್ಕೆ ಮಾಡಿಕೊಳ್ಳಲು ತುಳು ಅಕಾಡೆಮಿ ಅಧ್ಯಕ್ಷರ ಮನವಿ

2:42 PM, Tuesday, June 4th, 2019
Share
1 Star2 Stars3 Stars4 Stars5 Stars
(No Ratings Yet)
Loading...

AC-bhandaryಮಂಗಳೂರು : ವಿಶ್ವವಿದ್ಯಾನಿಲಯ ವ್ಯಾಪ್ತಿಯ ಪದವಿ ಕಾಲೇಜುಗಳಲ್ಲಿ ಒಂದು ಐಚ್ಛಿಕ ಭಾಷೆಯಾಗಿ ಅಧ್ಯಯನ ಮಾಡಲು ಅವಕಾಶ ಕಲ್ಪಿಸಲಾಗಿದೆ. 2019-20 ನೇ ಸಾಲಿನಲ್ಲಿ ತುಳುವನ್ನು ಒಂದು ಭಾಷೆಯಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿ ಮಂಗಳೂರು ವಿಶ್ವವಿದ್ಯಾನಿಲಯ ಆದೇಶ ಹೊರಡಿಸಿದೆ. ಪದವಿ ವಿದ್ಯಾರ್ಥಿಗಳು ತುಳು ಭಾಷೆ, ಸಂಸ್ಕೃತಿಯನ್ನು ಅಭ್ಯಾಸ ಮಾಡುವ ಘನ ಉದ್ದೇಶದಿಂದ ತುಳುಭಾಷೆಯನ್ನು ಒಂದು ಭಾಷಾ ವಿಷಯವಾಗಿ ಕಲಿಯಲು ಮಂಗಳೂರು ವಿಶ್ವವಿದ್ಯಾನಿಲಯ ಅವಕಾಶ ಮಾಡಿಕೊಟ್ಟಿರುವುದು ಅಭಿನಂದನೀಯ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ತುಳು ಭಾಷೆಯನ್ನು ಕಾಲೇಜುಗಳಲ್ಲಿ ಅನುಷ್ಠಾನಗೊಳಿಸುವ ಸಲುವಾಗಿ ವಿಶ್ವವಿದ್ಯಾನಿಲಯವು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಕಾರದೊಂದಿಗೆ ಎಲ್ಲಾ ಸಿದ್ಧತೆಗಳನ್ನು ಕೈಗೊಂಡಿರುತ್ತದೆ. ಈಗಾಗಲೇ ಕೆಲವೊಂದು ಕಾಲೇಜುಗಳು ಮತ್ತು ಆಡಳಿತ ಮಂಡಳಿಯ ಮುಖ್ಯಸ್ಥರು ಈ ಬಗ್ಗೆ ಆಸಕ್ತಿಯನ್ನು ವ್ಯಕ್ತಪಡಿಸಿ ಕಾಲೇಜು ಶಿಕ್ಷಣ ಇಲಾಖೆಯ ಅನುಮೋದನೆ ಕೋರಿರುತ್ತಾರೆ.

ಕಾಲೇಜು ಆರಂಭವಾಗಲು ಇನ್ನು ಕೆಲವೇ ದಿನಗಳು ಬಾಕಿಯಿದ್ದು ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪತಿಯ ಕಾಲೇಜುಗಳ ಪ್ರ್ರಾಂಶುಪಾಲರು ಮತ್ತು ಆಡಳಿತ ಮಂಡಳಿಯವರು ಒಂದು ಭಾಷಾ ವಿಷಯವಾಗಿ ತುಳುವನ್ನು ಅಳವಡಿಸಲು ಸಂಬಂಧಿತ ಮೇಧಿಕಾರಿಗಳಿಂದ ಅಂಗೀಕಾರ ಪಡೆದುಕೊಳ್ಳುವುದರ ಮೂಲಕ ತುಳುನಾಡಿನ ವಿದ್ಯಾರ್ಥಿಗಳಿಗೆ ತಮ್ಮ ಮಾತೃ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತಾದ ವಿಚಾರಗಳನ್ನು ಆಳವಾದಿ ಅಧ್ಯಯನ ಮಾಡುವ ಅವಕಾಶವನ್ನು ಒದಗಿಸಿ ಕೊಡುವಂತೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎ.ಸಿ. ಭಂಡಾರಿಯವರು ವಿನಂತಿಸಿದ್ದಾರೆ.

ಈ ನಿಟ್ಟಿನಲ್ಲಿ ಸ್ನಾತಕೋತ್ತರ ಕನ್ನಡ ವಿಭಾಗದ ಅಧ್ಯಯನ ಮಂಡಳಿಯ ಅಧ್ಯಕ್ಷರಾದ ಪ್ರೊ. ಶಿವರಾಮ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ತುಳುಭಾಷೆ ಕಲಿಕೆಗೆ ಅವಶ್ಯಕವಾದ ಪಠ್ಯಪುಸ್ತಕವನ್ನು ರಚಿಸಲು ವಿ.ವಿ.ವ್ಯಾಪ್ತಿಯ ಪ್ರಾಧ್ಯಾಪಕರನ್ನೊಳಗೊಂಡ ಪಠ್ಯಪುಸ್ತಕ ರಚನಾ ಸಮಿತಿಯು ನಿರಂತ ಶ್ರಮವಹಿಸಿ ಪಠ್ಯ ಪುಸ್ತಕವನ್ನು ಸಿದ್ಧಪಡಿಸಿದೆ. ಪಠ್ಯ ಪುಸ್ತಕವು ವಿಶ್ವವಿದ್ಯಾನಿಲಯದ ನಿಯಮಾನುಸಾರ ಅನುಮೋದಿತ ಪಠ್ಯ ವಸ್ತುವನ್ನು ಒಳಗೊಂಡಿರುತ್ತದೆ. ಮತ್ತು ಸಕಾಲದಲ್ಲಿ ಮುದ್ರಣಗೊಂಡು ವಿದ್ಯಾರ್ಥಿಗಳ ಕೈಸೇರಲಿರುವುದಾಗಿ ಅಕಾಡೆಮಿಯ ಅಧ್ಯಕ್ಷರು ತಿಳಿಸಿರುತ್ತಾರೆ. ತುಳು ಭಾಷಿಕರ ಮತ್ತು ತುಳು ಸಾಹಿತ್ಯಾಭಿಮಾನಿಗಳ ಬಹುಕಾಲದ ಬೇಡಿಕೆಯೊಂದನ್ನು ವಿಶ್ವವಿದ್ಯಾನಿಲಯವು ಈಡೇರಿಸಿರುವ ಈ ಸಂದರ್ಭದಲ್ಲಿ ಶಾಲಾ ಕಾಲೇಜುಗಳ ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳು ತುಳು ಭಾಷಾ ಅಧ್ಯಯನಕ್ಕೆ ಸಂಪೂರ್ಣ ಸಹಕಾರ ಮತ್ತು ಪ್ರೋತ್ಸಾಹವನ್ನು ನೀಡಬೇಕೆಂದು ಅಕಾಡೆಮಿ ಅಧ್ಯಕ್ಷರಾದ ಎ.ಸಿ. ಭಂಡಾರಿಯವರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English