ಶ್ರೀ ಕಾವಿ ಸುಬ್ರಹ್ಮಣ್ಯ ದೇವರ ‘ವರ್ಕಾಡಿದ ಬ್ರಹ್ಮಕಲಶೋತ್ಸವ’ ತುಳು ಭಕ್ತಿಗೀತೆ ಬಿಡುಗಡೆ

2:42 PM, Monday, February 19th, 2024
Share
1 Star2 Stars3 Stars4 Stars5 Stars
(10 rating, 2 votes)
Loading...

ವರ್ಕಾಡಿ : ಶ್ರೀ ಕಾವಿ ಸುಬ್ರಹ್ಮಣ್ಯ ದೇವಸ್ಥಾನ ವರ್ಕಾಡಿ ಮಂಜೇಶ್ವರ ಇದರ ಬ್ರಹ್ಮಕಲಶೋತ್ಸವದ ಭಕ್ತಿಗೀತೆಯನ್ನು ಶ್ರೀ ಕಾವಿ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸುಭಾಷ್ ಅಡಪ ಕಲ್ಲೂರು ಇವರು ದೇವಸ್ಥಾನದಲ್ಲಿ ಬಿಡುಗಡೆ ಗೊಳಿಸಿದರು.

ಬ್ರಹ್ಮಕಲಶೋತ್ಸವದ ಈ ಶುಭ ಸಂದರ್ಭದಲ್ಲಿ ಶ್ರೀ ಕಾವಿ ಸುಬ್ರಹ್ಮಣ್ಯ ದೇವರ ಭಕ್ತಿ ಸ್ತುತಿಯನ್ನು ಶಿವಪ್ರಸಾದ್ ತೌಡುಗೋಳಿ ಅವರು ತನ್ನ ಸಾಹಿತ್ಯದ ಸೇವೆ ಮೂಲಕ ಬರೆದು ದೇವರಿಗೆ ಅರ್ಪಣೆ ಮಾಡಿದ್ದಾರೆ. ಅವರಿಗೆ ಇನ್ನಷ್ಟು ಸಾಹಿತ್ಯ ಬರೆಯುವ ಶಕ್ತಿಯನ್ನು ಶ್ರೀ ಕಾವಿ ಸುಬ್ರಹ್ಮಣ್ಯ ಸ್ವಾಮಿ ಕರುಣಿಸಲಿ ಎಂದು ಹಾರೈಸಿದರು.

ಈ ಸಂದರ್ಭ ಶ್ರೀ ಕಾವಿ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಪ್ರಭಾಕರ ರೈ ಕಲ್ಪನೆ, ಗಣೇಶ್ ಶೆಟ್ಟಿ ಅಲಬೆ, ರಾಮಣ್ಣ ಶೆಟ್ಟಿ ಅಳಬೆ, ಸುಧಾಕರ ಕೊಡ್ಲಮೊಗರು, ಸೋಮನಾಥ ಕಾರಂತ, ಸತೀಶ್ ಆಳ್ವ ಮಡ್ವಬೀಡು, ಐತಪ್ಪಶೆಟ್ಟಿ ಕೊಂಡೆವೂರು, ವಾಸುದೇವ ಮಯ್ಯ ವರ್ಕಾಡಿ, ತುಕಾರಾಂ ದೇವಾಡಿಗ ವರ್ಕಾಡಿ ಉಪಸ್ಥಿತರಿದ್ದರು.

‘ವರ್ಕಾಡಿದ ಬ್ರಹ್ಮಕಲಶೋತ್ಸವ’ ತುಳು ಭಕ್ತಿಗೀತೆಗೆ ಶಿವಪ್ರಸಾದ್ ತೌಡುಗೋಳಿ ಸಾಹಿತ್ಯ ದಲ್ಲಿ ಮೂಡಿ ಬಂದಿದ್ದು, ಸಂತೋಷ್ ಪುಚ್ಚೆರ್ ತನ್ನ ಸುಮಧುರ ಕಂಠಸಿರಿ ಯಲ್ಲಿ ಹಾಡಿದ್ದಾರೆ, ಭಕ್ತಿಗೀತೆಯನ್ನು ಮೇಗಾ ಮೀಡಿಯಾ ಎಂಟರ್ಟೈನ್ ಮೆಂಟ್ಸ್ ನಿರ್ಮಾಣ ಮಾಡಿದ್ದು, ಪುಚ್ಚೆರ್ ಟ್ಯಾಬ್ ಸ್ಟುಡಿಯೋದಲ್ಲಿ ರೆಕೊರ್ಡಿಂಗ್ ಮಾಡಲಾಗಿದೆ. ಈ ಹಾಡು ಮೇಗಾ ಮೀಡಿಯಾ ನ್ಯೂಸ್ ಯೌಟ್ಯೂಬ್ ಚಾನಲ್ ನಲ್ಲಿ ಪ್ರಸಾರಗೊಳ್ಳಲಿದೆ. ವರ್ಕಾಡಿ ಶ್ರೀ ಕಾವಿ ಸುಬ್ರಹ್ಮಣ್ಯ ದೇವರ ಮತ್ತೊಂದು ಹಾಡು ಶಿವಪ್ರಸಾದ್ ತೌಡುಗೋಳಿ ಸಾಹಿತ್ಯದ ‘ಕಾವೀದ ಪುಣೋತ್ಸವ’ ಮೇಗಾ ಮೀಡಿಯಾ ನ್ಯೂಸ್ ಯೌಟ್ಯೂಬ್ ಚಾನಲ್ ನಲ್ಲಿ ಶೀಘ್ರದಲ್ಲೇ ಪ್ರಸಾರಗೊಳ್ಳಲಿದೆ.

‘ವರ್ಕಾಡಿದ ಬ್ರಹ್ಮಕಲಶೋತ್ಸವ’ ಹಾಡು ಮೇಗಾ ಮೀಡಿಯಾ ನ್ಯೂಸ್ ಯೌಟ್ಯೂಬ್ ಚಾನಲ್ ಫೆಬ್ರವರಿ 19 ಸೋಮವಾರ ರಾತ್ರಿ 8.30 ಕ್ಕೆ ಪ್ರೀಮಿಯರ್ ಗೊಳ್ಳಲಿದೆ.

‘ವರ್ಕಾಡಿದ ಬ್ರಹ್ಮಕಲಶೋತ್ಸವ’ ತುಳು ಭಕ್ತಿಗೀತೆ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English