ಮಂಗಳೂರು : ಮೇಯರ್ – ಉಪ ಮೇಯರ್ ಯಾರು?

1:34 PM, Monday, March 25th, 2013
Share
1 Star2 Stars3 Stars4 Stars5 Stars
(No Ratings Yet)
Loading...

Mayorಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ 6ನೆ ಅವಧಿಯ ಮೇಯರ್-ಉಪಮೇಯರ್ ಯಾರು ಎಂಬ ಪ್ರಶ್ನೆ ಇದೀಗ ಸಾರ್ವಜನಿಕರಿಗೆ ಬಲವಾಗಿ ಕಾಡುತ್ತಿದೆ. ಅದಕ್ಕೂ ಮೊದಲು ರಾಜ್ಯ ಸರಕಾರ ಮೇಯರ್-ಉಪಮೇಯರ್ ಸ್ಥಾನದ ಮೀಸಲಾತಿ ಪ್ರಕಟಿಸಬೇಕು. ಬಳಿಕ ಈ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಆದರೆ ರಾಜ್ಯ ವಿಧಾನ ಸಭೆಯ ಚುನಾವಣೆಗೆ ಸಂಬಂಧಿಸಿದಂತೆ ಆಯೋಗ ನೀತಿ ಸಂಹಿತೆ ಪ್ರಕಟಿಸಿದರೆ ಮೇಯರ್- ಉಪಮೇಯರ್ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿದರೂ ಚುನಾವಣೆ ನಡೆಸುವಂತಿಲ್ಲ.

ನೀತಿ ಸಂಹಿತೆ ಮುಗಿದ ಬಳಿಕ ಕಾರ್ಪೋರೇಟರ್ ಗಳು ಸಭೆ ಸೇರಿ ಮೇಯರ್- ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಸಬಹುದಾಗಿದೆ. ಮೊದಲ ಸಭೆ ಸೇರಿದ ದಿನದಿಂದ ಚುನಾಯಿತ ಪ್ರತಿನಿಧಿಗಳು `ಕಾರ್ಪೋರೇಟರ್’ಗಳಿಗೆ ಲಭ್ಯವಾಗುವ ಎಲ್ಲ ಸೌಲಭ್ಯಗಳನ್ನು ಪಡೆಯಲಿದ್ದಾರೆ. ಅಲ್ಲದೆ ಆ ಸಭೆಯ ದಿನದಿಂದ 5 ವರ್ಷದ ಅವಧಿಯ ಲೆಕ್ಕಾಚಾರ ಆರಂಭಗೊಳ್ಳಲಿದೆ.

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ 35, ಬಿಜೆಪಿ 20, ಜೆಡಿಎಸ್ 2, ಎಸ್ಡಿಪಿಐ 1, ಸಿಪಿಎಂ 1, ಪಕ್ಷೇತರ 1 (ಬಿಜೆಪಿ ಬಂಡಾಯ) ಸ್ಥಾನ ಗೆದ್ದಿದ್ದು, ನಿರೀಕ್ಷೆಯಂತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ  ಮೇಯರ್-ಉಪಮೇಯರ್ ಆಗಲಿದ್ದಾರೆ.

6 ಬಾರಿ ಗೆದ್ದ ಈ ಹಿಂದೆ ಉಪಮೇಯರ್ ಕೂಡ ಆಗಿದ್ದ ಲ್ಯಾನ್ಸಿ ಲಾಟ್ ಪಿಂಟೋ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಮಾಜಿ ಉಪಮೇಯರ್ ಹರಿನಾಥ್, ನವೀನ್, ಡಿಸೋಜ,ಭಸ್ಕರ ಕೆ. ಜೆಸಿಂತ ವಿಜಯ ಆಲ್ಫ್ರೆಡ್, ಅಬ್ದುಲ್ ರವೂಫ್, ಮಹಾಬಲ ಮಾರ್ಲ,ಅಪ್ಪಿ,ಅಶೋಕ್ ಕುಮಾರ್ ಡಿ.ಕೆ., ದೀಪಕ್ ಪೂಜಾರಿಯ  ಹೆಸರು ಮೇಯರ್ -ಉಪಮೇಯರ್ ಸ್ಥಾನಕ್ಕೆ ಕೇಳಿ ಬರುತ್ತಿದೆ.ಆದರೆ ಎಲ್ಲವೂ ಮೀಸಲಾತಿಯನ್ನು ಅನ್ವಯಿಸಿ ಲಾಬಿ ನಡೆಯಲಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English